ಕಲಕಸಬನ ವಚನಕರರ
Abstract
ವಚನ ಸಾಹಿತ್ಯ ಕನ್ನಡದ ಹೆಮ್ಮೆಯ ಹಾಗೂ ಕ್ರಾಂತಿಯ ಯುಗವಾಗಿತ್ತು. ಸಾಹಿತ್ಯ ವೈಭವದ ಗದ್ದುಗೆಯನ್ನು ಬಿಟ್ಟು ಸಾಮಾನ್ಯರ ಬಳಿ ನಡೆದ ಕಾಲವದು. ಜನಸಾಮಾನ್ಯರ ವಾಣಿಯಿಂದ ಸಾಹಿತ್ಯ ರಚನೆ ಅಷ್ಟೇ ಅಲ್ಲದೆ ಜೀವನ ತತ್ವ, ನೈತಿಕತೆ, ಸಾಮಾಜಿಕ ನ್ಯಾಯ, ಶ್ರಮದ ಸಮಾನತೆಯನ್ನು ಕೇಂದ್ರವಾಗಿಸಿ ಎಲ್ಲಾ ಜಾತಿಯ ಹಾಗೂ ಎಲ್ಲಾ ವೃತ್ತಿಯವರನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಶ್ರಮದಿಂದ ಜೀವನ ಕಟ್ಟಿಕೊಳ್ಳುವುದು ಹೀನವಲ್ಲ, ಅದೊಂದು ಪವಿತ್ರ ಕಾರ್ಯವೆಂದು ಭಾವಿಸಿದವರು ಕುಲಕಸುಬಿನವರು. ಕುಲಕ್ಕೆ ತಕ್ಕಂತೆ ಒಂದೊಂದು ವೃತ್ತಿಯನ್ನು ಮಾಡುವವರನ್ನು ಶ್ರೇಷ್ಠ-ಕನಿಷ್ಠ ಎನ್ನದೆ ಗೌರವವನ್ನು ನೀಡಿ ಶ್ರಮ ಮತ್ತು ಮಾನವ ಮೌಲ್ಯಗಳನ್ನು ಉತ್ತೇಜಿಸಲಾಯಿತು.ಲಿಂಗ ಭೇದವಿಲ್ಲದ, ಜಾತಿಭೇದವಿಲ್ಲದ ಆದರ್ಶದ ತತ್ವಗಳನ್ನು ವಚನಗಳಲ್ಲಿ ಕಾಣಬಹುದು. ಇಲ್ಲಿ ಕಾಯಕವೆನ್ನುವುದು ಕೇವಲ ಭೌತಿಕ ಕ್ರಿಯೆಯಲ್ಲ, ಆತ್ಮದೊಳಗಣ ಜ್ಞಾನ. ಲಿಂಗ ಪೂಜೆ ಮತ್ತು ಕಾಯಕಗಳು ಎರಡು ಸಮಾನವಾದವು. “ಕಾಯಕದಲ್ಲಿ ನಿರತನಾದವನು ಲಿಂಗಪೂಜೆಯನ್ನಾದರೂ ಮರೆಯಬೇಕು” ಎನ್ನುವ ಶರಣರ ನುಡಿಗಳು ಹೆಚ್ಚು ಆಕರ್ಷಿತವಾದವು.ಶರಣರು ಉದಯವಾಗುವ ಹೊತ್ತಿಗೆ ಬೌದ್ಧಿಕ ವೃತ್ತಿ ಶ್ರೇಷ್ಠ, ದೈಹಿಕ ವೃತ್ತಿ ಕನಿಷ್ಠವೆಂಬ ಮೇಲು-ಕೀಳು ಬೆಳೆದು ನಿಂತು ಮಾನ-ಅಪಮಾನದ ಬಣ್ಣ ಪಡೆದಿತ್ತು. ಈ ಕೃತಕ ತಾರತಮ್ಯವನ್ನು ಅಲ್ಲಗಳೆದು ವೃತ್ತಿಯಲ್ಲಿ ಸಮಾನತೆಯನ್ನು ಸಾರಿದರು. ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಮುಂತಾದ ವಚನಕಾರರನ್ನು ಕಾಣಬಹುದು.
Fields of Study & Subjects
Classical Studies and Philology
German Literature and Culture Studies
History and Cultural Heritage
Publication details
- Journal / source
- Zenodo (CERN European Organization for Nuclear Research)
- Publication date
- 5 January 2026
- Language
- KN