ಕನನಡ ಸಸಕತ ಹಗ ಸತರವದ ಚತನಯ ತತವಕ ನಲಗಳ
Abstract
ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ ‘ಹೆಣ್ಣು’ ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ.ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ - ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡೀ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ.ತೊಂಬತ್ತರ ದಶಕದಲ್ಲಿ ಕನ್ನಡ ವಿಮರ್ಶಾ ಲೋಕಕ್ಕೆ ಸ್ತ್ರೀವಾದಿ ವಿಮರ್ಶೆಯ ಪ್ರವೇಶ ಅಧಿಕೃತವಾಗಿ ಆಗಿದೆ. ಸಾಹಿತ್ಯ ಕೃತಿಯ ವಿಮರ್ಶೆಗೆ ಅಲ್ಲಿಯವರೆಗೆ ಇದ್ದ ವಿವಿಧ ಮಾನದಂಡಗಳ ಜೊತೆಗೆ ಸ್ತ್ರೀವಾದವು ಇನ್ನೊಂದು ಮಾನದಂಡವೆಂದು ಭಾವಿಸಲಾಯಿತು. ಮಾರ್ಕ್ಸ್ ವಾದಿ ಮತ್ತು ಸಮಾಜವಾದಿ ವಿಮರ್ಶಾ ಸಿದ್ಧಾಂತದ ಭಾಗವಾಗಿಯೇ ಸ್ತ್ರೀವಾದಿ ವಿಮರ್ಶೆಯ ಉಗಮವನ್ನು ಗುರುತಿಸಬಹುದಾಗಿದೆ. ಕನ್ನಡದ ವಿವಿಧ ಕಾಲಘಟ್ಟದ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀವಾದಿ ನೆಲೆಗಳನ್ನು ಗುರುತಿಸುವ ಕೆಲಸಗಳನ್ನು ನಾವು ಇಂದು ಕಾಣಬಹುದಾಗಿದೆ. ಅನಂತರದಲ್ಲಿ ಪಾಶ್ಚಾತ್ಯ ಸ್ತ್ರೀವಾದಿ ಚಿಂತಕಿಯರು ಮತ್ತು ಅವರ ಚಿಂತನೆಯ ಮುಖ್ಯ ಅಂಶಗಳನ್ನು ಕನ್ನಡಿಗರಿಗೆ ಪರಿಚಯಿಸುವಂಥ ಕಾರ್ಯವನ್ನು ಕಾಣುತ್ತೇವೆ. ಈ ಕೆಲಸಗಳು ವೈಯಕ್ತಿಕ ನೆಲೆ ಹಾಗೂ ಸಾಂಘಿಕ ನೆಲೆಗಳಲ್ಲಿ ಏಕಕಾಲಕ್ಕೆ ಸಾಗಿದವು. ವಿಜಯಾ ದಬ್ಬೆ, ಬಿ.ಎನ್. ಸುಮಿತ್ರಾ ಬಾಯಿ, ನೇಮಿಚಂದ್ರ, ಎನ್. ಗಾಯಿತ್ರಿ ಮುಂತಾದವರು ಹೊಸ ಅಲೆಯ ವಿಮರ್ಶಾ ವಿಧಾನಕ್ಕೆ ಭದ್ರ ಬುನಾದಿಯನ್ನು ಹಾಕಿದರು.ಪಿತೃಪ್ರಧಾನ ಸಂಸ್ಕೃತಿಯ ಪರಿಪಾಲಕರಿಂದ ಕಸಿದುಕೊಳ್ಳಲ್ಪಟ್ಟ, ಕಟ್ಟಿಹಾಕಲ್ಪಟ್ಟ ಮನುಷ್ಯ ಸಹಜವಾದ ಮೂಲಭೂತ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿಕೊಳ್ಳುವಲ್ಲಿ, ಪಡೆದುಕೊಳ್ಳುವಲ್ಲಿ, ಮಹಿಳೆಯರು ಮತ್ತು ಶೋಷಿತ ವರ್ಗದವರು ನಡೆಸುವ ಹೋರಾಟವೇ ಸ್ತ್ರೀವಾದ. ಮಾನವನು ಸಮಾನತೆಯ ತತ್ವದಡಿಯಲ್ಲಿ ಉತ್ತಮ ಜೀವನ ನಿರ್ವಹಿಸಲು ಅಗತ್ಯವಾದ ಭೂಮಿಕೆಯನ್ನು ಸ್ತ್ರೀವಾದವು ನಿರ್ಮಿಸಿಕೊಡಲು ಪ್ರಯತ್ನಿಸುತ್ತದೆ. ಹಾಗೂ ಬದುಕಿನ ರೀತಿ-ನೀತಿಗಳನ್ನು ಪುನರ್ ವಿಶ್ಲೇಷಣೆಗೆ ಒಳಪಡಿಸುತ್ತದೆ. ಸ್ತ್ರೀವಾದದ ಮೇಲಿರುವ ಪಿತೃಪ್ರಧಾನ ವ್ಯವಸ್ಥೆಯನ್ನು ಅನುಕರಿಸುವವರ ಅಪಪ್ರಚಾರಗಳ ಹೊರತಾಗಿಯೂ, ಭವಿಷ್ಯದ ಪ್ರಜ್ವಲತೆಗಾಗಿ ಹೋರಾಟದ ಹಾದಿಯಲ್ಲಿ ಸಮಾನತೆಯ ಗುರಿಯೆಡೆಗೆ ಸ್ತ್ರೀವಾದಿಗಳು ಸಾಗುತ್ತಿದ್ದಾರೆ.
Fields of Study & Subjects
Linguistics and Cultural Studies
Indian and Buddhist Studies
Literary Theory and Cultural Hermeneutics
Publication details
- Journal / source
- Zenodo (CERN European Organization for Nuclear Research)
- Publication date
- 15 January 2026
- Language
- KN