ರಬಯ ಅಲ-ಅದವಯ: ಜಗತತನ ಮದಲ ಸಫ ಮಹಳ

Read full text
Authors: ಬಸೀರಾಬಾನು ನಿಡಗುಂದಿ
Cited by: 0

Abstract

ಪರಮಾತ್ಮನೊಡನೆ ಸ್ನೇಹಾತ್ಮಕ ಸಂಬಂಧ ಬೆಳೆಸಿ, ಉಪಾಸನೆ ಮಾಡುವ ಮುಸ್ಲಿಂ ಅನುಭಾವಿ ಸಂತರನ್ನು ʻಸೂಫಿ' ಎಂದು ಕರೆಯುವರು. ಈ ಪಂಥಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಇದು ಮೂಲತಃ ಇಂದಿನ ಟರ್ಕಿ, ಇರಾನ್‌ ಮತ್ತು ಇರಾಕ್‌ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿತ್ತು. ಈ ಪಂಥದ ಮೂಲತತ್ವ “ಪ್ರೇಮ”. ದೇವರು ಒಬ್ಬನೇ, ಪ್ರೇಮದ ಮುಖಾಂತರ ಆತನೊಡನೆ ವಿಲೀನವಾಗುವುದೇ ಏಕಮಾತ್ರ ಗುರಿಯಾಗಿತ್ತು. ಆದರೆ ʻಸೂಫಿ' ಎಂಬ ಶಬ್ದ ಇಸ್ಲಾಂ ಧರ್ಮಗ್ರಂಥ ʻಖುರಾನ್‌'ನಲ್ಲಿ ಕಾಣಸಿಗುವುದಿಲ್ಲ. ಆದರೆ ʻಖುರಾನ್'ನಲ್ಲಿ ಬರುವ ʻವಲಿ' ಎಂಬ ಪದ ʻಸೂಫಿ'ಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ʻಸೂಫಿ' ಎಂಬ ಪದದ ವ್ಯೂತ್ಪತ್ತಿಯ ಬಗೆಗೆ ವಿದ್ವಾಂಸರಲ್ಲಿ ಬೇರೆ-ಬೇರೆ ಅಭಿಪ್ರಾಯಗಳಿವೆ. ಜಗತ್ತಿನಾದ್ಯಂತ ಸೂಫಿ ತತ್ವವನ್ನು ಸಾರುತ್ತಾ ನಡೆದ ಸೂಫಿ ಪರಂಪರೆ ಕೇವಲ ಪುರುಷ ಸೂಫಿಗಳಿಗೆ ಮಾತ್ರ ತನ್ನ ಮಡಿಲಲ್ಲಿಡದೇ, ಮಹಿಳಾ ಸೂಫಿ ಸಂತರಿಗೂ ಅವಕಾಶ ಮಾಡಿಕೊಟ್ಟಿತು. ಆದರೆ ಈ ಅವಕಾಶ ಸುಲಭವಾಗಿ ದೊರೆಯುವಂಥದ್ದಾಗಿರಲಿಲ್ಲ; ಹೋರಾಟದ ಮೂಲಕವೇ ಪಡೆಯಲಾಗುತ್ತಿತ್ತು ಎನ್ನಬಹುದು. ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಾನಮಾನಗಳ ಕುರಿತು ಚರ್ಚೆಗಳು ಇಂದಿಗೂ ನಡೆಯುತ್ತವೆ.

Fields of Study & Subjects

Islamic Thought and Society Studies Islamic Studies and History Early Modern Women Writers

Publication details

Journal / source
Zenodo (CERN European Organization for Nuclear Research)
Publication date
10 February 2026
Language
KN