ನವಯ ಮತತ ನವಯತತರ ವಮರಶಗಳ ಸವರಪ (ಕವಪ ಅವರ ಕದಬರಗಳನನ ಅನಲಕಷಸ)

Read full text
Authors: ರಮ್ಯ.ಹೆಚ್.ಎಸ್.
Cited by: 0

Abstract

ಪೀಠಿಕೆ: ಕಾಲದಿಂದ ಕಾಲಕ್ಕೆ ಬದಲಾಗುವ ರಾಜಕೀಯ, ಸಾಮಾಜಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಹಿತ್ಯ ಕೃತಿಗಳು ರಚನೆಯಾಗುವಂತೆಯೇ ವಿಮರ್ಶೆಯ ದೃಷ್ಟಿಕೋನಗಳು ಸಹ ಬದಲಾಗುತ್ತವೆ. ಇಂತಹ ವಿಮರ್ಶಾ ದೃಷ್ಠಿಕೋನಗಳು ಆಯಾ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ತಮ್ಮದೇ ಆದ ವಿಶಿಷ್ಟ ಚಿಂತನೆಗಳನ್ನು ಓದುಗರಲ್ಲಿ ನೆಲೆಗೊಳಿಸಲು ಪ್ರಯತ್ನಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ನವೋದಯ ಕಾಲದ ವಿಮರ್ಶೆಯು ರಸ ವಿಮರ್ಶೆ ಎನಿಸಿಕೊಂಡರೆ, ನವ್ಯ ವಿಮರ್ಶೆಯು ಕೃತಿಕೇಂದ್ರಿತ ನೆಲೆಯ ವಿಮರ್ಶೆ ಎನಿಸಿಕೊಳ್ಳುವುದು. ಹಾಗೆಯೇ ಎಪ್ಪತ್ತರ ದಶಕದ ನಂತರ ಕಾಣಿಸಿಕೊಂಡ ನವ್ಯೋತ್ತರ ವಿಮರ್ಶೆಯನ್ನು ಸಮಾಜ-ಸಂಸ್ಕೃತಿ ಕೇಂದ್ರಿತ ವಿಮರ್ಶೆ ಎಂದು ಗುರುತಿಸಲಾಗಿದೆ. ಒಂದೇ ಸಾಹಿತ್ಯ ಕೃತಿಯು ಈ ಎಲ್ಲಾ ಕಾಲದಲ್ಲೂ ವಿಮರ್ಶೆಗೆ ಒಳಗಾಗುವ ಸಂದರ್ಭ ಬಂದರೆ, ಅದು ಆಯಾ ಕಾಲಘಟ್ಟದ ದೃಷ್ಟಿಕೋನಕ್ಕೆ ಮಣಿದು ಮಾಡಲಾದ ಕೃತಿ ವಿಮರ್ಶೆಯಾಗಿರುತ್ತದೆ. ಸಾಹಿತ್ಯ ಕೃತಿಗಳು ಆಯಾ ಕಾಲದ ದೃಷ್ಟಿಕೋನಕ್ಕೆ ತಕ್ಕ ಹಾಗೆಯೇ ರಚನೆಯಾಗಿರುವುದನ್ನು ಕಾಣಬಹುದು. ಕೆಲವು ಕೃತಿಗಳು ಮಾತ್ರ ಆಕಸ್ಮಿಕದಂತೆ ಒಂದು ನಿರ್ದಿಷ್ಟ ಮಾದರಿಗೆ ಒಗ್ಗುವ ಹಾಗೆ ರಚನೆಯಾಗದೆ, ಎಲ್ಲಾ ಕಾಲಕ್ಕೂ ಸಲ್ಲುವಂತೆ ನಿಂತು ಬಿಡುತ್ತವೆ. ಅಂತಹ ಕೃತಿಗಳ ಸಾಲಿನಲ್ಲಿ ಕುವೆಂಪು ಅವರ ಕಾದಂಬರಿಗಳು ನಿಲ್ಲುತ್ತವೆ. ಕೆಲವೊಮ್ಮೆ ಸಾಹಿತ್ಯ ಕೃತಿಯನ್ನು ವಿಮರ್ಶಿಸುವ ವಿಮರ್ಶೆ ಮಾದರಿಗಳೂ ಸಹ ಹೀಗೆ ಸಾರ್ವಕಾಲಿಕ ದೃಷ್ಟಿಕೋನಗಳನ್ನು ಒಳಗೊಂಡಿರುತ್ತವೆ. ಇಂಥ ವಿಮರ್ಶೆಗಳು ಸಾಹಿತ್ಯಿಕ ನೆಲೆಯಲ್ಲಿ ನಿರೂಪಿತವಾಗಿರುತ್ತವೆ. ಉದ್ದೇಶ: ನವ್ಯ ಮತ್ತು ನವ್ಯೋತ್ತರ ಕಾಲಘಟ್ಟದ ವಿಮರ್ಶಕರು ಕುವೆಂಪು ಅವರ ಕಾದಂಬರಿಗಳನ್ನು ವಿಮರ್ಶೆ ಮಾಡುವಾಗ ಅವರ ದೃಷ್ಟಿಕೋನವನ್ನು ಗುರುತಿಸುವುದು. ಒಂದು ಕಾಲಘಟ್ಟದಲ್ಲಿ ರಚನೆಯಾದಂತಹ ಒಂದು ಸಾಹಿತ್ಯ ಕೃತಿಯನ್ನು ನವ್ಯ ಮತ್ತು ನವ್ಯೋತ್ತರ ಕಾಲಘಟ್ಟದ ವಿಮರ್ಶಕರು ವಿಮರ್ಶೆ ಮಾಡಿದ ಬಗೆಗಳನ್ನು ಅರಿಯುವುದು. ನವ್ಯ ವಿಮರ್ಶಕರು ಸಾಹಿತ್ಯ ಕೃತಿಯೊಂದನ್ನು ವಿಮರ್ಶೆ ಮಾಡಲು ಬಳಸಿದ ವಿಮರ್ಶೆಯ ಪರಿಕರಗಳ ಸ್ವರೂಪವನ್ನು ತಿಳಿಯುವುದು. ನವ್ಯೋತ್ತರ ಕಾಲಘಟ್ಟದ ವಿಮರ್ಶಕರು ಕೃತಿ ವಿಮರ್ಶೆ ಮಾಡಲು ಬಳಸಿದ ವಿಮರ್ಶೆಯ ಮಾನದಂಡಗಳ ಸ್ವರೂಪವನ್ನು ಕಂಡುಕೊಳ್ಳುವುದು. ನವ್ಯ ವಿಮರ್ಶೆಗಿಂತ ಭಿನ್ನವಾದ ನವ್ಯೋತ್ತರ ವಿಮರ್ಶೆಯ ಸ್ವರೂಪವನ್ನು ಗುರುತಿಸುವುದು. ಸಮಕಾಲೀನ ವಿಮರ್ಶಕರ ವಿಮರ್ಶೆಗಳಲ್ಲಿಯೇ ಹೇಗೆ ಭಿನ್ನ ನೆಲೆಗಳು ಕಾಣುತ್ತವೆ ಎಂಬುದನ್ನು ಶೋಧಿಸುವ ಮೂಲಕ ವಿಶ್ಲೇಷಿಸುವುದು. ನವ್ಯ ವಿಮರ್ಶೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ನವ್ಯೋತ್ತರ ವಿಮರ್ಶೆಯ ಸ್ವರೂಪವನ್ನು ಕಂಡುಕೊಳ್ಳುವುದು. ವ್ಯಾಪ್ತಿ: ಕುವೆಂಪು ಅವರ ಮೊದಲ ಕಾದಂಬರಿಯಾದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ'ಯು ೧೯೩೬ರಲ್ಲಿ ರಚನೆಯಾಗಿದ್ದು, ಇವರ ಮತ್ತೊಂದು ಕಾದಂಬರಿಯಾದ ‘ಮಲೆಗಳಲ್ಲಿ ಮದುಮಗಳು' ಮೊದಲು ಮುದ್ರಣಗೊಂಡಿದ್ದು ೧೯೬೭ರಲ್ಲಿ. ಈ ಎರಡು ಕಾದಂಬರಿಗಳ ಮೇಲೆ ಬಂದ ನವ್ಯ ಮತ್ತು ನವ್ಯೋತ್ತರ ವಿಮರ್ಶೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ನವ್ಯ ವಿಮರ್ಶಕರಾದ ಕೀರ್ತಿನಾಥ ಕುರ್ತುಕೋಟಿ, ಗಿರಡ್ಡಿ ಗೋವಿಂದರಾಜ, ಎಂ.ಜಿ.ಕೃಷ್ಣಮೂರ್ತಿಯವರ ವಿಮರ್ಶೆಗಳನ್ನು ಮತ್ತು ನವ್ಯೋತ್ತರ ವಿಮರ್ಶಕರಾದ ಡಿ.ಆರ್.ನಾಗರಾಜ, ದೇವಯ್ಯ ಹರವೆ, ಕೆ.ವಿ.ನಾರಾಯಣ ಅವರ ವಿಮರ್ಶೆಗಳನ್ನು ಅನುಲಕ್ಷಿಸಲಾಗಿದೆ. ವಿಧಾನ: ಈ ಲೇಖನವು ನಿಗಮನ ಮಾದರಿಯ ವಿಶ್ಲೇಷಣಾ ವಿಧಾನವನ್ನು ಅನುಸರಿಸಿದೆ. ಆಯ್ದ ವಿಮರ್ಶಕರ ವಿಮರ್ಶೆಯ ಮಾದರಿಯನ್ನು ತೌಲನಿಕವಾಗಿ ನೋಡುವ ಮೂಲಕ ಸಾಹಿತ್ಯ ತತ್ತ್ವಗಳ ಹುಡುಕಾಟಕ್ಕೆ ಮುಂದಾಗಿದೆ. ಮಿತಿ: ನವ್ಯ ಮತ್ತು ನವ್ಯೋತ್ತರ ವಿಮರ್ಶಕರ ವಿಮರ್ಶೆಯಲ್ಲಿ ಕಾಣುವ ಪಾಶ್ಚಾತ್ಯ ವಿಮರ್ಶೆ ಚಿಂತನೆಗಳ ಪ್ರಭಾವನ್ನಾಗಲೀ ಅಥವಾ ಪಾಶ್ಚಾತ್ಯ ವಿಮರ್ಶೆಯ ಚಿಂತನೆಗಳನ್ನು ಕನ್ನಡಕ್ಕೆ ಒಗ್ಗಿಸಿಕೊಂಡ ಬಗೆಯನ್ನಾಗಲೀ ಇಲ್ಲಿ ಪ್ರಸ್ತಾಪಿಸಲು ಹೊರಟಿಲ್ಲ. ಇದು ಈ ಲೇಖನದ ಮಿತಿಯಾಗಿದೆ. ಚರ್ಚೆ: ನವ್ಯ ವಿಮರ್ಶೆಯ ಸ್ವರೂಪ:- ಕೀರ್ತಿನಾಥ ಕುರ್ತುಕೋಟಿ: “ಯುಗಧರ್ಮ ಹಾಗೂ ಸಾಹಿತ್ಯ ದರ್ಶನ” ಕೃತಿಯಲ್ಲಿ ನವ್ಯ ವಿಮರ್ಶೆಯ ಮಾನದಂಡಗಳಿಂದ ಕೀರ್ತಿನಾಥ ಕುರ್ತುಕೋಟಿಯವರು “ಕಾನೂರು ಸುಬ್ಬಮ್ಮ ಹೆಗ್ಗಡಿತಿ” ಕಾದಂಬರಿಯನ್ನು ವಿಮರ್ಶಿಸುವಾಗ,- 1“ಈ ನಿರೂಪಣೆಯಲ್ಲಿ ಏನೂ ಮುಚ್ಚುಮರೆಯಿಲ್ಲ. ಉಳಿದ ಕಾದಂಬರಿಗಳಲ್ಲಿಯಂತೆ ಈ ವ್ಯಕ್ತಿಗಳ ನಡೆವಳಿಕೆ ವಿಶಿಷ್ಟ ಮಾದರಿಯಲ್ಲ. ............ ಮಲೆನಾಡಿನ ಗೌಡರೆಲ್ಲ ಕೂಡಿ ಹೆಂಡ ಕುಡಿಯುವದನ್ನು ಬಿಡಲು ಮಾಡುವ ವ್ಯರ್ಥಪ್ರತಿಜ್ಞೆ ಮನುಷ್ಯನ ದೌರ್ಬಲ್ಯದ ಸುಂದರ ವಿಡಂಬನೆಯಾಗಿದೆ. ವೆಂಕಟಪ್ಪ ಜೋಯಿಸರು ಜ್ಞಾನದಂತೆ ತೋರುವ ಅಜ್ಞಾನ, ಅವರ ಉದ್ಧತವಾದ ನಡೆವಳಿಕೆ, ಮೋಸ ಇವುಗಳಲ್ಲಿನ ವಿಡಂಬನ ಹೆಚ್ಚು ತೀಕ್ಷ್ಣವಾಗಿದೆ. ............ಹೂವಯ್ಯ ಹೆಚ್ಚು ಹೆಚ್ಚು ಆತ್ಮನಿಷ್ಠನಾಗುತ್ತ ನಡೆದಿದ್ದಾನೆ. ಕಾದಂಬರಿಯ ಉಳಿದ ಕ್ರಿಯೆಗಳಲ್ಲಿರುವ ಚಟುವಟಿಕೆ ಚೈತನ್ಯಗಳು ಅದರ ಬೌದ್ಧಿಕತೆಯಲ್ಲಿ ಇಲ್ಲ. .........”1 ಎನ್ನುತ್ತಾರೆ. ಈ ಕಾದಂಬರಿಯಲ್ಲಿ ಬಳಕೆಯಾಗಿರುವ ತಂತ್ರ, ವಿಡಂಬನೆಯ ಸಂದರ್ಭಗಳು, ಕೇಂದ್ರವಸ್ತು ಮತ್ತು ಕೇಂದ್ರ ಪ್ರಜ್ಞೆ, ಕೃತಿಯ ಬಂಧ, ಬಿಡಿ ಪಾತ್ರಗಳ ವಿಶ್ಲೇಷಣೆ, ಬಳಕೆಯಾದ ವಿಶಿಷ್ಟ ಭಾಷೆಯ ಕಡೆಗೆ ಹೆಚ್ಚು ಒತ್ತು ನೀಡುವ ಕೃತಿಕೇಂದ್ರಿತ ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಇವುಗಳಿಂದಲೇ ಕಾದಂಬರಿಯನ್ನು ಮೌಲ್ಯಮಾಪನ ಮಾಡುವ ಮಾದರಿಯನ್ನು ಕಾಣಬಹುದು. ಇಲ್ಲಿ ಕೃತಿಯನ್ನು ಅರ್ಥೈಸಲು ಕೃತಿ ರಚನೆಯ ತಾಂತ್ರಿಕ ಅಂಶಗಳೇ ಮಾನಕಗಳಾಗಿವೆ. ಗಿರಡ್ಡಿ ಗೋವಿಂದರಾಜ: ವಿಮರ್ಶಕರಾದ ಗಿರಡ್ಡಿ ಗೋವಿಂದರಾಜ ಅವರು ತಮ್ಮ “ಕಾದಂಬರಿಯಲ್ಲಿ ವೈಚಾರಿಕತೆ” ಎಂಬ ವಿಮರ್ಶಾ ಲೇಖನದಲ್ಲಿ ಕಾದಂಬರಿಗಳನ್ನು ಕುರಿತು ವಿಶ್ಲೇಷಿಸುತ್ತಾ, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ ಕುರಿತು- 1“ಹೂವಯ್ಯನ ವೈಚಾರಿಕತೆ ಕೇವಲ ವ್ಯಕ್ತಿಗತವಾಗಿದೆಯೇ ಹೊರತು, ಇಡಿಯ ಕಾದಂಬರಿಯ ಸಂವಿಧಾನದಲ್ಲಿ ಒಡಮೂಡಬಹುದಾದ ಅರ್ಥಪೂರ್ಣತೆಗೂ ಇದಕ್ಕೂ ಏನೂ ಸಂಬಂಧವಿಲ್ಲ. ಹ್ಯಾಮ್ಲೆಟನ ಚಿಂತನೆಯಂತೆ ಹೂವಯ್ಯನದು ಇಡಿಯ ಕಥೆಯ ಹಣೆಬರಹವನ್ನೇ ನಿರ್ಧರಿಸುವಷ್ಟು ಕ್ರಿಯಾಶೀಲವಾದದ್ದಲ್ಲ. ಆದರೆ ಇಲ್ಲಿಯೂ ಅದು ಹೂವಯ್ಯನ ನಿಷ್ಕ್ರೀಯತೆಯಲ್ಲಿ ಪರ್‍ಯವಸಾನವಾಗುತ್ತದೆ. ______________________________________________________________________________________________________________________________________________________________________________________________________________________________________________________________________________________________________________ ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಕೀರ್ತಿನಾಥ ಕುರ್ತುಕೋಟಿ, ಪುಟ ಸಂಖ್ಯೆ.೨೨೬-೨೩೧. ಹೂವಯ್ಯನ ನಿಷ್ಕ್ರೀಯತೆ ಸುಬ್ಬಮ್ಮನ ಪತನದ ಮೂಲಕ ಸಂಭವಿಸು ಕಾನೂರು ಮನೆತನದ ದುರಂತಕ್ಕೆ ತುಸುಮಟ್ಟಿಗೆ ಕಾರಣವಾಗುವದೇನೋ ನಿಜ. ಆದರೆ ಕಾನೂರು ಮನೆತನದ ದುರಂತವೇ ಕಾದಂಬರಿಯ ಕೇಂದ್ರವಸ್ತುವಲ್ಲ. ಸುಬ್ಬಮ್ಮನ ದುರಂತವೇ ಕಾದಂಬರಿಯ ಕೇಂದ್ರವಸ್ತುವೆನ್ನುವದಾದರೆ, ಈ ಕಾದಂಬರಿಯನ್ನು ಅದ್ಭುತ ಚಟುವಟಿಕೆಯಿಂದ ತುಂಬಿದ ವಿವರಪೂರ್ಣ ಚಿತ್ರಗಳು ತೀರಾ ಅನವಶ್ಯಕವಾಗುತ್ತದೆ. . ............ಕಾದಂಬರಿಯ ಮುಖ್ಯ ಘಟನೆಗಳಲ್ಲೊಂದಾದ ಸುಬ್ಬಮ್ಮನ ದುರಂತ ಮಲೆನಾಡಿನ ಒಟ್ಟು ಜೀವನದ ಮೇಲೆ ಯಾವ ಪರಿಣಾಮವನ್ನೂ ಮಾಡಿಲ್ಲ. ಹಾಗಾದರೆ ಈ ಕಾದಂಬರಿಯ ಕೇಂದ್ರವಸ್ತುವಾದರೂ ಏನು? ಪ್ರತಿ ಪುಟಕ್ಕೂ ಅದಮ್ಯ ಉತ್ಸಾಹದಿಂದ ಉಕ್ಕಿ ಹರಿಯುವ ಜೀವನದ ವೈವಿಧ್ಯವನ್ನೆಲ್ಲಾ ಒಟ್ಟುಗೂಡಿಸಿ ಹಿಡಿದಿರುವ ಬಂಧ ಯಾವುದು?”1 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಕುರಿತು-2“ಈ ಕಾದಂಬರಿಗಳಲ್ಲಿ ಸಾಂಪ್ರದಾಯಿಕ ಅರ್ಥದ ಸಾವಯವ ಸಂವಿಧಾನವಾಗಲಿ, ಪ್ರಸಂಗನಿಷ್ಠ ಸಂವಿಧಾನವಾಗಲಿ ಇಲ್ಲ. ಸಾವಯವ ಸಂವಿಧಾನವುಳ್ಳ ಕಾದಂಬರಿ ಎಷ್ಟೇ ಉಪಕಥೆಗಳನ್ನು ಹೊಂದಿದ್ದರೂ, ಭಾವನಾತ್ಮಕ ಅಥವಾ ನೈತಿಕ ಬಿಕ್ಕಟ್ಟು ಒಂದೇ ಆಗಿರುತ್ತದೆ. ಕಥೆಯ ವಸ್ತು ಈ ಬಿಕ್ಕಟ್ಟಿನಲ್ಲಿಯೇ ತನ್ನ ಅರ್ಥಪೂರ್ಣತೆಯನ್ನು ಕಂಡುಕೊಳ್ಳುತ್ತದೆ. ಪುಟ್ಟಪ್ಪನವರ ಕಾದಂಬರಿಗಳಲ್ಲಿ ಇಂಥ ಕೇಂದ್ರಸ್ಥವಾದ ಒಂದು ಬಿಕ್ಕಟ್ಟು ಇಲ್ಲವೆನ್ನುವುದೇ ಗೊಂದಲಕ್ಕೆ ಕಾರಣವಾಗಿದೆ. ಈ ಎರಡೂ ಕಾದಂಬರಿಗಳಲ್ಲಿ ವಿಭಿನ್ನ ವಸ್ತುಗಳೆಲ್ಲ ಸೇರಿ ಪ್ರಕಟಪಡಿಸುವ ಅರ್ಥಪೂರ್ಣತೆ ಒಮ್ಮುಖವಾಗದೆ ಹಂಚಿಹೋಗಿದೆ. 'ಮಲೆಗಳಲ್ಲಿ ಮದುಮಗಳು' ಕಾದಂಬರಿಗೆ ಪ್ರಸಂಗನಿಷ್ಠ ಸಂವಿಧಾನದಲ್ಲಿ ಕೇಂದ್ರಪಾತ್ರವಿಲ್ಲ. ಇಲ್ಲಿನ ಅನುಭವಗಳು ಯಾವುದೇ ಒಂದು ವ್ಯಕ್ತಿಯ ಕಣ್ಣಿಗಾಗಲಿ, ಮನಸ್ಸಿಗಾಗಲಿ ಸೀಮಿತವಾಗಿಲ್ಲ. ಪುಟ್ಟಪ್ಪನವರ ಕಾದಂಬರಿಗಳಲ್ಲಿ ಲೇಖಕನ ಸಮಗ್ರದರ್ಶನ ಮೂಡಿವುದಿಲ್ಲ. ಎಂದರೆ, ಇವುಗಳ ಸಮಗ್ರ ರಚನೆಯಲ್ಲಿ ಲೇಖಕನ ವೈಯಕ್ತಿಕ ವೈಚಾರಿಕತೆ ಕೆಲಸ ಮಾಡಿಲ್ಲ. ಇಂಥ ಸಂದರ್ಭದಲ್ಲಿ ಸಂವಿಧಾನದ ಸರಿಯಾದ ಪ್ರಜ್ಞೆಯಿಲ್ಲದ ಲೇಖಕ ಕೇವಲ ಸಂಬಂಧವಿಲ್ಲದ, ಆದರೆ ಆಕರ್ಷಕವಾದ ಜೀವನ ಪರ್‍ಯವಸಾನವಾಗಬಹುದು”.2 ವಿಶ್ಲೇಷಣೆ:-ಗಿರಡ್ಡಿಯವರು ಕುವೆಂಪು ಅವರ ಕಾದಂಬರಿಗಳ ಬಗೆಗೆ ಮಾಡಿದ ವಿಮರ್ಶೆಯು, ಮೇಲೆ ನೋಡಿದ ಕೀರ್ತಿನಾಥ ಕುರ್ತುಕೋಟಿಯವರ ವಿಮರ್ಶೆಯಂತೆ ಬಿಡಿ ಬಿಡಿ ಪಾತ್ರಗಳ, ಭಾಗಗಳ ಕಡೆಗೆ ಹೆಚ್ಚು ಗಮನವರಿಸದೇ ಇದ್ದರೂ ಸಹ ಇವರೂ ಕೂಡ ಕಾದಂಬರಿಯ ವಸ್ತು ವಿನ್ಯಾಸ, ಕಥಾತಂತ್ರ, ಕಥಾಸಂವಿಧಾನ, ಕೇಂದ್ರ ಪ್ರಜ್ಞೆ ಹೊಂದಿದ ಪಾತ್ರ, ಬಂಧ(ಶಿಲ್ಪ), ಸ್ವರೂಪ ಬಗೆಗೆಯೇ ಒಲವು ತೋರಿಸುವುದು ಕಾಣುತ್ತದೆ. ಸೋಜಿಗ ಎನಿಸುವ ಸಂಗತಿಯೆಂದರೆ, ಈ ನೆಲದಲ್ಲಿ ಹುಟ್ಟಿದ ಕಾದಂಬರಿಯ ಪಾತ್ರವೊಂದನ್ನು ಷೇಕ್ಸ್‌ಪಿಯರ್‌ನ ನಾಟಕದ ಹ್ಯಾಮ್ಲೆಟ್ ಪಾತ್ರಕ್ಕೆ ಹೋಲಿಸಲು ಮುಂದಾಗಿರುವುದು. ಸಾಹಿತ್ಯದ ಎಲ್ಲಾ ಪ್ರಕಾರಗಳ ವಿಮರ್ಶೆಗೆ ನವ್ಯ ವಿಮರ್ಶಕರು ಕಾವ್ಯ ವಿಮರ್ಶೆ ಮಾಡುವ ಮಾನದಂಡಗಳನ್ನೇ ಬಳಸುತ್ತಿದ್ದಾರೆ ಎಂದು ಇಲ್ಲಿ ಗುರುತಿಸಿಕೊಳ್ಳಬಹುದಾಗಿದೆ. ನವ್ಯ ವಿಮರ್ಶಕರು ಕಾದಂಬರಿಯನ್ನು ವಿಮರ್ಶಿಸುವ ಪ್ರತ್ಯೇಕ ವಿಮರ್ಶೆ ಮಾದರಿಯನ್ನು ರೂಪಿಸಿಕೊಂಡಿಲ್ಲ ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ನವ್ಯ ವಿಮರ್ಶ ಮಾನದಂಡಗಳು ಈ ಕೃತಿಗಳ ವಿಮರ್ಶೆಗೆ ಅನುಗುಣವಾಗಿಲ್ಲ ಎಂದೋ, ಈ ಕಾದಂಬರಿಗಳು ನವ್ಯ ಸಾಹಿತ್ಯ ರಚನೆಯ ಮಾದರಿಗಳಿಂದ ಹೊರಗುಳಿದಿವೆ ಎಂದು ಅಥೈಸಲು ಈ ಮೇಲಿನ ಎರಡು ವಿಮರ್ಶೆಗಳಿಂದ ಮನವರಿಕೆಯಾಗುತ್ತದೆ. ಎಂ.ಜಿ.ಕೃಷ್ಣಮೂರ್ತಿ: ನವ್ಯ ಸಂದರ್ಭದ ಸಾಹಿತ್ಯ ಪತ್ರಿಕೆಯಲ್ಲಿ ಒಂದಾದ “ಸಾಕ್ಷಿ” ಸಾಹಿತ್ಯ ಪತ್ರಿಕೆಯಲ್ಲಿ ಬಂದ ಎಂ.ಜಿ.ಕೃಷ್ಣಮೂರ್ತಿಯವರ ವಿಮರ್ಶೆಯನ್ನು ನೋಡುವುದಾದರೆ, ಕಾನೂರು ಹೆಗ್ಗಡತಿ ಕುರಿತು- ________________________________________________________________________________________________________________________________________________________________________________________________________________________________________________________________________________ ಸಮಗ್ರ ವಿಮರ್ಶೆ ಸಂಪುಟ-೨, ಗಿರಡ್ಡಿ ಗೊಂವಿಂದರಾಜ, ಪುಟ ಸಂಖ್ಯೆ.೩೫-೩೬. ಅದೇ ಪುಟ ಸಂಖ್ಯೆ.37-38 1“ಸಾಮಾನ್ಯರ ಮೂಢ ನಂಬಿಕೆಗಳು, ಆ ಮೂಢ ನಂಬಿಕೆಗಳನ್ನು ಜೋಯಿಸರು ತಮ್ಮ ಸಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದು- ಇಂತಹ ವಿಚಾರಗಳ ವಿಶ್ಲೇಷಣೆಯಲ್ಲಿರುವ ಸ್ಪಷ್ಟತೆ ಹೂವಯ್ಯನ ಆದರ್ಶಶೀಲತೆ ಮತ್ತು ಆಧ್ಯಾತ್ಮಿಕತೆಗಳ ವಿಶ್ಲೇಷಣೆಯಲ್ಲಿಲ್ಲ. ಆದ್ದರಿಂದ ಹೂವಯ್ಯನ ಆದರ್ಶಶೀಲತೆ ಮತ್ತು ಆಧ್ಯಾತ್ಮಿಕತೆಗಳ ಸ್ಪಷ್ಟ ಅರಿವನ್ನು ಕಾದಂಬರಿ ಓದುಗನಿಗೆ ತಂದುಕೊಡುವುದಿಲ್ಲ..............