ವಯಕತತವದ ಸರಭಕಕ ಮಲಯದ ಬಜ
Abstract
ವ್ಯಕ್ತಿಯೊಬ್ಬನ ಮಹತ್ವವು ಆತ ಪಾಲಿಸುವ ತತ್ತ್ವ ಮತ್ತು ಆದರ್ಶಗಳ ಮೇಲೆ ನಿರ್ಧಾರವಾಗುತ್ತದೆ. ಬದುಕು ಅರ್ಥಪೂರ್ಣವಾಗಲು ಮತ್ತು ನೈತಿಕ ನೆಲೆಗಟ್ಟಿನಲ್ಲಿ ಸಾಗಲು ಮೌಲ್ಯಗಳೆಂಬ ಬೀಜಗಳು ಅತ್ಯಗತ್ಯ. ಸತ್ಯ, ಅಹಿಂಸೆ, ಪ್ರೀತಿ, ತಾಳ್ಮೆ ಮತ್ತು ಜಿತೇಂದ್ರಿಯತೆಯಂತಹ ಗುಣಗಳು ವ್ಯಕ್ತಿತ್ವವನ್ನು ರೂಪಿಸುವ ಮೂಲಾಧಾರಗಳಾಗಿವೆ. ಇಂದ್ರಿಯ ನಿಗ್ರಹ ಮತ್ತು ಸುಖ-ದುಃಖಗಳಲ್ಲಿ ಸಮಾನ ಭಾವ ಹೊಂದುವುದು ಯಶಸ್ವಿ ಜೀವನಕ್ಕೆ ದಾರಿದೀಪವಾಗಿದೆ. ರಾಮಾಯಣ, ಮಹಾಭಾರತ ಹಾಗೂ ವಚನ ಸಾಹಿತ್ಯದ ಉದಾಹರಣೆಗಳ ಮೂಲಕ, ಮೌಲ್ಯಧಾರಿತ ಬದುಕು ಹೇಗೆ ವ್ಯಕ್ತಿತ್ವಕ್ಕೆ ಸೌರಭವನ್ನು ತುಂಬಿ ಸಮಾಜಕ್ಕೆ ಮಾದರಿಯಾಗಬಲ್ಲದು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಸುಂದರ ಜೀವನ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಇಲ್ಲಿ ಪ್ರತಿಪಾದಿಸಲಾಗಿದೆ.
Fields of Study & Subjects
Values and Moral Education
Philosophical Ethics and Theory
Leadership
Courage
and Heroism Studies
Publication details
- Journal / source
- ಅಕ್ಷರಸೂರ್ಯ (AKSHARASURYA)
- Publication date
- 28 February 2026
- Language
- KN