ವಚನವಬ ಅನಭವ ಸಹತಯ

Read full text
Authors: ಡಾ. ಮಹಾದೇವಿ ಹೆಬ್ಬಾಳೆ
Cited by: 0

Abstract

12ನೇ ಶತಮಾನ ಸಾಹಿತಿಕ ದೃಷ್ಠಿಯಲ್ಲಿ ಗಮನಿಸುವುದಾದರೆ ‘ವಚನ’ ಎಂಬ ಕಾವ್ಯರೂಪ ಸಾಹಿತ್ಯಿಕ ಜಗತ್ತಿಗೆ ಪರಿಚಯವಾದ ಕಾಲ. ಬೇರೆ ಯಾವುದೇ ಸಾಹಿತ್ಯ ರೂಪದ ಮಾದರಿಯನ್ನು ಅನುಕರಿಸದೆ ಇರುವ ಗದ್ಯವೂ ಮತ್ತು ಪದ್ಯಗಳೆರಡನ್ನು ಹೋಲುವ ಅಪರೂಪದ ಸಾಹಿತ್ಯ ರೂಪ. ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿದೆ. “ಅನ್ಯ ಭಾಷೆಗಳ ಯಾವುದೇ ಮಾದರಿಯನ್ನು ಯಾವುದೇ ದೃಷ್ಠಿಯಿಂದಲೂ ಅನುಕರಿಸದೇ ಅಥವಾ ಆದರ್ಶವಾಗಿಟ್ಟುಕೊಳ್ಳದೇ ಕೇವಲ ಅನುಭಾದಿಂದಲೇ ಮೂಡಿ ರೂಪಿತವಾದ ಈ ಪ್ರಕಾರ ಕನ್ನಡದ ಹೆಮ್ಮೆಯಾಗಿದೆ” ಎಂದು ಖ್ಯಾತ ಸಂಶೋಧಕ ಚಿದಾನಂದ ಮೂರ್ತಿಯವರು ನುಡಿದಿದ್ದಾರೆ. ನಿಜಕ್ಕೂ ವಚನಗಳು ಕಾಲ್ಪನಿಕತೆಯಿಂದ ಬಲು ದೂರ ಶರಣರ ಜೀವನದ ಅನುಭವದ ಪ್ರತಿಕಗಳಾಗಿವೆ. ಅನುಭವದಿಂದ ಅನುಭಾವ ಸಾಧ್ಯ ಹೊರತು ಕಲ್ಪನೆಯಿಂದಲ್ಲ. ಆದುದರಿಂದಲೇ ಇದಕ್ಕೆ ಶರಣರ ಅನುಭಾವ ಸಾಹಿತ್ಯ ಎಂತಲೂ ಕರೆಯಬಹುದು ‘ವಚನ’ ಎಂದರೆ ಮಾತು, ಆಣೆ, ಪ್ರಮಾಣ, ಎಂಬರ್ಥಗಳನ್ನೊಳಗೊಂಡಿದ್ದರೂ ವಚನವೆಂದರೆ ಕೇವಲ ಆಡುವ ಮಾತಾಗಿರದೆ “ಕೊಟ್ಟಮಾತು” ಆಗಿದೆ.

Fields of Study & Subjects

Indian and Buddhist Studies Historical and Literary Analyses South Asian Studies and Diaspora

Publication details

Journal / source
Zenodo (CERN European Organization for Nuclear Research)
Publication date
22 July 2026