ತಜಸವ ಮಯಲಕ ಕದಬರಯಲಲನ ಮನಷಯ ಸಮಜ ಹಗ ಪರಸರದ ಅವನಭವ ಸಬಧಗಳ
Abstract
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಲೋಕ’ ಕಾದಂಬರಿಯು ಗ್ರಾಮೀಣ ಭಾರತದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕಲ್ಲೋಲಗಳನ್ನು ಪರಿಸರದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಗೊಂದಲಗೇರಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿನ ದೈನಂದಿನ ಬದುಕಿನ ಸಂಕೀರ್ಣತೆಗಳು, ಜಾತಿ, ವೃತ್ತಿ ಹಾಗೂ ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನು ಇಲ್ಲಿ ಚರ್ಚಿಸಲಾಗಿದೆ. ಸತತ ಮೂರು ವರ್ಷಗಳ ಬರಗಾಲವು ಸೃಷ್ಟಿಸುವ ಆಡಳಿತಾತ್ಮಕ ಅರಾಜಕತೆ, ರೈತ ಚಳವಳಿ ಮತ್ತು ಇಲಾಖೆಗಳ ನಡುವಿನ ಸಂಘರ್ಷಗಳು ಮಾನವನ ಅಸಹಾಯಕತೆಯನ್ನು ತೋರುತ್ತವೆ. ಮನುಷ್ಯನ ಅಹಂಕಾರದ ಮೇಲಾಟಗಳು ಪ್ರಕೃತಿಯ ಅನಂತ ಶಕ್ತಿಯೆದುರು ಹೇಗೆ ಅರ್ಥಹೀನವಾಗುತ್ತವೆ ಎಂಬುದನ್ನು ಈ ಅಧ್ಯಯನವು ಪ್ರತಿಪಾದಿಸುತ್ತದೆ. ಮಹಾಮಳೆಯ ಆಗಮನದೊಂದಿಗೆ ಮಾನವ ನಿರ್ಮಿತ ‘ಗೊಂದಲ’ಗಳು ಕೊಚ್ಚಿಹೋಗಿ, ಪರಿಸರವೇ ಅಂತಿಮ ನಿರ್ಧಾರಕ ಶಕ್ತಿ ಎಂಬ ಆಶಯವನ್ನು ಕಾದಂಬರಿಯ ಮೂಲಕ ಇಲ್ಲಿ ಗುರುತಿಸಲಾಗಿದೆ.
Fields of Study & Subjects
Ecocriticism and Environmental Literature
Literature: history
themes
analysis
Literary Analysis and Cultural Studies
Publication details
- Journal / source
- ಅಕ್ಷರಸೂರ್ಯ (AKSHARASURYA)
- Publication date
- 28 February 2026
- Language
- KN