ಕವಯ ತತವ-ಸದಧತ-ಮಹತವ ಸರವ ಡ. ಸರದರಕಮರ ಕರಮಗಯರ 'ಪಶಚತಯ ಕವಯಮಮಸ'.

Read full text
Authors: ಡಾ. ನಾಗಪ್ಪ ಟಿ. ಗೋಗಿ
Cited by: 0

Abstract

ಪೀಠಿಕೆ : ಡಾ. ಸುರೇಂದ್ರಕುಮಾರ ಕೆರಮಗಿವರ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಏಕಾಕ್ಷರ ಪ್ರಿಂಟರ್ಸ್, ಕಾಮಾಕ್ಷಿ ಪಾಳ್ಯ, ಬೆಂಗಳೂರಿನಿಂದ 2025 ರಲ್ಲಿ ಮುದ್ರಣಗೊಂಡಿದ್ದು ಇದನ್ನು ಸೃಷ್ಟಿ-ಸೌರಭ ಪ್ರಕಾಶನ ಯಮುನಾ ನಗರ, ಕಬುರಗಿ ಪ್ರಕಾಶನದಿಂದ ಪ್ರಕಟಿಸಲಾಗಿದೆ. 978-93-342-5-111-1 ಐ.ಎಸ್.ಬಿ.ಎನ್. ಸಂಖ್ಯೆ ಹೊಂದಿರುವ, ಒಟ್ಟು 113 ಪುಟಗಳ ನೂರು ರೂಪಾಯಿ ಬೆಲೆ ಹೊಂದಿದ್ದು, ಬಿ.ಎ. ಹಾಗೂ ಎಂ.ಎ. ಭಾಷಿಕ ವಿದ್ಯಾರ್ಥಿಗಳ ಪಠ್ಯವನ್ನು ಆಧರಿಸಿ ರಚಿಸಲಾಗಿದೆ. ಇಲ್ಲಿ ಹಲವು ವಾದಗಳು, ಸಿದ್ಧಾಂತಗಳು ಹಾಗೂ ಮೀಮಾಂಸಕರ ಜೀವನ ಸಾಧನೆಯ ವಿವರಗಳು ಢಾಳವಾಗಿ ಚಿತ್ರಿಸಲ್ಪಟ್ಟಿವೆ. ಭಾರತೀಯ ಕಾವ್ಯಮೀಮಾಂಸೆ ಲಾಕ್ಷಣಿಕರ ಕೃತಿಯಾಧಾರಿತ ಹೇಳಿಕೆಗಳ ಮೇಲೆ, ಚರ್ಚೆ ಚಿಂತನೆಗಳ ಮೇಲೆ ನಡೆದಂತೆ ಪಾಶ್ಚಾತ್ಯರಲ್ಲಿ ಪ್ಲೇಟೋವಿನಿಂದ ಎಫ್.ಆರ್. ಲೀವಿಸ್‍ರ ವರೆಗೆ ಅನೇಕರು ತಮ್ಮ ವಾದ ಹಾಗೂ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅನುಕರಣ ವಾದ, ಭಾವವಿರೇಚನ ಸಿದ್ಧಾಂತ, ಔಚಿತ್ಯ ವಾದ, ಕಲ್ಪನಾ ವಾದ, ವ್ಯಕ್ತಿನಿರಸನ ವಾದ, ಅಭಿವ್ಯಕ್ತಿವಾದ, ಮಾನಸಿಕ ದೂರ ಸಿದ್ಧಾಂತ, ಮಹೋನ್ನತ ಸಿದ್ಧಾಂತ ಮೊದಲಾದವು ಹೆಚ್ಚು ಚರ್ಚೆ-ಚಿಂತನೆಗೆ ಒಳಗಾದದ್ದನ್ನು ಈ ಕೃತಿಯಲ್ಲಿ ವಿವರವಾಗಿ ಕಾಣಬಹುದಾಗಿದೆ. ಭಾರತೀಯರು ಶಬ್ದ, ಅರ್ಥ, ರಸ, ಧ್ವನಿ, ಔಚಿತ್ಯ ಸಿದ್ಧಾಂತಗಳಿಗೆ ಮಹತ್ವ ನೀಡಿದಂತೆ ಪಾಶ್ಚಾತ್ಯರು ಮೇಲಿನ ಎಲ್ಲ ವಾದ-ಸಿದ್ಧಾಂತಗಳ ಜೊತೆಗೆ ಕಾವ್ಯದ ನೀತಿ, ಕಲೆಗಾಗಿ ಕಲೆ, ಸೌಂದರ್ಯಾನುಭವಕ್ಕಾಗಿ ಕಲೆ, ಜೀವನವನ್ನು ಪ್ರಾಯೋಗಿಕವಾಗಿ ವಿಮರ್ಶೆಮಾಡುವುದಕ್ಕಾಗಿ ಪಾಶ್ವಾತ್ಯ ಕಾವ್ಯ ತತ್ವಗಳನ್ನು, ವಾದಗಳನ್ನು, ಸಿದ್ಧಾಂತಗಳನ್ನು ಬಳಸಿಕೊಂಡಿದ್ದಾರೆ. ಡಾ. ಸುರೇಂದ್ರ ಕೆರಮಗಿಯವರ ಕುರಿತು: ಡಾ. ಸುರೇಂದ್ರಕಮಾರ ಕೆರಮಗಿಯವರು ಕೆಂಪುಬಾಳೆಹಣ್ಣು ಖ್ಯಾತಿಯ ಕಲಬುರ್ಗಿ ಜಿಲ್ಲೆಯ ಕಮಲಾಪೂರ ತಾಲ್ಲೂಕಿನವರು. ಇವರು ದಿನಾಂಕ 25-07-1966 ರಲ್ಲಿ ಶ್ರೀ ಬಸವಣ್ಣಯ್ಯ ಹಾಗೂ ಶ್ರೀಮತಿ ಸರಸ್ವತಿ ದಂಪತಿಗಳ ಕಿರಿಯ ಸುಪುತ್ರರಾಗಿ ಕಲಬುರಗಿ ಜಿಲ್ಲೆಯ ಕಮಲಾಪೂರದಲ್ಲಿ ಜನಿಸಿದ್ದಾರೆ. ಇವರು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿ.ಯು.ಸಿ. ಶಿಕ್ಷಣವನ್ನು ಕಮಲಾಪೂರದಲ್ಲಿ ಪೂರೈಸಿಕೊಂಡು ಶ್ರೀ ಶರಣಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಸ್ನಾತಕೋತ್ತರ ಕನ್ನಡ ಎಂ.ಎ., ಎಂ.ಫಿಲ್.ಹಾಗೂ ಪಿಎಚ್.ಡಿ. ಪದವಿಗಳನ್ನು ಗುಲಬರ್ಗಾವಿಶ್ವವಿದ್ಯಾಲಯ ಕಲಬುರ್ಗಿಯಿಂದ ಪಡೆದುಕೊಂಡಿದ್ದಾರೆ. ಇವರು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಗೊಂಡು ಕನ್ನಡ ಉಪನ್ಯಾಸಕರಾಗಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆಯ ವಿವಿಧ ಸರಕಾರಿ ಕಾಲೇಜುಗಳಲ್ಲಿ ಸತತ 29 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಸೇಡಂ ರಸ್ತೆ, ಕಲಬುರಗಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 2010 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇವರ ಮಾರ್ಗದರ್ಶನದಲ್ಲಿ ಒಂಭತ್ತು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್.ಡಿ. ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಡಿ ಪೂರೈಸಿಕೊಂಡಿದ್ದಾರೆ. ಇದುವರೆಗೆ ಹನ್ನೆರಡು ಸ್ವತಂತ್ರ ಹಾಗೂ ಹದಿಮೂರು ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಶ್ರೀ ಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರಗಳು-ಒಂದು ಅಧ್ಯಯನ’ ಕುರಿತು ಎಂ.ಫಿಲ್. ಸಂಪ್ರಬಂಧ ಬರೆದು 1990 ರಲ್ಲಿ ಎಂ.ಫಿಲ್. ಪದವಿ ಹಾಗೂ ಡಾ. ಹಾ.ಮಾ. ನಾಯಕರ ಅಂಕಣ ಸಾಹಿತ್ಯ ಕುರಿತು ಮಹಾಪ್ರಬಂಧ ಮಂಡಿಸಿ 2006 ರಲ್ಲಿ ಪಿಎಚ್.ಡಿ. ಪದವಿ ಪಡೆದುಕೊಂಡಿದ್ದಾರೆ. ಸೃಷ್ಟಿ-ಸೌರಭ, ಮಾತು ಮಥಿಸಿದಾಗ, ಕನ್ನಡದಲ್ಲಿ ಅಂಕಣ ಸಾಹಿತ್ಯ, ಹಾ.ಮಾ. ನಾಯಕ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಸಾಹಿತ್ಯ ಸೌರಭ, ಹೈದ್ರಾಬಾದ್ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ದೇವರ ದಾಸಿಮಯ್ಯ, ಸಾಹಿತ್ಯ ಸಂಗಮ, ಹೈದ್ರಾಬಾದ್ ಕರ್ನಾಟಕದ ಕಾದಂಬರಿ ಹಾದಿ, ಪಾಶ್ಚಾತ್ಯ ಕಾವ್ಯಮೀಮಾಂಸೆ ಇವರ ಪ್ರಮುಖ ವಿಮರ್ಶಾ ಕೃತಿಗಳಾಗಿವೆ. ಆಯ್ದ ವೈಚಾರಿಕ ಪ್ರಬಂಧಗಳು, ಮಡಿವಾಳ ಮಾಚಿದೇವರ ಪುರಾಣ, ರಜತಗಿರಿ, ಹಳಗನ್ನಡ ಕಾವ್ಯಸಂಗ್ರಹ, ಜೋಗಿಕೊಳ್ಳ, ಆಯ್ದ ಅಂಕಣಬರಹಗಳು, ಭಾರತೀಯ ದಾರ್ಶನಿಕರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ವಿಜ್ಞಾನ ಕನ್ನಡ-2, ವಾಣಿಜ್ಯ ಕನ್ನಡ-3, ವಾಣಿಜ್ಯ ಕನ್ನಡ-4, ರಾಜ್ಯ ಶಿಕ್ಷಣ ನೀತಿಯಡಿ ಸ್ನಾತಕ ಪಠ್ಯದಲ್ಲಿ ವಾಣಿಜ್ಯ ಕನ್ನಡ-2 (ಭಾವೈಕ್ಯ ಬಿಂಬ ಹಾಗೂ ವ್ಯವಹಾರಿಕ ಕನ್ನಡ), ಸಾಹಿತ್ಯ ಮಂಥನ ಇವರ ಸಂಪಾದಿತ ಕೃತಿಗಳಾಗಿವೆ. ಇವರಿಗೆ ದೇವನಾಂಪ್ರಿಯ ಪ್ರಶಸ್ತಿ, ಚಿನ್ಮಯಶ್ರೀ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ ಸಂಗಮ ಕೃತಿಗೆ ಲಭಿಸಿವೆ. ಪರಮಪೂಜ್ಯ ಶ್ರೀ ಶ್ರೀ ಡಾ. ಮಹೇಶ್ವರಸ್ವಾಮಿಗಳು, ಪುಣ್ಯಕ್ಷೇತ್ರ ನಂದಿಪುರ ರವರು ಕೊಡಮಾಡಿದ ‘ಗುರು ಚರಂತಾರ್ಯಶ್ರೀ ಪ್ರಶಸ್ತಿ’ ಕೂಡ ದೊರಕಿದೆ. ಇವರು ಭಾರತೀಯ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯನ್ನು ಸ್ನಾತಕೋತ್ತರ ಕನ್ನಡ ವಿದ್ಯಾರ್ಥಿಗಳಿಗೆ 2010 ರಿಂದ ಇಲ್ಲಿಯವರೆಗೆ (2025ರ) ವರೆಗೆ ನಿರಂತರ ಪಾಠ-ಪ್ರವಚನ ಮಾಡುತ್ತ ಬಂದಿದ್ದಾರೆ. ಇವರ ಅಧ್ಯಯನ-ಅಧ್ಯಾಪನದ ಫಲವಾಗಿ ಮೂಡಿಬಂದ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಕೃತಿ ಅವರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿ. ಡಾ. ಬಿ.ಜಿ. ಕನಕೇಶಮೂರ್ತಿ ನಿಕಟಪೂರ್ವ ನಿರ್ದೇಶಕರು, ಪ್ರಸಾರಾಂಗ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಈ ಕೃತಿಯ ಬೆನ್ನುಡಿಯಲ್ಲಿ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಕಾವ್ಯಮೀಮಾಂಸೆಯ ಒಳನೋಟಗಳ ಕುರಿತು, ಕಾವ್ಯತತ್ವ-ಸತ್ವ ಹಾಗೂ ಸಿದ್ಧಾಂತಗಳೊಂದಿಗೆ ಗಮನ ಸೆಳೆಯುವ ಕೃತಿ. ಇದು ಸಂಗ್ರಹಯೋಗ್ಯವಾಗಿದ್ದು ಐ.