ಅನಭವಕ ಹನನಲಯಲಲ ಮಸತಯವರ ಸಣಣ ಕತಗಳ ಮತತ ಸಮಕಲನತ
Abstract
ಕನ್ನಡ ಸಣ್ಣಕಥಾ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರರು, ತಮ್ಮ ವಿಶಿಷ್ಟ ಕಥನ ಕಲೆಯ ಮೂಲಕ ‘ಸಣ್ಣಕಥೆಗಳ ಜನಕ’ ಎನಿಸಿಕೊಂಡಿದ್ದಾರೆ. ಅವರು ರಚಿಸಿದ ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಬದುಕಿನ ಗಂಭೀರ ಮೌಲ್ಯಗಳನ್ನು ಮತ್ತು ಮಾನವೀಯತೆಯ ಘನತೆಯನ್ನು ಎತ್ತಿಹಿಡಿಯುತ್ತವೆ. ಸರಳ ನಿರೂಪಣೆ ಮತ್ತು ಆಪ್ತವಾದ ಪಾತ್ರಗಳ ಮೂಲಕ ಸಮಕಾಲೀನ ಬದುಕಿನ ಸಂಕೀರ್ಣತೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜಾತಿ, ಮತ ಮತ್ತು ಕಾಲದ ಹಂಗಿಲ್ಲದೆ, ಮನುಷ್ಯತ್ವಕ್ಕೆ ಮೊದಲ ಆದ್ಯತೆ ನೀಡುವ ಮಾಸ್ತಿಯವರ ಜೀವನದೃಷ್ಟಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ನಿಲ್ಲುವ ಅವರ ಕಥಾ ಪಾತ್ರಗಳು ಮತ್ತು ಅವುಗಳ ಅನುಭಾವಿಕ ನೆಲೆಗಳನ್ನು ಇಲ್ಲಿ ಗುರುತಿಸಲಾಗಿದೆ.
Fields of Study & Subjects
Short Stories in Global Literature
Themes in Literature Analysis
Literature: history
themes
analysis
Publication details
- Journal / source
- ಅಕ್ಷರಸೂರ್ಯ (AKSHARASURYA)
- Publication date
- 28 February 2026
- Language
- KN