ಸಮಜಕ ಮಧಯಮ: ಒದ ಸಸಕತಕ ಚತನ
Abstract
ಮಾನವ ಸಂಸ್ಕೃತಿಯು ನಿರಂತರವಾಗಿ ಹರಿಯುವ ನದಿಯಿದ್ದಂತೆ. ಅದು ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಾ ಬಂದಿದೆ. ಹಿಂದೆ ಸಂಸ್ಕೃತಿಯು ಮೌಖಿಕ ಪರಂಪರೆ, ಬರಹ ಮತ್ತು ಕಲೆಯ ಮೂಲಕ ಹರಿದು ಬರುತ್ತಿತ್ತು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಕೃತಿಯ ಹೊಸ ವಾಹಕವಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್‌ಗಳಂತಹ ವೇದಿಕೆಗಳು ಕೇವಲ ಮನರಂಜನೆಯ ಸಾಧನಗಳಾಗಿ ಉಳಿಯದೆ, ಸಮಾಜದ ಆಲೋಚನಾ ಲಹರಿ ಮತ್ತು ಸಾಂಸ್ಕೃತಿಕ ನಡವಳಿಕೆಯನ್ನು ನಿರ್ಧರಿಸುವ ಶಕ್ತಿಗಳಾಗಿ ಹೊರಹೊಮ್ಮಿವೆ. ಇತ್ತೀಚಿನ ದಿನಗಳಲ್ಲಿ ಜನರ ಜೀವನ ಕ್ರಮದಲ್ಲಿ ಕ್ಷಿಪ್ರವಾದ ಬದಲಾವಣೆಯನ್ನು ಕಾಣುತ್ತಿದೆ. ಈ ಬದಲಾವಣೆಯ ರುವಾರಿ ಸಾಮಾಜಿಕ ಮಾಧ್ಯಮ. ಈ ಮಾಧ್ಯಮವು ಸಣ್ಣ ಮಕ್ಕಳಿಂದ ವಯೋವೃದ್ಧರಿಗೂ ಪ್ರಿಯವಾದ ಮಾಧ್ಯಮವಾಗಿ ಜನಪ್ರಿಯತೆಯನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೇ ನೇರವಾಗಿ ಪಾಲ್ಗೊಳ್ಳುವ ಅವಕಾಶ ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗಿದೆ ಎನಿಸಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಎಕ್ಸ್ ಇವೇ ಮೊದಲಾದ ಮಾಧ್ಯಮಗಳ ಮೂಲಕವಾಗಿ ಜನರು ಸಮೂಹದೊಂದಿಗೆ ಭಾಗಿದಾರರಾಗಿ ಸ್ಪಂದಿಸಲು ತೊಡಗಿದ್ದಾರೆ. ಹಿಂದೆ ಪತ್ರಿಕೆ, ಟಿ.ವಿ. ಮಾಧ್ಯಮಗಳ ಮೂಲಕ ಸುದ್ದಿಯನ್ನು, ಮನರಂಜನೆಯ ಅರಿವನ್ನು ಹೊಂದಿದ್ದರು. ಅಂದರೆ ಜನರಿಗೆ ಸುದ್ದಿಯ ಕುರಿತು, ವರದಿಯ ಕುರಿತು, ತಾವು ಮೆಚ್ಚಿದ ಮನರಂಜನೆಯ ಅಥವಾ ಇತರ ಕಾರ್ಯಕ್ರಮಗಳ ಕುರಿತ ವಿಚಾರಗಳನ್ನು ಅಭಿವ್ಯಕ್ತಪಡಿಸುವ ಮಾಧ್ಯಮಗಳು ಸೀಮಿತವಾಗಿದ್ದವು. ಹಾಗೂ ತಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ಸುಲಭವಾದ ವಿಚಾರವಾಗಿರಲಿಲ್ಲ. ಈ ಮೇಲೆ ತಿಳಿಸಿದ ಸಾಮಾಜಿಕ ಮಾಧ್ಯಮಗಳು ಅಕ್ಷರ ಕಲಿತ, ಅಕ್ಷರ ಕಲಿಯದ, ನಗರದ, ಹಳ್ಳಿಯ, ಬುಡಕಟ್ಟಿನ ಇವೇ ಮೊದಲಾದ ಎಲ್ಲರಿಗೂ ತಮಗೆ ಅನ್ನಿಸಿದ್ದನ್ನು ಅಭಿವ್ಯಕ್ತಪಡಿಸಲು ಮುಕ್ತವಾಗಿಸಿವೆ. ಈ ಮುಕ್ತತೆಯ ಮಾಧ್ಯಮವನ್ನು ಜನರು ಬೆರಗು ನೋಟದೊಂದಿಗೆ ಮುಕ್ತವಾಗಿಯೇ ಸ್ವಾಗತಿಸಿದ್ದಾರೆ.
Fields of Study & Subjects
Cultural
Social
and Media Studies
Media and Digital Communication
Cultural Insights and Digital Impacts
Publication details
- Journal / source
- ಅಕ್ಷರಸೂರ್ಯ (AKSHARASURYA)
- Publication date
- 28 February 2026
- Language
- KN