ಎ.ಎಸ್., ಕೆ.ಎ.ಎಸ್., ಕೆ.ಸೆಟ್. ಪಿ.ಡಿ.ಓ ಮೊದಲಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದುದು’ ಎಂದಿರುವುದು ಮಹತ್ವದ್ದಾಗಿದೆ. ಪಾಶ್ವಾತ್ಯ ಕಾವ್ಯಮೀಮಾಂಸೆ ಪ್ಲೇಟೋ-ಅರಿಸ್ಟಾಟಲ್ ರವರ ಚರ್ಚೆ-ಚಿಂತನೆಯಿಂದಲೇ ಪ್ರಾರಂಭವಾಗಿದೆ. ಪ್ಲೇಟೋರವರ ‘ಅನುಕರಣ ವಾದ’, ಅರಿಸ್ಟಾಟಲ್ ರವರ ‘ಭಾವ ವಿರೇಚನಾ ಸಿದ್ಧಾಂತ’ ಗಳು ಯುರೋಪಿನ ಅಥೆನ್ಸ್, ಸ್ಪಾರ್ಟಾ, ಗ್ರೀಕ್ ದೇಶಗಳಲ್ಲಿ ಬಹುಕಾಲದ ವರೆಗೆ ಚರ್ಚೆ-ಚಿಂತನೆಯ ವಿಷಯವಾಗಿವೆ. ಆದರ್ಶ ರಾಜ್ಯದಲ್ಲಿ ಪ್ಲೇಟೋ ಚಿಕ್ಕ ಚಿಕ್ಕ ನಗರ ರಾಜ್ಯಗಳ ರಕ್ಷಣೆಗೆ ಕವಿಗಳ ಕಾವ್ಯ ಕೃತಿಗಳಿಗಿಂತ ತತ್ವಜ್ಞಾನ, ಸೈನಿಕ ರಾಜ್ಯ ಆಡಳಿತದ ಕಡೆಗೆ ಹೆಚ್ಚು ಗಮನಹರಿಸಿ, ಕವಿಗಳನ್ನು ಹಾಗೂ ಕಲಾಕಾರರನ್ನು ಆದರ್ಶ ರಾಜ್ಯದಿಂದ ಹೊರಗಿಟ್ಟ. ಹೋಮರ್ ಹಾಗೂ ಹೆಸಿಯಡ್ ಮೊದಲಾದವರ ಕೃತಿಗಳನ್ನು ಲೇವಡಿ ಮಾಡಿದ. ಕವಿಗಳು ಹಾಗೂ ಕಲಾಕಾರರು ಭಾವನೆಗಳನ್ನು ಹದಗೆಡಿಸಿ ಆದರ್ಶರಾಜ್ಯದ ಪರಿಕಲ್ಪನೆಗೆ ಧಕ್ಕೆ ತರುವರೆಂದು ಅವನು ಬಲವಾಗಿ ನಂಬಿದ್ದ. ಆದರೆ, ಅವನ ಶಿಷ್ಯ ಅರಿಸ್ಟಾಟಲ್ ಪ್ಲೇಟೋ ಸ್ಥಾಪಿಸಿದ ‘ಅಕಾಡೆಮಿ’ಗೆ ಸೇರಿಕೊಂಡ ಮೇಲೆ, ಇಬ್ಬರ ಮೈತ್ರಿ ಬಲಗೊಂಡಮೇಲೆ ಕ್ರಮೇಣ ಗುರುವಿನ ಕಲೆ, ಸಾಹಿತ್ಯ ಮೀಮಾಂಸೆಯ ದೃಷ್ಟಿಕೋನವನ್ನೇ ಬದಲಿಸಿದ್ದು ಈಗ ಇತಿಹಾಸವಾಗಿದೆ. ಅರಿಸ್ಟಾಟಲ್ ರವರ ತಾಯಿ ಜೀವಶಾಸ್ತ್ರ ವಿಷಯದಲ್ಲಿ ಶಿಕ್ಷಕಿಯಾದ್ದರಿಂದ ಅರಿಸ್ಟಾಟಲ್ ರವರ ವ್ಯಕ್ತಿತ್ವ ರೂಪುಗೊಂಡಿದ್ದು, ವೈಜ್ಞಾನಿಕವಾಗಿ ಆಲೋಚಿಸಲು ಮನೆಯ ವಾತಾವರಣವೂ ಕಾರಣವಾಗಿದ್ದು ತನ್ನ ವಾದಕ್ಕೆ ವೈಜ್ಞಾನಿಕ ಕಾರಣ ನಿಡಿದ್ದಾನೆ. ‘ಕವಿಗಳು, ಕಲಾಕಾರರು ಭಾವನೆಗಳನ್ನು ಉತ್ತೇಜಿಸಿ ಅವುಗಳ ಉಪಶಮನಕ್ಕೆ ಕಾರಣವಾಗುವುದರಿಂದ ಭಾವನೆಗಳು ಹದಗೆಡದೆ ಶಾಂತವಾಗಿ ಅಲ್ಲಿ ‘ಕೆಥಾರ್ಸಿಸ್’ ಪ್ರಕ್ರಿಯೆ ಅಂದರೆ ವಿರೇಚನ ಪ್ರಕ್ರಿಯೆ ಉಂಟಾಗಿ ಜನರು