ಹರದಸ ಸಹತಯಕಕ ಮಧವ ಯತಗಳ ಕಡಗ

Read full text
Authors: ಶ್ರೀನಿವಾಸ ಫಡ್ನೀಸ್
Cited by: 0

Abstract

ಹರಿದಾಸ ಸಾಹಿತ್ಯ ಪರಂಪರೆಯು ಮಾಧ್ವ ಯತಿಗಳ ಕೊಡುಗೆಯಿಂದಾಗಿ ಅತ್ಯಂತ ಶ್ರೀಮಂತಗೊಂಡಿದೆ. ದ್ವೈತ ಸಿದ್ಧಾಂತದ ಕ್ಲಿಷ್ಟಕರ ತತ್ವಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಪ್ರಚುರಪಡಿಸುವುದು ಈ ಯತಿಗಳ ಪ್ರಮುಖ ಉದ್ದೇಶವಾಗಿತ್ತು. ಹರಿದಾಸ ಪಂಥದ ಮೂಲಪುರುಷರಾದ ನರಹರಿತೀರ್ಥರು, ಪಿತಾಮಹರೆನಿಸಿದ ಶ್ರೀಪಾದರಾಜರು, ದಾಸಕೂಟವನ್ನು ಸಾಂಸ್ಥೀಕರಿಸಿದ ವ್ಯಾಸತೀರ್ಥರು, ವಾದಿರಾಜರು ಹಾಗೂ ವ್ಯಾಸತತ್ವಜ್ಞತೀರ್ಥರಂತಹ ಮಹಾನ್ ಯತಿಗಳು ಕೀರ್ತನೆ, ಸುಳಾದಿ ಮತ್ತು ಉಗಾಭೋಗಗಳ ಮೂಲಕ ಭಕ್ತಿಮಾರ್ಗವನ್ನು ತೋರಿಸಿಕೊಟ್ಟರು. ಸಂಸ್ಕೃತದಲ್ಲಿದ್ದ ವೇದ-ಉಪನಿಷತ್ತುಗಳ ಸಾರವನ್ನು ಸರಳ ಕನ್ನಡದಲ್ಲಿ ನೀಡುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಇವರು ಬೆಳೆಸಿದರು. ಹರಿಭಕ್ತಿ, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಕಳಕಳಿಯನ್ನು ಒಳಗೊಂಡ ಇವರ ಸಾಹಿತ್ಯವು ದಾಸಸಾಹಿತ್ಯದ ಬುನಾದಿಯಾಗಿದೆ. ಹರಿದಾಸ ಸಾಹಿತ್ಯದ ಉಗಮ ಮತ್ತು ವಿಕಾಸದಲ್ಲಿ ಈ ಪ್ರಮುಖ ಮಾಧ್ವ ಯತಿಗಳು ವಹಿಸಿದ ನಿರ್ಣಾಯಕ ಪಾತ್ರ ಹಾಗೂ ಅವರ ಸಾಹಿತ್ಯಿಕ ಕೊಡುಗೆಗಳ ವಿಶಿಷ್ಟತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Fields of Study & Subjects

Indian and Buddhist Studies Cultural and Mythological Studies South Asian Studies and Diaspora

Publication details

Journal / source
ಅಕ್ಷರಸೂರ್ಯ (AKSHARASURYA)
Publication date
28 February 2026
Language
KN