ಹಸತಲಮರನ ಕನನಡ ಸಣಣಕತಗಳ: ಕಟಬದ ಪರಕಲಪನ

Read full text
Authors: ಕಿರಣಕುಮಾರ್ ಹೆಚ್.ಜಿ.
Cited by: 0

Abstract

ಕನ್ನಡ ಸಾಹಿತ್ಯದ ಸಣ್ಣಕತೆಗಳು ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿವೆ. ಜಾಗತೀಕರಣ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ, ಭಾರತೀಯ ಪರಂಪರೆಯ ಅವಿಭಕ್ತ ಕುಟುಂಬ ವ್ಯವಸ್ಥೆಯು ಕುಸಿಯುತ್ತಿದ್ದು, ವಿಭಕ್ತ ಕುಟುಂಬಗಳೂ ಛಿದ್ರಗೊಂಡು ವ್ಯಕ್ತಿಗತ ಬದುಕಿನತ್ತ ಸಾಗುತ್ತಿವೆ. ಶಿಕ್ಷಣ, ಉದ್ಯೋಗ, ಆಸ್ತಿ ವ್ಯಾಮೋಹ ಹಾಗೂ ಮೂಢನಂಬಿಕೆಗಳು ರಕ್ತಸಂಬಂಧಗಳ ನಡುವಿನ ಭಾವನಾತ್ಮಕ ಬೆಸುಗೆಯನ್ನು ಹೇಗೆ ಸಡಿಲಗೊಳಿಸುತ್ತಿವೆ ಎಂಬುದನ್ನು ಅಮರೇಶ ನುಗಡೋಣಿ, ವಸುಧೇಂದ್ರ, ಟಿ.ಎಸ್. ಗೊರವರ ಮತ್ತು ಎಂ.ಎಸ್. ವೇದಾ ಅವರ ಕತೆಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೌಟುಂಬಿಕ ಸಾಮರಸ್ಯವು ಮರೆಯಾಗಿ, ಸ್ವಾರ್ಥ ಮತ್ತು ಆರ್ಥಿಕ ಲಾಭಕ್ಕಾಗಿ ಮಾನವೀಯ ಸಂಬಂಧಗಳು ಹೇಗೆ ನಶಿಸುತ್ತಿವೆ ಹಾಗೂ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೇಗೆ ಹೆಚ್ಚುತ್ತಿದೆ ಎನ್ನುವ ವರ್ತಮಾನದ ಕಟು ವಾಸ್ತವವನ್ನು ಸಣ್ಣಕತೆಗಳು ದಾಖಲಿಸಿರುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

Fields of Study & Subjects

Short Stories in Global Literature Themes in Literature Analysis Literature: history themes analysis

Publication details

Journal / source
Zenodo (CERN European Organization for Nuclear Research)
Publication date
10 February 2026
Language
KN