ನೈತಿಕ ಮಾರ್ಗದಲ್ಲಿ ನಡೆಯುತ್ತಾರೆಂಬುದು ಆತನ ಸಿದ್ಧಾಂತವಾಗಿದೆ. ಇದು ಗ್ರೀಕ್ ಹಾಗೂ ಇತರೇ ಯುರೋಪಿನ ದೇಶಗಳಲ್ಲಿ ಜನರ ಮನಸ್ಸಿಗೆ ನಾಟಿ ಮುಂದೆ ಬರುವ ಕಾವ್ಯಮೀಮಾಂಸೆಯ ದಾರಿ ಸುಗಮವಾಗಿದೆ. ಮಹಾಕಾವ್ಯ, ರುದ್ರನಾಟಕ, ಸುಖಾಂತ್ಯ ನಾಟಕ ಹಾಗೂ ಹೊರೇಸನ ಕಾಲಕ್ಕೆ ಮೇಳಗೀತೆಗಳಿಗೆ ಹೆಚ್ಚಿನ ಬೆಲೆ ಬಂದಿರುವುದನ್ನು ಡಾ. ಸುರೇಂದ್ರಕುಮಾರ ಕೆರಮಗಿಯವರು ಪ್ರಾರಂಭದ ಅಧ್ಯಾಯಗಳಲ್ಲಿ ಎಳೆ-ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಡಾ. ಸುರೇಂದ್ರಕುಮಾರ ಕೆರಮಗಿಯವರ ಪ್ರಸ್ತುತ ಕೃತಿಯಲ್ಲಿ : 1)ಪಾಶ್ಚಾತ್ಯ ಕಾವ್ಯಮೀಮಾಂಸೆಯ ಸ್ವರೂಪ-ವ್ಯಾಪ್ತಿ 2) ಪರಂಪರೆ ಮತ್ತು ಪ್ರಯೋಜನ 3) ಪ್ಲೇಟೋ ರವರ ಅನುಕರಣ ಸಿದ್ಧಾಂತ 4) ಅರಿಟ್ಟಾಟಲ್ ರವರ ಭಾವವಿರೇಚನಾ ಸಿದ್ಧಾಂತ, 5)ಹೊರೇಸನ ಔಚಿತ್ಯತತ್ತ್ವ ವಿಚಾರ 6) ಲಾಂಜಿನಸ್ ರವರ ಮಹೋನ್ನತ ಸಿದ್ಧಾಂತ 7) ಡಾಂಟೆಯವರ ಕಾವ್ಯಕಲೆಯ ಚಿಂತನೆ 8) ಸರ್ ಫಿಲಿಪ್‍ಸಿಡ್ನಿಯವರ ಕಾವ್ಯ ಕಲೆಯ ವಿಚಾರಗಳು 9) ಜಾನ್ ಡ್ರೈಡನ್ ರವರ ವಿಮರ್ಶಾ ವಿಚಾರಗಳು 10) ಶ್ಯಾಮುವೆಲ್ ಜಾನ್ಸನ್ ರವರ ವಿಮರ್ಶಾ ವಿಚಾರಗಳು 11) ವಿಲಿಯಂ ವಡ್ರ್ಸ್‍ವರ್ತ್ ರವರ ವಿಮರ್ಶಾ ವಿಚಾರಗಳು 12) ಎಸ್.ಟಿ. ಕೋಲರಿಡ್ಜ್ ರವರ ಕಲ್ಪನಾ ಸಿದ್ಧಾಂತ 13) ಪರ್ಸಿ.ಬೈಸೆ. ಶೆಲ್ಲಿಯವರ ವಿಮರ್ಶಾವಿಚಾರಗಳು 14) ಎಡ್ವರ್ಡ್ ಬುಲ್ಲೋ ರವರ ಮಾನಸಿಕ ದೂರ ಸಿದ್ಧಾಂತ 15) ಮ್ಯಾಥ್ಯೂ ಅರ್ನಾಲ್ಡ್ ರವರ ಕಾವ್ಯ ಹಾಗೂ ವಿಮರ್ಶಾ ವಿಚಾರಗಳು 16) ಬೆನಡಿಕ್ಟೋ ಕ್ರೋಚೆಯವರ ಅಭಿವ್ಯಕ್ತಿವಾದ 17) ಐ.ಎ. ರಿಚಡ್ರ್ಸ್ ರವರ ‘ಕಾವ್ಯ ಕಲೆಯ ಮೌಲ್ಯಮೀಮಾಂಸೆ’, ಟಿ.ಎಸ್. ಎಲಿಯಟ್ ರವರ ‘ವ್ಯಕ್ತಿ ನಿರಸನ ಸಿದ್ಧಾಂತ’, 19) ಎಫ್.ಆರ್. ಲಿವೀಸ್ ರವರ ಕಾವ್ಯ ಕಲೆಯ ವಿಚಾರ 20) ಪಾಶ್ಚಾತ್ಯ ಕಾವ್ಯಮೀಮಾಂಸೆಯ ಕುರಿತು ಎಂಬ ಇಪ್ಪತ್ತು ಅಧ್ಯಾಯಗಳಿವೆ. ಈ ಕೃತಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆಗೆ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಹಲವು ತಾತ್ವಿಕತೆಗಳಿಗೆ ಸ್ಪಷ್ಟನೆ ಒದಗಿಸಿದೆ. ಕಾವ್ಯ ಮೀಮಾಂಸೆಗೆ ಪಾಶ್ಚಾತ್ಯರ ಕೊಡುಗೆ : ಕಾವ್ಯವು ವಿಚಾರಪ್ರಧಾನವಾಗಿರಬೇಕು. ಕವಿಗಳ ವ್ಯಕ್ತಿತ್ವ ಉನ್ನತವಾಗಿರಬೇಕು. ಕವಿಗಳು ರಚಿಸುವ ಕೃತಿಗಳಲ್ಲಿ ನೀತಿ ಇರಬೇಕು. ಕವಿಗಳು ತಮ್ಮ ಕೃತಿಯಲ್ಲಿ ಪ್ರತಿಪಾದಿಸುವ ಸತ್ಯವು ಶಾಸ್ತ್ರದ ಸತ್ಯಕ್ಕೆ ಸಮ್ಮತವಾಗಿರಬೇಕು. ಕವಿಗಳು ಪ್ರತಿಪಾದಿಸುವ ತತ್ವವು ವಿಜ್ಞಾನಸತ್ಯಕ್ಕೆ ಸಮ್ಮತವಾಗಿರಬೇಕು. ಕವಿಗಳು ಚಾರಿತ್ರ್ಯಶೀಲರಾಗಿಬೇಕು. ಕವಿಗಳು ತತ್ವಜ್ಞಾನಿಗಳೂ, ಮಾನವೀಯ ಅಂತಃಕರಣ ಉಳ್ಳವರೂ ಆಗಿರಬೇಕು. ಕವಿಗಳು ತಮ್ಮ ಕಾವ್ಯಗಳಲ್ಲಿ ದುಷ್ಟ ಸಂಗತಿ , ಕೀಳು ಅಭಿರುಚಿಗಳನ್ನು ಅಭಿವ್ಯಕ್ತಿಸಬಾರದು. ಕವಿ-ಕಲಾವಿದರು ರಚಿಸುವ ಕಾವ್ಯಕಲೆಗಳಿಂದ ರಾಷ್ಟ್ರರಕ್ಷಕರಿಗೆ, ರಾಷ್ಟ್ರಜೀವನಕ್ಕೆ ತೊಂದರೆಯಾಗಿರಬಾರದು. 10)ಕವಿಗಳು ಮನಸ್ಸಿಗೆ ಬಂದಂತೆ ಬರೆಯಬಾರದು, ಹಾಗೆ ಬರೆದರೆ, ಅವು ಕೆಡುಕಿನ ಮೂಟೆಗಳಾಗುತ್ತವೆ. ಆದ್ದರಿಂದ ಅಂಥ ಕೃತಿಗಳನ್ನು ಬಹಿಷ್ಕರಿಸಬೇಕು. ಎಂಬ ಪ್ಲೇಟೋವಿನ ಕಾವ್ಯತತ್ವಚಿಂತನೆಯ ವಾದಗಳು ಮುಂದಿನವರಿಗೆ ದಾರಿದೀಪವಾಗಿವೆ. ಅರಿಸ್ಟಾಟಲ್ ಪ್ಲೇಟೋರವರ ಎಲ್ಲ ಆಕ್ಷೇಪಣೆಗಳಿಗೆ ಭಾವವಿರೇಚನಾ ಸಿದ್ಧಾಂತದ ಮೂಲಕ ಉತ್ತರ ಒದಗಿಸಿದ್ದಾರೆ. ಆದರೆ, ಈ ಕಟ್ಟು-ನಿಟ್ಟು, ಕಾವ್ಯಕ್ಕಷ್ಟೇ ಅಲ್ಲ ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತವೆ. ಪಾಶ್ಚಾತ್ಯರ ಭಾವಗೀತೆ, ಪ್ರಗಾಥ, ಶೋಕಗೀತೆ, ಮೇಳಗೀತೆಗಳಲ್ಲಿಯೂ ಇವು ಅನ್ವಯವಾಗುತ್ತವೆ. ತೀ.ನಂ.ಶ್ರೀ, ಡಾ. ಎಚ್. ತಿಪ್ಪೇರುದ್ರಸ್ವಾಮಿ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಪು.ತಿ.ನರಸಿಂಹಾಚಾರ್,ರಹಮತ್ ತರೀಕೆರೆ, ಓ.ಎಲ್. ನಾಗಭೂಷಣಸ್ವಾಮಿ, ಡಾ.ಎಸ್.ಎಂ.ಹಿರೇಮಠ, ಸಿ.ಆರ್.ಯರವಿನತಲೆಮಠ, ಬಿ.ಬಿ.