ದಸಯ ಭಷಗಳ: ಸಹತಯ ಮತತ ಸಸಕತ

Read full text
Authors: ಶ್ರೀಮತಿ ಮಹಾದೇವಿ ಶಿ. ಪೂಜಾರಿ
Cited by: 0

Abstract

ಜಗತ್ತಿನ ಸಾವಿರಾರು ಭಾಷೆಗಳಲ್ಲಿ ಭಾರತೀಯ ಭಾಷೆಗಳು ತನ್ನದೇ ಆದ ಮನ್ನಣೆಗಳನ್ನು ಪಡೆದಿವೆ. ನಾಗರಿಕತೆಯ ಕಾಲದಿಂದ ಮನುಷ್ಯನಿಗೆ ಜನಭಾಷೆ ಮತ್ತು ಸಾಹಿತ್ಯ-ಸಂಸ್ಕೃತಿಯ ಹಿನ್ನೆಲೆಯ ನಂಟುತನವಿದೆ. ಜನಭಾಷೆ ಅಂದರೆ ದೇಸಿಯ ಭಾಷೆ. ವಿಶೇಷವಾಗಿ ದೇಸಿಯ ಅಥವಾ ಪ್ರಾದೇಶಿಕ ಭಾಷೆಯ ಆಂತರ್ಯದಲ್ಲಿ ಸಂಸ್ಕೃತಿಯು ತನ್ನ ಚಹರೆಯನ್ನು ಹೊಂದಿರುತ್ತದೆ. ಲೋಕಜೀವದ ಎಲ್ಲಾ ಅಂಶಗಳನ್ನು ಆವಿರ್ಭವಿಸಿಕೊಂಡಿರುವ ಸಂಸ್ಕೃತಿಯು ಜನಜೀವನದ ಮೂರ್ತರೂಪದ ಚಿತ್ರಣವನ್ನು ತೋರ್ಪಡಿಸುತ್ತದೆ. ಜನಜೀವನದ ಆರ್ತತೆಯು ಸಂಸ್ಕೃತಿಯಲ್ಲಿದ್ದರೆ, ಅಭಿವ್ಯಕ್ತಿಯು ಭಾಷೆಯಲ್ಲಿ ಅಡಕವಾಗಿರುತ್ತವೆ. ಲೋಕದಲ್ಲಿ ಬದುಕು ನಿರ್ಮಿತವಾಗಿರುವುದು ಭಾಷೆಯನ್ನು ಅನುಸರಿಸಿ. ಭಾಷೆಯೊಂದರ ತಳಹದಿಯಲ್ಲಿ ಸಂಸ್ಕೃತಿ ರೂಪುಪಡೆದಿರುತ್ತದೆ. ಭಾರತೀಯ ಭಾಷೆ ಮತ್ತು ಸಂಸ್ಕೃತಿಯು ವಿಶಿಷ್ಟ ಮತ್ತು ವಿಭಿನ್ನ. ಭಾರತದ ದೇಶೀಯ ಭಾಷೆಗಳು ಸಾಂಸ್ಕೃತಿಕವಾಗಿ ಬಹಳ ಪ್ರಬುದ್ಧವಾದದ್ದು. ಸಾಮಾನ್ಯವಾಗಿ ಸಂಸ್ಕೃತಿಯು ಭಾಷೆಯೊಳಗೆ ಅಂತರ್ಗತವಾಗಿದೆ. ಭಾಷೆಯು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸಂಸ್ಕೃತ ಮತ್ತು ಪ್ರಾಕೃತ ಪ್ರಾಚೀನ ಭಾಷೆಗಳಾದರೆ- ಹಿಂದಿ, ಬಂಗಾಳಿ, ಮರಾಠಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಂತಹ ಆಧುನಿಕ ಭಾರತೀಯ ಭಾಷೆಗಳು ತನ್ನದೇ ಆದ ಜನಸಮುದಾಯದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಂದಿದೆ. ವಿಶೇಷವಾಗಿ ದೇಸಿಯ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ತುಳು ಭಾಷೆಯ ಸಮೃದ್ಧವಾದ ಸಾಹಿತ್ಯ ಮತ್ತು ಸಂಸ್ಕೃತಿಯ ಸಾಂಸ್ಕೃತಿಕ ಮಹತ್ವವನ್ನು ಇಲ್ಲಿ ಚರ್ಚಿಸಲು ಯತ್ನಿಸುತ್ತೇನೆ. ಇಲ್ಲಿ ನಾನು ದ್ರಾವಿಡ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯು ಬೆಳೆದುಬಂದಿರುವುದನ್ನು ಸೂಕ್ಷ್ಮವಾಗಿ ಹೇಳುತ್ತ, ದೇಸಿಯ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯ ವಿಚಾರವನ್ನು ಪ್ರಧಾನವಾಗಿ ಪರಿಗಣಿಸುತ್ತೇನೆ.

Fields of Study & Subjects

South Asian Studies and Diaspora Indian and Buddhist Studies Literary Theory and Cultural Hermeneutics

Publication details

Journal / source
Zenodo (CERN European Organization for Nuclear Research)
Publication date
15 January 2026
Language
KN