ಗಪಲಕಷಣ ಅಡಗರ ಭಮಗತ-ಒದ ಅಧಯಯನ.

Read full text
Authors: ಡಾ. ನಾಗಪ್ಪ ಟಿ. ಗೋಗಿ
Cited by: 0

Abstract

ಗೋಪಾಲಕೃಷ್ಣ ಅಡಿಗರು ಇಪ್ಪತ್ತನೇ ಶತಮಾನದ ಶ್ರೇಷ್ಠ ಕವಿಗಳು, ಚಿಂತಕರು ಹಾಗೂ ನವ್ಯ ಕಾವ್ಯದ ಹರಿಕಾರರು. ಪಿ. ಲಂಕೇಶರವರ ಮಾತಿನಲ್ಲಿ ಹೇಳುವುದಾದರೆ ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’. ನವೋದಯದ ದ.ರಾ. ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ ನವರಂತೆ ನವ್ಯರಲ್ಲಿ ಪ್ರಮುಖ ಕವಿ ಒಬ್ಬರೇ; ಅವರೇ ಅಡಿಗರು. ಅಡಿಗರ ಉದ್ವೇಗ, ಆದರ್ಶಪರತೆ, ಉತ್ಸಾಹ, ನಿಸರ್ಗದಲ್ಲೇ ದೇವರನ್ನು ಕಾಣುವ ಅಧ್ಯಾತ್ಮಿಕತೆ ಎಲ್ಲವೂ ಅಡಿಗರ ಕಾವ್ಯದ ವೈಶಿಷ್ಟ್ಯತೆಗಳೇ. ಅಡಿಗರ ಕಾವ್ಯದಲ್ಲಿ ಭಾವ ತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಚಂಡೆ ಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಮಾವೋ ಕವಿತೆಗಳು, ಸುವರ್ಣ ಪುತ್ಥಳಿ, ಬಾ ಇತ್ತ ಇತ್ತ ಎಂಬ ಹನ್ನೆರಡು ಕವನ ಸಂಕಲನಗಳು 1946 ರಿಂದ 1993 ರ ಅವಧಿಯಲ್ಲಿ ಬರೆದವುಗಳಾಗಿವೆ. ಅಡಿಗರು ಬುದ್ಧಿಜೀವಿಗಳ ಕವಿಯಾಗಿದ್ದಾರೆ. ಕನ್ನಡ ಚಳುವಳಿಗಳಲ್ಲಿ ನವೋದಯದ ಆದರ್ಶ, ಭಾವಶ್ರೀಮಂತಿಕೆ ಹಾಗೂ ರಾಷ್ಟ್ರೀಯ ಪ್ರಜ್ಞೆಗಳಂತೆ ನವ್ಯರಲ್ಲಿ ಅಸ್ತಿತ್ವವಾದದ ಪರಿಕಲ್ಪನೆ, ಒಂಟಿತನದ ಭಾವನೆ, ಬದುಕು ಸ್ವತಂತ್ರವಾಗಿಲ್ಲ ಅತಂತ್ರವಾಗಿದೆ ಎಂಬ ಆತಂಕ ಎಲ್ಲವೂ ವ್ಯಕ್ತವಾಗಿವೆ. ಇದಕ್ಕೆ ಉತ್ತಮ ಉದಾಹರಣೆ ಅಡಿಗರ ಕಾವ್ಯವೇ ಆಗಿದೆ. ‘ಯಾವ ಮೋಹನ ಮುರಲಿ ಕರೆಯಿತೋ ದೂರ ತೀರಕೆ ನಿನ್ನನು’ ಎಂದು ನವೋದಯದ ಭಾವಶ್ರೀಮಂತಿಕೆಯನ್ನು ತೋರಿದ ಕವಿಯೇ ಬದುಕಿನ ಹೊಸ ಸಂವೇದನೆಗಳಿಗೆ, ಹೊಸ ಅಭಿವ್ಯಕ್ತಿ ಕ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಅಡಿಗರ ಇತಿವೃತ್ತ : ಅಡಿಗರು ಉಡುಪಿ ಜಿಲ್ಲೆಯ ಮೊಗೇರಿ ಎಂಬ ಕರಾವಳಿ ಗ್ರಾಮದಲ್ಲಿ ಜನಿಸಿದ್ದಾರೆ. ಮೋಗೇರಿ, ಬೈಂದೂರುಗಳಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರದಲ್ಲಿ ಪ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ. 1950 ರಿಂದ 1960 ರ ದಶಕದಲ್ಲಿ ಅಡಿಗರು ಮೈಸೂರಿನಲ್ಲಿ ಶಿಕ್ಷಕರಾಗಿದ್ದರು. 1964 ರಿಂದ 1968 ರ ವರೆಗೆ ಅಡಿಗರು ಸಾಗರದ ಲಾಲ್‍ಬಹಾದ್ದೂರ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. 1968 ರಿಂದ 1971 ರ ವರೆಗೆ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅಡಿಗರು ತಮ್ಮ ಕಾವ್ಯದಲ್ಲಿ ಪುರಾಣ, ವರ್ತಮಾನ ಹಾಗೂ ಇತಿಹಾಸದ ಸಂಗತಿಗಳನ್ನು ದಾಖಲಿಸುವ ಮೂಲಕ ಕಾವ್ಯಕ್ಕೆ ಜೀವಂತಿಕೆ, ಅರ್ಥವಂತಿಕೆ ಹಾಗೂ ಐತಿಹಾಸಿಕ ಪ್ರಜ್ಞೆ ತುಂಬಿದ್ದಾರೆ. ಅವರು ‘ಸಾಕ್ಷಿ’ ಎಂಬ ಸಾಹಿತ್ಯಿಕ ಪತ್ರಿಕೆಯನ್ನು ಹೊರತಂದು ಕನ್ನಡ ಸಾಹಿತ್ಯವನ್ನು ಶ್ರೀಸಾಮಾನ್ಯರಿಗೆ ತಲುಪಿಸಿದ್ದಾರೆ. ಸುಮತೀಂದ್ರ ನಾಡಿಗ ಖ್ಯಾತ ವಿಮರ್ಶಕರು ಹೇಳುವಂತೆ ಅಡಿಗರ ಕಾವ್ಯ ಬದುಕನ್ನು ಕುರಿತು, ಬದುಕಿನ ಅರ್ಥವೇನೆಂದು ಕೇಳುವ ಪ್ರಶ್ನೆಗಳ ಕುರಿತು ಉತ್ತರಿಸುವ ರೀತಿ ನಮಗೆ ವಾಸ್ತವತೆಯ ದರ್ಶನ ಮಾಡಿಸುತ್ತದೆ. ಅಡಿಗರು ಉಪಯೋಗಿಸುವ ಲೋಕಜ್ಞಾನ, ಅವರ ಅನುಭವ, ಕಾಲ(ಟೈಮ್) ಕಂಡು ಹಿಡಿದ ವೈಜ್ಞಾನಿಕ ಸತ್ಯಗಳು, ನಮ್ಮ ಸಂಸ್ಕøತಿಯನ್ನು ಬೆಳೆಸಿದ ಪರಿಕಲ್ಪನೆಗಳು ಮತ್ತು ಆಚರಣೆಗಳಿಂದ ರೂಪುಗೊಂಡ ಸಮಕಾಲೀನ ಭಾಷೆ ಕಾವ್ಯವನ್ನು ನಮಗೆ ಪ್ರಸ್ತುತಗೊಳಿಸುತ್ತವೆ’ (ಅಡಿಗರ ಸಮಗ್ರ ಕಾವ್ಯ ಪು: ಘಿುತ) ಎಂಬುದು ಅಡಿಗರ ಕಾವ್ಯ ಧೋರಣೆಗೆ ಕನ್ನಡಿ ಹಿಡಿದಿದೆ. ಗೋಪಾಲಕೃಷ್ಣ ಅಡಿಗರ ಭೂಮಿಗೀತ ಯು.ಆರ್. ಅನಂತಮೂರ್ತಿಯವರ ಮುನ್ನುಡಿಯೊಂದಿಗೆ 1959 ರಲ್ಲಿ ಪ್ರಕಟವಾಗಿದೆ. ಭೂಮಿಗೀತ, ಹಳೆಮನೆಯ ಹಾದಿ, ಹದ್ದು, ಪ್ರಾರ್ಥನೆ, ಭೂತ, ಸ್ವಾತಂತ್ರ್ಯ : 1958 ರ ಪಾಠ, ನೆಹರೂ ನಿವೃತ್ತರಾಗುವುದಿಲ್ಲ, ಶರದ್ಗೀತಗಳೆಂಬ ಕವಿತೆಗಳನ್ನು ಒಳಗೊಂಡಿದೆ. ನವ್ಯ ಸಾಹಿತ್ಯದ ಪ್ರೇರಣೆ-ಧೋರಣೆಗಳನ್ನು ತಿಳಿದವರಿಗೆ ಅಡಿಗರ ಪ್ರತಿಮೆ ಸಂಕೇತ ಹಾಗೂ ಕಾವ್ಯಧ್ವನಿಗಳು ಅರ್ಥವಾಗುತ್ತವೆ. ಅಡಿಗರ ಭೂಮಿಗೀತ ಕವಿತೆಯಲ್ಲಿ ಹುಟ್ಟು, ಎಳೆ ಹರೆಯ, ನಗರ ಜನರ ಸಂಕೀರ್ಣ ಸಮಸ್ಯೆ, ಈಡಿಪಸ್ಸಿನ ರಾಜನ ತರ ತಾಯನ್ನೇ ಭೋಗಿಸಿದ ಪಾಪ ಪ್ರಜ್ಞೆ, ತಿರುಪತಿ ತಿಮ್ಮಣ್ಣನ ಕುರಿತ ಧರ್ಮ ಚಿಂತನೆಗಳಿದ್ದದ್ದನ್ನು ಕಾಣುತ್ತೇವೆ. ಕವಿತೆ ಹೂ ಅರಳಿದಂತೆ ಪ್ರಜ್ಞಾಪೂರ್ವಕವಾಗಿ ಅಡಿಗರಲ್ಲಿ ಅರಳಿ ನಿಲ್ಲುತ್ತದೆ. ಅದು ಮಲೆನಾಡಿನ ಬಸ್ಸಿನಲ್ಲಿ ಕೂತು ಪ್ರಯಾಣಿಸುವ ಪ್ರಯಣಿಗರಂತೆ ಭಾವನೆಗಳ ಭರಪೂರ. ಎಲ್ಲಿ ನೋಡಿದರಲ್ಲಿ ನಿಸರ್ಗ ಸೌಂದರ್ಯದ ಆಗರ. ಕವಿ ಕರಾವಳೀ ತೀರದಲ್ಲಿ ಬೆಳೆದಿರುವುದರಿಂದ ಯಕ್ಷಗಾನಗಳಿಂದ ಪ್ರಭಾವಿತನಾಗಿರುವುದರಿಂದ, ಬ್ರಿಟಿಷರಿಂದ ‘ನಾಗರಬೆತ್ತದ’ ನೋವು ಉಂಡದ್ದರಿಂದ ಬರೆಯುವುದೆಲ್ಲವೂ ಸಂವೇದನಾತ್ಮಕವೇ! ಅಡಿಗರ ಭೂಮಿಗೀತದ ಒಳತಿರುಳು : ‘ಹುಟ್ಟು ; ಮಲೆಘಟ್ಟ ಸೋಪಾನಕೆಳಪಟ್ಟಿಯಲಿ ಉರುಳು, - ಮೂರೇ ಉರುಳು – ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ ತೆಂಗು-ಗರಿಗಳ ಬೀಸಿ ಕೈಚಾಚಿ ಕರೆದಳು; ಅಡಿಕೆಗೊನೆ ಗಿಲಕಿ ಹಿಡಿಸಿದಾಳು’ ಇದು ಅಡಿಗರ ನಿಸರ್ಗಾನುಭವ, ತಾವು ಹುಟ್ಟಿ ಬೆಳೆದ ಹಳ್ಳಿಯ ಸೌಂದರ್ಯ ಹಾಗೂ ಕಡಲ ಸೌಂದರ್ಯದ ಕನ್ನಡಿ. ಮೂರು ಉರುಳುಗಳು ಬಾಲ್ಯ ಯೌವ್ವನ ಮುಪ್ಪಿನದೋ, ಅರುಣೋದಯ, ಮಧ್ಯಾಹ್ನ ಹಾಗೂ ಸಂಜೆಯದೋ ಎಲ್ಲವೂ ಶ್ಲೇಷೆಯಂತಿವೆ. ಆದರೆ, ಬಾಲ್ಯ, ಯೌವ್ವನದಲ್ಲಿ ಮಾತ್ರ ನಿಸರ್ಗ ಬಹಳಷ್ಟು ಸಾಹಸಕ್ಕೆ ಅಣಿಯಾಗಿಸುತ್ತದೆ. ನಮ್ಮನ್ನು ಉಣಿಸುತ್ತದೆ. ತೆಂಗು ಗರಿಗಳ ಚಾಮರ ಬೀಸಿ ಸ್ವಾಗತಿಸುತ್ತದೆ. ನಿಸರ್ಗ ಹೆಣ್ಣು ಎಂದರೆ, ಕೈಬೀಸಿ ಕರೆಯುವ ಅಪ್ಯಾಯಮಾನತೆ ತೋರುತ್ತದೆ. ದ್ವಿತೀಯ ಘಟ್ಟದಲ್ಲಿ ಪ್ರಕೃತಿ ನಡೆ ಕಠೋರವಾಗಿದೆ. ಎಳೆ ಹರೆಯ ಹೂ ಬಿಸಿಲಾದರೆ ಇದು ಉರಿ ಬಿಸಿಲು. ಇಲ್ಲಿ ಬದುಕಿನ ಪಾಠ ಕಲಿಯಲೇ ಬೇಕಾಗಿದೆ. ಮಗುವಾಗಿದ್ದಾಗ ಹಕ್ಕಿ ಗಿಲಕಿ ಹಿಡಿದಂತೆ ಇಲ್ಲಿ ಹಿಡಿಯುವವರಿಲ್ಲ. ಇಲ್ಲಿ ನೀವೆ ಸಾಧನೆ-ವೇದನೆ ಗೈಯ್ಯಬೇಕು. ಶ್ರಮ ಸಂಸ್ಕøತಿಯ ಅರಿವು ಹೇಗೆಂದರೆ- ಕಬ್ಬಿನಾಲೆಯ ತಿರುಪಿನಲ್ಲಿ ಕುಳಿತೆರೆದಳು ಅಜಸ್ರಧಾರೆಯ ಕರುಳ ತುಡಿತವನ್ನು; ಭತ್ತ ಗೋಧುವೆ ರಾಗಿ ಜೋಳ ಮೊರಮೊರ ಮೌರಿಯಲಿ ಮಾಂಸದ ಹಾಡನೂಡಿಸಿದಳು ಎಂಬ ಸಾಲುಗಳಲ್ಲಿ ಉತ್ತಿ-ಬಿತ್ತಿ ಬೆಳೆಯುವ ಪರಿಶ್ರಮದ ಪರಿಕಲ್ಪನೆಯಿದೆ. ಪ್ರಕೃತಿ ಗಟ್ಟಿಯಾಗಲು ಸದಾ ಕರೆ ನೀಡುತ್ತದೆ. ಇದಕ್ಕಾಗಿ ನಾವು ನಿಸರ್ಗ ಮಧ್ಯದಲೇ ಬಾಳಬೇಕು. ಭತ್ತ ರಾಗಿ ಬೆಳೆವ ವನದೇವಿ ಮಾಂಸದ ಹಾಡನ್ನೂ(ಶಾಕಾಹಾರಿ) ಊಡಿಸುವಳು, ಬಗೆಬಗೆಯ ಹೂಗಳಿಂದ ಗಂಧ ಗಿರಿಶಿಖರದಲ್ಲಿ ಮಲಗಿಹಳು! ಮೋಡ ಹನಿಸುವಾಗ ಧರೆಗೆ ತಂಪನೀಡಿ ಜೀವಜ್ಯೋತಿ ಬೆಳಗಿಸುವಳು. ಇದು ಪ್ರಕೃತಿಯ ಪ್ರಥಮಾವಸ್ಥೆ. ಹರೆಯದ ನೀರು ಹರಿಯವುದು ಮನುಷ್ಯರಲ್ಲಿ, ಪ್ರಕೃತಿಯಲ್ಲಿ. ಹಾಗೆ ಹರಿದಾಗ ಚಿಗಿತÉಳ ಮೊಳಕೆ, ಜೀವ ನರಳಿಕೆ, ಜೀವ ಸೃಷ್ಟಿಯ ಝೇಂಕಾರ!. ಮಳೆ ಮಂತ್ರದಂಡ ಮುಟ್ಟಿದ ಹೊಲಗಳ ಬದಿಗಳಲ್ಲಿ ಎಲ್ಲೆಲ್ಲೂ ಕೃಷಿ-ತೋಟಗಾರಿಕೆ. ಹೀಗೆ ಹಸಿರಾದ ಭೂಮಿಗೆ ಮರಗಳು ಬೆಳೆಯುವ, ಕಾಮನ ಬಿಲ್ಲು ಮೂಡುವ, ಮಾದಕ ಬಲ್ಬಿನ ಬೆಳಕಿನಂತೆ!. ಹೀಗೆ ಭತ್ತದ ಗದ್ದೆಗಳಿಗೆ ಮಳೆ ಬಂದರೆ ಗುಡುಗು ಮೊಳಗಿದರೆ, ಕುರುಡಾಡುವ ಉತ್ಸಾಹ ಸಂಜೆವರೆಗೆ. ಒಂದೆಡೆ ಪ್ರಕೃತಿಯ ಪುಳಕ. ಇನ್ನೊಂದೆಡೆ ಜೀವಸೃಷ್ಟಿಯ ತವಕ. ‘ಹಸುರು ತೆರೆ ಅಪ್ಪಳಿಸುತಿರೆ ಮೇಲೆ ನೊರೆಕಾರಿ, ಬೀಸುತಿರೆ ಬಿರುಗಾಳಿ; ಗುಡುಗು ಮೊಳಗೆ ಮಳೆಮುತ್ತುಗಳ ಮತ್ತ ದೀಪ್ತಿಗೆ ಕಣ್ಣು ಕುಕ್ಕುವ ಕುರುಡಾಡುವ ಬಯಕೆ ಸಂಜೆವರೆಗೆ’ ಎಂಬುದು ನಿಸರ್ಗ ಪ್ರೀತಿಗೆ ಹಿಡಿದ ಕನ್ನಡಿ. ಎಲ್ಲೆಲ್ಲೂ ಹೆರಿಗೆ ಮನೆ, ಸಂಕಟ, ನಗೆ, ಕೊರಡು ಚಿಗುರಿದ ಚೆಲುವು ಚೀರು ಕೇಕೆ ಎಂಬುದು ಮಳೆ ಸುರಿಸಿದಾಗಿನ ಪ್ರಕೃತಿ ಚೈತನ್ಯ ಹಾಗೂ ವಿಷ್ಮಯಗಳ ಅವತರಣಿಕೆ. ಬೀಜ ಬಿದ್ದಾಗ ಮರ ಚಿಗುರುವುದು, ಪ್ರಕೃತಿ ಒದ್ದೆಯಾದಾಗ ಹಸಿರು