ಹೆಂಡಿ ಮುಂತಾದವರ ಮೀಮಾಂಸೆ ಹಾಗೂ ವಾದಚಿಂತನೆಗಳು ಅಧ್ಯಯನ ಯೋಗ್ಯವಾಗಿವೆ. ಹಾಗಾಗಿಯೇ ನಮ್ಮಲ್ಲಿ ಕಾವ್ಯ ಬರೀ ರಸಪೂರ್ಣವಾಗಿದ್ದರೆ ಸಾಲದು, ಅದರಲ್ಲಿ ಧ್ವನಿ ಹಾಗೂ ಔಚಿತ್ಯಗಳು ಸೇರಿಕೊಂಡಿರಬೇಕೆಂಬ ಭಾರತೀಯ ಲಾಕ್ಷಣಿಕರ ಚಿಂತನಧಾರೆ ಸಾಮ್ಯತೆ ಪಡೆಯುತ್ತದೆ. ಡಾ. ಸುರೇಂದ್ರಕುಮಾರ ಕೆರಮಗಿಯವರು ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಯಲ್ಲಿ ಮೀಮಾಂಸಕರ ಜೀವನ, ವಿದ್ಯಾಭ್ಯಾಸ, ಸಾಧನೆ, ಸಲ್ಲಿಸಿದ ಸೇವೆಗಳ ಕುರಿತು ವಿವರಣೆ ನೀಡಿದ್ದಾರೆ. ಮೀಮಾಂಸಕರ ವಾದವೈಖರಿ, ಸಿದ್ಧಾಂತ ವೈಖರಿ ಹಾಗೂ ಪಾಶ್ಚಾತ್ಯ ಕಾವ್ಯ ಜಗತ್ತಿನಲ್ಲಿ ಅವು ಉಂಟುಮಾಡಿದ ಪರಿಣಾಮದ ಬಗೆಗೆ ಹೇಳಿದ್ದಾರೆ. ಮುಖ್ಯ ಕಾವ್ಯಮೀಮಾಂಸಕರ ತತ್ವ ವಿಚಾರಗಳಲ್ಲದೇ ವಡ್ರ್ಸವರ್ತ್- ಕೋಲರಿಡ್ಜ್ ರವರ ಲಿರಿಕಲ್ ಬಲ್ಲಾಡ್ಸ್ ಬಗೆಗೆ, ಗ್ರೀಕ್ ರುದ್ರನಾಟಕಗಳ ಬಗೆಗೆ, ಹೋಮರನ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡೆಸ್ಸಿ ಗಳ ಬಗೆಗೆ ಲಾಂಜೈನಸ್ ರವರ ಪೆರಿಹಾಪ್ಸಿಸ್ ಕೃತಿಯ ಬಗೆಗೆ ಬುಲ್ಲೋರವರ ಬಣ್ಣಗಳ ಮೀಮಾಂಸೆ ಹಾಗೂ ಐ.ಎ. ರಿಚಡ್ರ್ಸ್ ರವರ ಪ್ರಾಯೋಗಿಕ ವಿಮರ್ಶೆಯ ಬಗೆಗೆ ಕೆರಮಗಿಯವರು ತತ್ವ-ಸಿದ್ಧಂತಗಳ ನೆಲೆಗಟ್ಟಿನಲ್ಲಿ ವಿವರಿಸಿದ್ದಾರೆ. ದಿ ಮೀನಿಂಗ್ ಆಫ್ ಮೀನಿಂಗ್, ಪ್ರಿನ್ಸಿಪಲ್ಸ್ ಆಫ್ ಲಿಟರರಿ ಕ್ರಿಟಿಸಿಸಂ, ಪ್ರ್ಯಾಕ್ಟಿಕಲ್ ಕ್ರಿಟಿಸಿಸಂ, ಸೈನ್ಸ್ ಅಂಡ್ ಪೊಯಟ್ರಿ ಕುರಿತ ಐ.ಎ. ರಿಚಡ್ರ್ಸ್‍ರವರ ವಿಚಾರಗಳು ಈ ಕೃತಿಯಲ್ಲಿ ಎದ್ದುಕಾಣುತ್ತವೆ. ಸಮಾರೋಪ : ಪಾಶ್ಚಾತ್ಯ ಕಾವ್ಯಮೀಮಾಂಸೆ ಪ್ಲೇಟೋರವರ ಕಾವ್ಯ ಕುರಿತ ಆಕ್ಷೇಪಣಾ ಧ್ವನಿಯಿಂದಲೇ ಪ್ರಾರಂಭವಾಗಿ ಅವನ ಶಿಷ್ಯ ಅರಿಸ್ಟಾಟಲ್ ನಿಂದಲೇ ಸರಿದಾರಿತೋರುವ ನಿಟ್ಟಿನಲ್ಲಿ ಕಾರ್ಯಪ್ರವರ್ತ ವಾಗಿದೆ. ತತ್ವಜ್ಞಾನಿಗಳಿಗೆ, ಸೈನಿಕರಿಗೆ ಪ್ಲೇಟೋ ತನ್ನ ಆದರ್ಶರಾಜ್ಯದಲ್ಲಿ ಪ್ರಾಮುಖ್ಯತೆ ಕೊಟ್ಟ ಕಾರಣದಿಂದ ಗ್ರೀಕ್ ನಗರರಾಜ್ಯಗಳಲ್ಲಿ ಕವಿ-ಕಲಾವಿದರಿಗೆ ಸ್ಥಾನ-ಮಾನಗಳು ಲಭಿಸಿಲ್ಲ. ಅರಿಸ್ಟಾಟಲ್ ತನ್ನ ವಾದ ಮಂಡಿಸಿದಮೇಲೆ ಕವಿಗಳಿಗೆ ಕಲಾಕಾರರಿಗೆ ಸ್ಥಾನ-ಮಾನಗಳು ಲಭಿಸಿವೆ. ಇವರಿಬ್ಬರ ವಾದ ಚರ್ಚೆಗಳು ಬಹುಕಾಲ ಅಕಾಡೆಮಿಯಲ್ಲಿ ಅನುರಣಿಸಿ ಮುಂದೆ ಮಾಹಾಕಾವ್ಯಗಳ ಬಗೆಗೆ ಜನರು ಆಸಕ್ತಿ ಕಳೆದುಕೊಳ್ಳಲಾರಂಭಿಸಿದಾಗ ಕ್ರಿ.