ಡಜಟಲ ಯಗದಲಲ ಭಷಯ ರಪತರ: ಸಮಜಕ ಮಧಯಮಗಳ ಪರಭವ

Read full text
Authors: ಜ್ಯೋತಿ ಎನ್. ಭಟ್‌
Cited by: 0

Abstract

ಜನರು ವಿವಿಧ ಸಮುದಾಯಗಳೊಂದಿಗೆ ಸಂವಹನ ನಡೆಸಲು ಮತ್ತು ಸಂಪರ್ಕಿಸಲು ಇಂದಿನ ಜನ ಸಮುದಾಯವು ಸಾಮಾಜಿಕ ಮಾಧ್ಯಮವನ್ನು ವೇದಿಕೆಯಾಗಿ ಬಳಸುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಾಪಕ ಬಳಕೆ ಮಾನವ ಸಂವಹನದ ಸ್ವರೂಪವನ್ನೇ ಬದಲಾಯಿಸಿದೆ. ಭಾಷೆ ಒಂದು ಚಲನೆಯುತ ಸಾಮಾಜಿಕ ವ್ಯವಸ್ಥೆಯಾಗಿದ್ದು, ಡಿಜಿಟಲ್ ಯುಗದಲ್ಲಿ ಅದು ಹೊಸ ರೂಪಗಳು, ಶೈಲಿಗಳು ಮತ್ತು ಅರ್ಥಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಿದೆ. ಭಾಷೆಯ ಬೆಳವಣಿಗೆಯ ಮೇಲೆ ಸಾಮಾಜಿಕ ಮಾಧ್ಯಮವು ಅಗಾಧವಾದ ಪರಿಣಾಮವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಪ್ರಸ್ತುತವಾಗಿ ಹೆಚ್ಚಾಗಿ ಬೆಳೆಯುತ್ತಿದ್ದು, ಭಾಷೆಯ ಸ್ವರೂಪ, ಬಳಕೆ ಮತ್ತು ವಿಕಾಸದ ಮೇಲೆ ಗಣನೀಯ ಪ್ರಭಾವವನ್ನು ಬೀರುತ್ತಿವೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್ (X) ಮತ್ತು ಯೂಟ್ಯೂಬ್ ಮತ್ತಿತರ ಸಾಮಾಜಿಕ ಮಾಧ್ಯಮದ ವೇದಿಕೆಗಳು ಭಾಷೆಯ ಸಂಕ್ಷಿಪ್ತೀಕರಣ, ಹೊಸ ಪದಗಳ ಸೃಷ್ಟಿ ಹಾಗೂ ಲಿಪಿ ಬಳಕೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿವೆ ಎಂದರೆ ತಪ್ಪಾಗಲಾರದು. ಈ ಸಂಶೋಧನಾ ಪ್ರಬಂಧವು ಸಾಮಾಜಿಕ ಮಾಧ್ಯಮದಲ್ಲಿ ಭಾಷೆಯ ಶಬ್ದಕೋಶ, ವ್ಯಾಕರಣ, ಲಿಪಿ ಹಾಗೂ ಭಾಷಾ ಗುರುತಿನ ಮೇಲೆ ಬೀರುವ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಅಧ್ಯಯನವು ಭಾಷೆಯ ರೂಪಾಂತರವು ಸೃಜನಶೀಲತೆಯನ್ನು ಹೆಚ್ಚಿಸಿದರೂ, ಶುದ್ಧತೆ ಮತ್ತು ವ್ಯಾಕರಣದ ಮೇಲಿನ ಗಮನ ಕಡಿಮೆಯಾಗುತ್ತಿರುವುದನ್ನೂ ತೋರಿಸುತ್ತದೆ. ಈ ಅಧ್ಯಯನವು ಗುಣಾತ್ಮಕ ವಿಧಾನವನ್ನು ಅನುಸರಿಸಿದ್ದು, ಸಾಮಾಜಿಕ ಮಾಧ್ಯಮದ ಉದಾಹರಣೆಗಳು ಹಾಗೂ ಇತ್ತೀಚಿನ ಭಾಷಾ ಪ್ರವೃತ್ತಿಗಳ ವಿಶ್ಲೇಷಣೆಯ ಮುಖಾಂತರ ಭಾಷೆಯ ಮೇಲೆ ಸಾಮಾಜಿಕ ಮಾಧ್ಯಮದ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಚರ್ಚಿಸುತ್ತದೆ. ಸಾಮಾಜಿಕ ಮಾಧ್ಯಮವು ಭಾಷೆಯ ವಿಕಾಸಕ್ಕೆ ಸಹಕಾರಿಯಾಗಿರುವುದರ ಜೊತೆಗೆ, ಮಾನಕ ಭಾಷೆಯ ಬಳಕೆಗೆ ಸವಾಲುಗಳನ್ನುಂಟು ಮಾಡುತ್ತಿರುವುದನ್ನು ನಾವು ಪ್ರಸ್ತುತವಾಗಿ ಕಾಣಬಹುದಾಗಿದೆ.

Fields of Study & Subjects

Digital Communication and Language Linguistic research and analysis Linguistic and Sociocultural Studies

Publication details

Journal / source
ಅಕ್ಷರಸೂರ್ಯ (AKSHARASURYA)
Publication date
28 February 2026
Language
KN