ಹೂವಯ್ಯ ಕಾದಂಬರಿಯ ಕೇಂದ್ರ ವ್ಯಕ್ತಿ ; ಕಾದಂಬರಿಯ ಮುಖ್ಯ ಪಾತ್ರ. ಆದ್ದರಿಂದ ಈ ಲೋಪಗಳು ತಳ್ಳಿಹಾಕಬಹುದಾದ ಲೋಪಗಳಲ್ಲ. ಈ ಲೋಪಗಳಿವೆ ಎಂದು ಒಪ್ಪಿಕೊಂಡಲ್ಲಿ ಕಾದಂಬರಿಯ ಬಂಧದಲ್ಲೂ ಲೋಪವಿದೆ. ವಿವರಗಳಲ್ಲಿ ಹೊಂದಾಣಿಕೆಯಿಲ್ಲ. ಕಾದಂಬರಿಯ ವಸ್ತುವಿನ ಬೆಳವಣಿಗೆಯಲ್ಲಿ ಉತ್ತಮ ಸಾಹಿತ್ಯ ಕೃತಿಗಳಲ್ಲಿ ಕಂಡುಬರುವಂತಹ ಬೆಳವಣಿಗೆಯಿಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಹೂವಯ್ಯನ ಅಸ್ಪಷ್ಟವಾದ ಕಾಲ್ಪನಿಕ ಜಗತ್ತಿಗೂ ನೈಜ ಜಗತ್ತಿಗೂ ಸಂಬಂಧವಿಲ್ಲವಾದ್ದರಿಂದ ಕಾದಂಬರಿಯ ಬಂಧ ಶಿಥಿಲ. ಅದ್ದರಿಂದಲೇ ಇದು ಒಂದು ರೀತಿಯ ಕಾಲಾನುಕ್ರಮಣಿ. ಆದರೆ ಕಾದಂಬರಿಯ ವಸ್ತುನಿಂದಾಗಿ ಅದನ್ನು ಕಾಲಾನುಕ್ರಮಣಿ ಎಂದುಕೊಂಡು ಓದಿ ಘಟನೆಗಳನ್ನು ಮೆಚ್ಚುವಂತಿಲ್ಲ. ಅಂದರೆ, 'ಕಾನೂರು ಹೆಗ್ಗಡತಿ'ಯನ್ನು ಕಾದಂಬರಿಯೆಂದೇ ಗಣಿಸಿ, ಅದರ ಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಿ ವಿಮರ್ಶಿಸಬೇಕು.” 1 ವಿಶ್ಲೇಷಣೆ:- ಈ ಲೇಖನದಲ್ಲಿ ವಿಮರ್ಶಕರು ನವ್ಯ ವಿಮರ್ಶೆಯ ಮಾನದಂಡಗಳನ್ನು ಈ ಕಾದಂಬರಿಯ ಮೇಲೆ ಪ್ರಯೋಗಿಸಿದರೂ ಹೆಚ್ಚಾಗಿ ಬಿಡಿ ಭಾಗಗಳನ್ನು ಭಾಷೆಯ ನೆಲೆಯಿಂದಲೇ ನೋಡುವ ಕ್ರಮವು ಇದೆ. ಕೃತಿಯನ್ನು ಸೂಕ್ಷ್ಮವಾದ ನಿಕಟ ಓದಿಗೆ ಒಳಪಡಿಸಿರುವುದು ಬಳಕೆಯಾದ ಭಾಷೆಯ ಬಗೆಗೆ ಹೇಳುವ ಒಂದೊಂದು ಪ್ಯಾರಾ, ವಾಕ್ಯಗಳನ್ನು ಉದಾಹರಣೆಯಾಗಿ ನೀಡುವುದರಿಂದ ತಿಳಿದುಬರುವುದು. ಕನ್ನಡದ ಕೃತಿಗಳನ್ನು ಪಾಶ್ಚಾತ್ಯ ಕೃತಿಗಳಿಗೆ ಹೋಲಿಕೆ ಮಾಡುವ ಅಭ್ಯಾಸವು ಈ ಕಾಲದ ವಿಮರ್ಶಕರು ಮಾಡುತ್ತಿದ್ದಾಗಲೂ ಎಂ.ಜಿ.ಕೃಷ್ಣಮೂರ್ತಿಯವರು ಈ ಕಾದಂಬರಿ ವಿಶ್ಲೇಷಣೆಯಲ್ಲಿ ನಮ್ಮ ಪರಂಪರೆಯಲ್ಲಿಯೇ ಉದ್ಭವಿಸಿದ್ದ ಆಕಸ್ಮಿಕ ರಚನೆಯಾದ ವಚನಗಳನ್ನು ತಂದಿರುವ ರೀತಿಯಿಂದಲೇ ಮೇಲಿನ ಇಬ್ಬರು ವಿಮರ್ಶಕರಿಗಿಂತ ಇವರ ವಿಮರ್ಶೆ ಭಿನ್ನವಾಗಿದೆ. ಇದು ಮಾತ್ರವಲ್ಲದೆ ಭಾಷೆಯ ಮೂಲಕ ಸಂಸ್ಕೃತಿಯನ್ನು ಗುರುತಿಸಿ ವಿಶ್ಲೇಷಿಸುವುದು, ರಚನೆಯಾದ ಕೃತಿಯ ಭಾಷೆಯಿಂದ ರೂಪಿತವಾದ ಸಂಸ್ಕೃತಿಯ ಚೌಕಟ್ಟಿನ್ನು ನೋಡುವುದು ಕೂಡ ಇದೆಯಾದರೂ ಸಹ ಇವರು ನವ್ಯ ವಿಮರ್ಶೆಯ ಮಾನದಂಡಗಳಿಂದಲೇ ಈ ಭಿನ್ನ ನೋಟ ಕ್ರಮವು- ________________________________________________________________________________________________________________________________________________________________________________________________________________________________ ಸಾಕ್ಷಿ ಸಾಹಿತ್ಯ ಪತ್ರಿಕೆ, ಎಂ.ಜಿ.ಕೃಷ್ಣಮೂರ್ತಿ, ಪುಟ ಸಂಖ್ಯೆ .70-73. ಅದರೊಳಗೆ ಸೇರಿಬಿಟ್ಟಿದೆ. ಎಂ.ಜಿ.ಕೃಷ್ಣಮೂರ್ತಿಯವರು ಮಲೆಗಳಲ್ಲಿ ಮದುಮಗಳು ಕಾದಂಬರಿಗಳನ್ನು ಕುರಿತು ಬರೆಯುವಾಗ, ಈ ಕಾದಂಬರಿಯನ್ನು ವಿಮರ್ಶಿಸಲು ವಿಮರ್ಶಕನಿಗೆ ಅನೇಕ ಸಮಸ್ಯೆಗಳು ಎದುರಾಗುವುದರ ಕುರಿತು ಹೇಳುತ್ತಾ,- “ ಈ ಕಾದಂಬರಿಯಲ್ಲಿ ಒಂದು ದೃಷ್ಟಿಕೋನವಿದ್ದರೂ, ಒಂದೇ ದೃಷ್ಟಿಕೋನ ಪಾತ್ರವಿಲ್ಲ. ಜೊತೆಗೆ ಹರವು, ಕಾಲ ಮತ್ತು ಅನುಭವಗಳ ದೃಷ್ಟಿಯಿಂದ ಕುವೆಂಪು ಅವರ ಎರಡು ಕಾದಂಬರಿಗಳಲ್ಲೂ ವ್ಯತ್ಯಾಸಗಳವೆ..............ಈ ಕಾದಂಬರಿಯ ಬಂಧ ಒಂದು ಬಗೆಯ ನೈತಿಕ ವಿಕಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ............... ಕಾದಂಬರಿಯ ಆಶಯ ದೃಷ್ಟಿಯಿಂದ ಐತ-ಪೀಂಚಲು ಮತ್ತು ಮುಕುಂದಯ್ಯ-ಚಿನ್ನಮ್ಮ ಇವರ ಜೀವನಗಳನ್ನು ಬೇರೆ ಬೇರೆ ಮಟ್ಟಗಳಲ್ಲಿ ಮಾದರಿ ಜೀವನಗಳೆಂದು ಗಣಿಸಬಹುದು. ಮಿಕ್ಕೆಲ್ಲ ಪಾತ್ರಗಳ ಜೀವನಗಳ ಸಫಲತೆ-ವಿಫಲತೆಗಳನ್ನು ಈ ನಾಲ್ಕು ಪಾತ್ರಗಳ ಜೀವನಗಳೊಂದಿಗೆ ಹೋಲಿಸಿ ಕಾದಂಬರಿಯ ಬೆಲೆ ಕಟ್ಟಬೇಕಾಗುತ್ತದೆ.............ಕಾದಂಬರಿಕಾರರ ಆಶಯ ಅನುಭವದ ವಿವಿಧ ಮಟ್ಟಗಳ

Fields of Study & Subjects

Literary Theory and Cultural Hermeneutics Literature: history themes analysis Historical and Literary Analyses

Publication details

Journal / source
Zenodo (CERN European Organization for Nuclear Research)
Publication date
26 February 2026
Language
KN