ಶ. ಒಂದನೇ ಶತಮಾನದ ಹೊರೇಸ್ ಪ್ರಸ್ತುತ ಕಾವ್ಯಕಲೆಯ ಔಚಿತ್ಯದ ಕುರಿತು ಚರ್ಚೆಚಿಂತನೆ ನಡೆಸಿದ್ದಾನೆ. ಗುಲಾಮನಾಗಿದ್ದ ಹೊರೇಸ ಸೀಸರನ ಗೆಳೆಯನ ಸಹಾಯದಿಂದ ಅರಮನೆಗೂ ಕಾಲಿರಿಸಿ ತನ್ನ ಅಗಾಧ ವಾದ ತರ್ಕ-ಪಾಂಡಿತ್ಯಗಳಿಂದ ಹೆಸರಾಗಿ ಅಥೆನ್ಸ್ ನ ಶಕ್ತಿಶಾಲಿ ಭಾವಗೀತರಚನೆಕಾರನಾಗಿ ಹೊರಹೊಮ್ಮಿದ. ತನ್ನ ವಿಮರ್ಶೆಯಲ್ಲಿ ಮೇಳಗೀತೆಗಳ ಕುರಿತು ಅದರ ಲಘು ಅವಶ್ಯಕತೆಯ ಕುರಿತು ಹೇಳಿದ್ದಾನೆ. ಕಲೆ, ಸಾಹಿತ್ಯ, ಸಂಗೀತ ಅವು ಹಿತ-ಮಿತವಾಗಿ ಬರಬೇಕು ಔಚಿತ್ಯಪೂರ್ಣವಾಗಿ ಬರಬೇಕೆಂದು ಪ್ರತಿಪಾದಿಸಿದ್ದಾನೆ. ಗ್ರೀಕ್ ನ ವಿಮರ್ಶಾ ಪರಂಪರೆಯ ಕೊನೆಯ ಕೊಂಡಿ ಲಾಂಜಿನಸ್ ತನ್ನ ಮಹೋನ್ನತ ಸಿದ್ಧಾಂತದಿಂದ ಕಾವ್ಯ ಬರೆಯುವವರಿಗೆ ಮತ್ತೆ ಸ್ಫೂರ್ತಿ ತುಂಬಿದ್ದಾನೆ. ಇಂಗ್ಲೆಂಡಿನ ಎಸ್.ಟಿ.ಕೋಲರಿಡ್ಜ್, ಟಿ.ಎಸ್. ಎಲಿಯಟ್, ಸರ್ ಫಿಲಿಪ್ ಸಿಡ್ನಿ, ಸ್ಯಾಮ್ಯುವೆಲ್ ಜಾನ್ಸನ್, ಜಾನ್ ಡ್ರೈಡನ್, ವಿಲಿಯಂ ವಡ್ರ್ಸ್‍ವರ್ತ್, ಪಿ.ಬಿ.ಶೆಲ್ಲಿ, ಮ್ಯಾಥ್ಯೂ ಅರ್ನಾಲ್ಡ್, ಐ.ಎ. ರಿಚಡ್ರ್ಸ, ಎಲಿಯಟ್, ಎಫ್.ಆರ್. ಲಿವೀಸ್, ಇಟಲಿಯ ಹೊರೇಸ್, ಡಾಂಟೆ, ಕ್ರೋಚೆ, ಸ್ವಿಡ್ಜರ್ ಲ್ಯಾಂಡ್ ನ ಎಡ್ವರ್ಡ್ ಬಲ್ಲೋ ಹೀಗೆ ಹಲವು ದೇಶಗಳಿಂದ ಹರಿದು ಬಂದ ಪಾಶ್ಚಾತ್ಯ ಕಾವ್ಯಮೀಮಾಂಸಕರ ಚಿಂತನ ಧಾರೆಗೆ ಡಾ. ಸುರೇಂದ್ರಕುಮಾರ ಕೆರಮಗಿಯವರ ಪ್ರಸ್ತುತ ಕೃತಿ ಕನ್ನಡಿ ಹಿಡಿದಿದೆ. ಡಾ. ಸುರೇಂದ್ರಕುಮಾರ ಕೆರಮಗಿಯವರ ಪ್ರಸ್ತುತ ಕೃತಿಯಲ್ಲಿ ಸಂಶೋಧನಾತ್ಮಕ ಹಾಗೂ ವಿಮರ್ಶಾತ್ಮಕ ದೃಷ್ಟಿಕೋನಗಳು ಅಭಿವ್ಯಕ್ತವಾಗಿದ್ದು ವಾದ-ಸಿದ್ಧಾಂತ-ಹಾಗೂ ಮುಖ್ಯಾಂಶಗಳನ್ನು ಶಿಸ್ತಿನ ನೆಲೆಯಲ್ಲಿ ಕಟ್ಟಿಕೊಟ್ಟಿರುವುದರಿಂದ ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ ಎಂಬುದರಲ್ಲಿ ಯಾ

Fields of Study & Subjects

Literary Theory and Cultural Hermeneutics Poetry Analysis and Criticism Ethics Aesthetics and Art

Publication details

Journal / source
Zenodo (CERN European Organization for Nuclear Research)
Publication date
15 February 2026
Language
KN