ಮನಷಯ ಸಸಕತ: ಅರಥ, ಸವರಪ, ವಕಸ ಮತತ ವರಪಗಳ ಒದ ಸಮಗರ ವಶಲಷಣ
Abstract
ಮನುಷ್ಯನನ್ನು ಜೈವಿಕ ಪ್ರೇರಣೆಗಳಿಂದ ಬೇರ್ಪಡಿಸಿ, ಸಾಂಘಿಕ ಜೀವನಕ್ಕೆ ಯೋಗ್ಯನನ್ನಾಗಿ ರೂಪಿಸುವ ಪ್ರಕ್ರಿಯೆಯೇ ಸಂಸ್ಕೃತಿ. ಕೇವಲ ಬದುಕುವ ಕ್ರಮವಲ್ಲದೆ, ಅಂತರಂಗದ ಶುದ್ಧೀಕರಣವಾಗಿರುವ ಸಂಸ್ಕೃತಿಯು ಕುಟುಂಬ, ಶಿಕ್ಷಣ ಮತ್ತು ಧರ್ಮದ ಮೂಲಕ ಪೋಷಣೆ ಪಡೆಯುತ್ತದೆ. ಜಾಗತೀಕರಣದ ಪ್ರಭಾವ, ಭೌತಿಕವಾದದ ಅಬ್ಬರ ಮತ್ತು ಅಂಧಾನುಕರಣೆಯಿಂದಾಗಿ ಇಂದು ಮೌಲ್ಯಗಳು ಕುಸಿಯುತ್ತಿದ್ದು, ಸಾಂಸ್ಕೃತಿಕ ವಿರೂಪಗಳು ಸಮಾಜವನ್ನು ಕಾಡುತ್ತಿವೆ. ಭಾರತೀಯ ಪರಂಪರೆಯ ವಿಶೇಷವಾದ ‘ವಸುಧೈವ ಕುಟುಂಬಕಂ’ ಮತ್ತು ಪ್ರಕೃತಿ ಆರಾಧನೆಯ ತತ್ವಗಳು ಈ ಸಂಕಷ್ಟಕ್ಕೆ ಪರಿಹಾರ ನೀಡಬಲ್ಲವು. ಆಧುನಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ, ತಲೆಮಾರುಗಳ ನಡುವಿನ ಕಂದಕವನ್ನು ನಿವಾರಿಸುವ ಮೂಲಕ ಸುಸ್ಥಿರ ಮತ್ತು ನೈತಿಕ ಸಮಾಜವನ್ನು ನಿರ್ಮಿಸುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
Fields of Study & Subjects
Cultural and Mythological Studies
Philosophy and Historical Thought
Education and Cultural Studies
Publication details
- Journal / source
- ಅಕ್ಷರಸೂರ್ಯ (AKSHARASURYA)
- Publication date
- 28 February 2026
- Language
- KN