ನಳನಳಿಸುವುದು ಗರ್ಭತಾಳಿದಾಗ ಬಸುರು ಬೇನೆಯ ಸಂಕಟ ಎಲ್ಲವೂ ಸನ್ನಿಹಿತವಾದ ಸಂಭಾವ್ಯ ಸಂಗತಿಗಳೇ! ಈ ಭಾಗದಲ್ಲಿ ಅಡಿಗರು ಮಳೆಗಾಲದ ವಾತಾವರಣದೊಂದಿಗೆ ಬಸಿರಾದ ಭೂಮಿಯ ಸಂಕಟದ ನೋವುಗಳ ಚಿತ್ರಣ ಹಾಗೂ ಚೆಲುವಿನ ಚಿತ್ತಾರಗಳನ್ನು ಗಮನಕ್ಕೆ ತಂದಿದ್ದಾರೆ. ಅಡಿಗರ ಭೂಮಿಗೀತದ ಈ ಚಮತ್ಕಾರದೊಂದಿಗೆ ಹುಟ್ಟುಕೊಂಡ ಸಮಸ್ಯೆ ಎಂದರೆ ಹೆರಿಗೆ ಸಮಸ್ಯೆ. ಎಲ್ಲಿ ಭೂಮಿ ಫಲವತ್ತಾಗಿದೆಯೋ ಅಲ್ಲಲ್ಲಿ – ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ; ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ ; ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ ಎಂಬ ಸಾಲುಗಳಲ್ಲಿದೆ ದಿವ್ಯ ಧ್ವನಿ. ಮಳೆ ಬಂದ ಮೇಲೆ ಬೆಳೆ ಬರಲೇ ಬೇಕು. ಹಾಗೆ ಗರ್ಭ ಧರಿಸಿದ ಮೇಲೆ ಮಗು ಜನಿಸಲೇ ಬೇಕು. ಇದು ನಿಸರ್ಗ ಸತ್ಯ. ಆದರೆ ಹುಟ್ಟಿನ ಮಗುವಿನ ಜಾತಕ ಬರೆಯುವ ಪುರೋಹಿತ ವೃತ್ತಿಯಲ್ಲಿ ಪಾರಂಗತ. ಭವಿಷ್ಯ ನಿಜವಾಗಲೀ ಬಿಡಲಿ ಜಾತಕದಲ್ಲಿ ಅಪಾರ ನಂಬುಗೆ. ಈ ಅಪರ ಕರ್ಮಗಳೆಲ್ಲ ಉಪಯೋಗವಿಲ್ಲ. ಮಗು ಮಣ್ಣ ಮರಿಯ ಹಾಗೆ ಬೆಳೆಯಬೇಕೆಂಬುದು ಅಡಿಗರ ಆಸೆ.ಇದನ್ನು – ಮರಿಮರಿಯ ಹೊರೆಹೊರೆಗಳಾಡಿದವು ಮಣ್ಣಿನಲಿ ಹೊಟ್ಟೆ ಹೊಸೆದವು ಜಾರು ತೊಗಟೆಯಲಿ ರೆಕ್ಕೆ ಬಡಿದವು ಶೂನ್ಯ ಬೀದಿಯಲಿ, ಚಪ್ಪಾಳೆಯಿಕ್ಕೆ ಕುಣಿದವು ಮೋರಿ ಮೋರಿಯಲ್ಲಿ. ಮಧ್ಯಾಹ್ನದುರಿಬಿಸಿಲು ಹೆತ್ತ ಹೆಣಬಣಬೆಗೂ ಪಾಚಿಗಟ್ಟಿದ ಜಿಗಣೆ, ಜೀವ ಹಲವು ಎಂಬ ಸಾಲುಗಳಲ್ಲಿ ಕಾಣಬಹುದಾಗಿದೆ. ನೀವು ಪುರೋಹಿತರ ಜಾತಕ ನೋಡಿಯೇ ಬೆಳೆಯಬೇಕಾಗಿಲ್ಲ. ನೀವು ಬೆಳೆಯಬೇಕಾದ್ದು ಮಣ್ಣ ಮರಿಗಳಂತೆ. ಅಡಿಗರ ಪ್ರತಿಮೆ ಪ್ರತೀಕಗಳಿಗೆ ಲೆಕ್ಕವಿಲ್ಲ. ಅಮೂರ್ತ ನಿಸರ್ಗವನ್ನೂ ಅವರು ಮೂರ್ತವಾಗಿ ಬಣ್ಣಸಬಲ್ಲರು. ಶ್ರೀಕೃಷ್ಣ ಬೆಳೆದ ಬೆಳಕಿನಲಿ ಜಗತ್ತಿಗೇ ಬೆಳಕು. ನಿಸರ್ಗ ನೋವುಗಳಿಗೆ ಕೃಷ್ಣನೇ ಬೆಳಕು. ಅಂತೆಯೇ ಕವಿ ಹೇಳುವ- ಆಹ, ಪ್ರಾತಃಕಾಲದಲ್ಲಿ ಬೆಳಕಿನ ದಾಹ ಯಮುನಾರಂಭದಲಿ ಕಾಳಿಂದಿ ಹೆಡೆಮಣೆಯಾಟ, ಕದಕೆ ಕಿಟಕಿ ಕಿಟಕಿಗೆ ಕಣ್ಣು, ಮನೆ ಕಣ್ಣು, ಊರೆಲ್ಲ ಕಣ್ಣು ತಿರುಗಿತ್ತು ಮಗು ಮಾದರಿಯ ಕ್ಯಾಮರಾ ಕಣ್ಣು ರೀಲು ರೀಲನು ಜಡಿದು ಗಿಡದ ಕತ್ತಲೆ ಕೊಠಡಿ ಮೇಲೆ ಮಸ್ಲಿನ್ ಪರದೇ ಹಾಸುತ್ತಿತ್ತು (ಭೂಮಿಗೀತ) ಎಂಬಲ್ಲಿ ಅಧ್ಯಾತ್ಮ ಹಾಗೂ ಆನಂದಗಳು ಒಟ್ಟಿಗೇ ಬೆರೆತುಕೊಂಡಿವೆ. ನಾವು ನಿಸರ್ಗದ ಐಸಿರಿಯಾಗಲೀ ಭಯಾನಕತೆಯಾಗಲೀ ಕಾಣಬೇಕಾದರೆ ಕಾಣುವ ಕಣ್ಣು ಹೊಂದಿರಬೇಕು. ಯಮುನಾ ತೀರದಿ ಕೃಷ್ಣನ ಕಾಳಿಂದಿ ಮಣಿಸುವ ಹೆಡೆಯಾಟ, ಹಾಗೆ ಪ್ರಾತಃಕಾಲದಲ್ಲಿ ಕತ್ತಲೆ ಸರಿಸಿ ಬೆಳಕು ಮೂಡಿಸುವ ನಿಸರ್ಗದಾಟ. ಒಟ್ಟಿನಲ್ಲಿ ಇದು ಅಜ್ಞಾನ ಕಳೆದು ಸುಜ್ಞಾನ ಬಿತ್ತುವ ಕಾಲ. ಅದಕ್ಕೆ ಎಲ್ಲ ಕಿಟಕಿಗಳು (ಪೌರ್ವಾತ್ಯ ಹಾಗೂ ಪಾಶ್ಚಾತ್ಯ ಜ್ಞಾನಶಾಖೆಗಳ ಕಿಟಕಿ) ತೆರೆದಿರಬೇಕು. ಅದಕ್ಕೆ ಮನೆ ಕಣ್ಣು ಊರು ಕಣ್ಣು, ಕ್ಯಾಮರಾ ಕಣ್ಣು ಎಲ್ಲ. ಇದು ಸುಜ್ಞಾನದ ಬೆಳಕಿನಾಟ. ಮನುಷ್ಯ ಒಳ-ಹೊರಗನ್ನು ತಿಳಿದು ನೋಡಬೇಕು. ಅದರಲ್ಲಿ ಮುತ್ತು, ಬಂಗಾರ, ಹೀರಕ, ಪುಷ್ಯರಾಗ, ಗೋಮೇಧಿಕ, ಕೆಂಪು-ಹಳದಿ ಎಲ್ಲ ಮುತ್ತುಗಳ ಸರಮಾಲೆ. ಪ್ರಕೃತಿ ಮಾತೆ ಹೆತ್ತ ತಾಯಿಗೂ ಮಿಗಿಲು. ನನ್ನದು ಧೃತರಾಷ್ಟ್ರ ಕಣ್ಣು. ಸದಾ ದಾಹ, ಸ್ವಾರ್ಥ. ಎಲ್ಲೂ ದೈವ ಚೈತನ್ಯ ಕಾಣಲಿಲ್ಲ. ನಾನು ಹೆತ್ತ ತಾಯಿಯನ್ನೇ ಭೋಗಿಸುವ ಈಡಿಪಸ್ ಕಾಂಪ್ಲೆಕ್ಸ್‍ನವನು! ನಾನು ಬಿತ್ತಿದಂತೆ ಬೆಳೆ. ಬಿತ್ತಿದ್ದು ಆಟಂಬಾಂಬು ಕಾಳುಗಳ, ಮಾರಕ ಕ್ರಿಮಿಪೈರ ಗೋರಿ. ಇದರಿಂದ ನಾನು ಹೆತ್ತ ತಾಯಿಗೆ ಅತ್ಯಾಚಾರ ಎಸಗಿದಂತೆ! ಅಡಿಗರು ಈ ಸಂದರ್ಭದಲ್ಲಿ ನಮ್ಮ ತಂತ್ರ ಕುತಂತ್ರಗಳನ್ನು ಮರೆತು ಚೀರಿ ರೆಕ್ಕೆ ಬಡಿವ ಹಕ್ಕಿಯಂತಾಗಿದ್ದೇವೆ. ಅವೆಲ್ಲ ನಾವೇ ಉಣ್ಣಬೇಕೆಂಬ ಭಾವವಿದೆ. ಭೂಮಿಗೀತದ ಮುಂದಿನ ಸಾಲುಗಳು ತಿರುಪತಿ ತಮ್ಮಪ್ಪ, ವೇದ, ಶಾಸ್ತ್ರ, ಪುರಾಣ, ಹರಿಕಥೆ, ಹರಿಭಜನೆ ಮೊದಲಾದ ಕತೆಗಳೊಂದಿಗೆ ಹಸ್ತಿನಾಪುರದ ಕೌರವರ ಕಥೆ, ಬೇಂದ್ರೆಯವರ ಸ್ವಾತಂತ್ರ್ಯ ಪ್ರಗಾಥ ಹಾಗೂ ಗಂಗೆಯಲಿ ತೇಲಿಬರುವ ಕರ್ಣನ ಅಸಹಾಯಕ ಸ್ಥಿತಿಯನ್ನು ಒಳಗೊಂಡಿದೆ. ‘ಯಾರಾದರೂ ಬರುತ್ತಾರೆಂದರೆ ಸಾಯಿಸಲಿಕ್ಕೆಂದೇ ಬರುತ್ತಾರೆ, ಕರ್ಣನ ಬಳಿ ಕುಂತಿ ಬಂದಹಾಗೆ’ ಎಂಬುದು ಅನುಪಮ ಹೋಲಿಕೆಯಾಗಿದೆ. ಹೀಗೆ ಅಡಿಗರು ಭೂಮಿಗೀತದಲ್ಲಿ ಅನೇಕ ನಿಸರ್ಗಪ್ರತಿಮೆ ಪ್ರತೀಕಗಳ ಮೂಲಕ ಇತಿಹಾಸ, ಪುರಾಣ ಹಾಗೂ ವರ್ತಮಾನದ ಸಂಗತಿಗಳನ್ನು ಬಿಚ್ಚಿಟ್ಟಾದ್ದಾರೆ. ನೆಲತಾಯಿ ಮಲತಾಯಿ, ಸುರುಚಿ, ಉತ್ಥಾನಪಾದ, ಧೃವ ನಕ್ಷತ್ರ ಎಲ್ಲವೂ ಪೌರಾಣಿಕ ಹೋಲಿಕೆಗಳೇ. ವಿಶ್ವಾಮಿತ್ರನ ತ್ರಿಶಂಕು, ತೊಗಲು ಬಾವಲಿ, ಮರದ ಜೋಲು ತೊಗಟೆ, ಕೆಸರಲ್ಲಿ ಹುದುಗಿದ ಕಾಲು ಎಲ್ಲವೂ ಅಸ್ತಿತ್ವ ಅಳಿಸುವ ಸಂಗತಿಗಳೇ. ಬಾಲ ಲೀಲೆ, ಮಧ್ಯ ಯೌವನದ ಹುಡುಕಾಟ, ಮುಪ್ಪಿಗೆ ಮಣ್ಣು ಎಂಬುದೇ ಭೂಮಿಗೀತದ ತಿರುಳು. ಇದರ ಚಮತ್ಕಾರ- ಈ ಬೊಂಬೆಯಲ್ಲೂ ಉಸುರಿನ ಮಂತ್ರ ತಂತ್ರದಾಚೆಗೆ ಶುದ್ಧ ಬೆಳಕುಮಂತ್ರ-ಪಿತೂರಿ ಹೆಜ್ಜೆ ಮಊಡದ ಹಾದಿ ಗಾಳಿ ಬೇದಿ ಎಂಬಲ್ಲಿ ನಮ್ಮ ವಿಚಿತ್ರ ಸ್ವಭಾವದ ಅವಲೋಕನವಿದೆ. ಈ ಗಾಳಿ ಹೇಗೆ ಆಕಾಶದಲ್ಲಿ ಬೆರೆತು ಬೆಳಕು ಮೂಡಿಸುವ ರೀತಿ ಚಮತ್ಕಾರದ ರೀತಿ. ನಗರೀಕರಣ ವೆಂದರೆ ಅದು ಕೂಡಾಡಿಸುವ ಕುಣಿಸುವ ಚಮತ್ಕಾರ. ಬ್ರಹ್ಮಾಂಡ ಸತ್ಯವನ್ನರಿಯುವ ವಿಚಾರ. ದೇವರು ನಿರ್ಮಿಸಿದ ಈ ಸೃಷ್ಟಿ ಹೇಗೋ ಸಾಗುತ್ತದೆ. ಒಮ್ಮೆ ಭಯಗೊಂಡು ಮತ್ತೊಮ್ಮೆ ಬೆರಗುಗೊಂಡು. ಎಕೆಂದರೆ- ಕತ್ತಲಲ್ಲಿ ಕಣ್ಣು ಕಾಣದ ಬೀದಿಯಿಕ್ಕಟ್ಟಿನಲಿ ಗೋಡೆ ತಡಕುತ ಇನ್ನು ತೆವಳಬೇಕು ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ; ದಾರಿ ಸಾಗುವದೆಂತೋ ನೋಡಬೇಕು ( ಭೂಮಿಗೀತದ ಕೊನೆ ಸಾಲು) ಎಂಬುದು ಅಡಿಗರ ಆಶಾ ಭಾವನೆಯಾಗಿದೆ. ಈ ಜಗತ್ತು ಎಷ್ಟೊಂದು ಕೆಟ್ಟಿದೆ ಎಂದರೆ ಆಟಂಬಾಂಬು, ಮಾಟ ಮಂತ್ರತಂತ್ರ, ಲೋಕಸೃಷ್ಟಿಯ ಕೆಡಿಸುವ ವಿಚಾರಗಳಿಂದ ಕೆಟ್ಟಿದೆ. ಆದರೂ ದಾರಿ ಸಾಗುತ್ತದೆ ಹೇಗೆ ಎಂದರೆ ‘ಕುರುಡನ ಹೆಗಲ ಮೇಲೆ ಕುಂಟ ಕೂತು ದಾರಿತೋರುವ ತೆರದಿ’ ಎಂಬುದು ಅರ್ಥಪೂರ್ಣ ಹೋಲಿಕೆಯಾಗಿದೆ. ಇಲ್ಲಿ ಕುರುಡ ನಡೆಯಲು ಸದೃಢ, ಕುಂಟ ನೋಡಲು ಸದೃಢ. ಆದರೆ ಕುರುಡನಿಲ್ಲದೇ ಕುಂಟನಿಲ್ಲ, ಕುಂಟನಿಲ್ಲದೇ ಕುರುಡನಿಲ್ಲ ಹಾಗಾಗಿದೆ ನಮ್ಮ ಪ್ರಗತಿ ಹಾಗೂ ಹೊಟ್ಟೆ ಕಿಚ್ಚಿನ ರೀತಿ. ಈ ಪುರಾಣ, ಇತಿಹಾಸಗಳ ಕೆದಕಿ, ಮೈಮುರಿದು ತಿಳುವಳಿಕೆಯಿಂದ ಮೇಲೆದ್ದು ಕುವೆಂಪು ಹೇಳುವಂತೆ ನಿರ್ದಿಂಗತವಾಗೆ ಏರಿ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಘನೋದ್ದೇಶ ಹೊಂದುವುದೇ ರಮ್ಯ ಕವಿ ಕುವೆಂಪು ನವ್ಯ ಕವಿ ಅಡಿಗರ ಆಶಯವಾಗಿದೆ. ಕನ್ನಡದ ಶ್ರೇಷ್ಠ ವಿಮರ್ಶಕ ರಹಮತ್ ತರೀಕೆರೆ ಯವರು ಹೇಳುವಂತೆ “ ಕೃತಿ ರಚನೆ ಸ್ಫೂರ್ತಿ ತತ್ವದಿಂದಷ್ಟೇ ನಡೆಯುವುದಿಲ್ಲ. ಅದಕ್ಕೆ ಬುದ್ಧಿಯ ಸಹಯೋಗ, ಭಾವಾವೇಶವನ್ನು ಹೆಣ್ತನವೆಂದೂ ಬುದ್ಧಿಯನ್ನು ಪುರುಷನೆಂಧೂ ಅಡಿಗರು ಭಾವಿಸಿದ್ದರು. ಅವರ ಪ್ರಕಾರ ಸೃಷ್ಟಿಯು ತನ್ನ ಶಕ್ತಿ ಮತ್ತು ಬುದ್ಧಿಮತ್ತೆಗಳಿಂದ ಕಟ್ಟುವ ರಚನೆ. ಧಾತುಕಾತುರ ಕಳೆದು’ ಎಂಬಲ್ಲಿ ಸಹನೆಯ ಕಾಯುವಿಕೆಯಿದೆ. ಇಕ್ಕಿ ಇರಿದು ಮಥಿಸಿ ಎನ್ನುವಲ್ಲಿ ಹಿಂಸೆ ಮತ್ತು ಶ್ರಮದ ಕ್ರಿಯೆಗಳೂ ಇವೆ. ಇದೇ ಕುಶಲಕರ್ಮವಾದಿ ಗ್ರಹಿಕೆ. ಇದರ ಲಕ್ಷಣಗಳೆಂದರೆ, ಶ್ರಮ, ಕಾಯುವಿಕೆ, ಕುಶಲತೆ ಹಾಗೂ ಸ್ವವಿಮರ್ಶೆ. (ಅಡಿಗರ ಸೃಷ್ಟಿ ಮೀಮಾಂಸೆ ಕೃತಿ : ಪ್ರತಿಮಾ ಲೋಕ ಪು: 306) ಎಂಬಲ್ಲಿ ಅಡಿಗರ ಕಾವ್ಯದ ತಾಕತ್ತು ಮತ್ತು ಕಾಣುವ ದೃಷ್ಟಿಕೋನಗಳು : ಗೋಪಾಲಕೃಷ್ಣ ಅಡಿಗರ : ಸುಮತೀಂದ್ರ ಕನ್ನಡ ಮತ್ತು ಕನ್ನಡ ಗೋಪಾಲಕೃಷ್ಣ

Fields of Study & Subjects

Poetry Analysis and Criticism South Asian Studies and Diaspora Literature: history themes analysis

Publication details

Journal / source
Zenodo (CERN European Organization for Nuclear Research)
Publication date
15 February 2026
Language
KN