ಸಮಜಕ ಮಧಯಮಗಳಲಲ ಮಗಳರ ಕನನಡ, ಅರಭಷ ಮತತ ಹವಯಕ ಭಷಯ ಅಸಮತ: ಸಮಜಭಷಕ ಅಧಯಯನ

Read full text
Authors: ಲಾವಣ್ಯ ಸಿ.ಪಿ.
Cited by: 0

Abstract

ಕನ್ನಡದ ಪ್ರಾದೇಶಿಕ ವೈವಿಧ್ಯತೆಯನ್ನು ಸಾರುವ ಮಂಗಳೂರು ಕನ್ನಡ, ಅರೆಭಾಷೆ ಮತ್ತು ಹವ್ಯಕ ಭಾಷೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗತಿಕ ಮನ್ನಣೆ ಪಡೆಯುತ್ತಿವೆ. ಹಿಂದೆ ಕೇವಲ ಮನೆಮಾತಿಗೆ ಸೀಮಿತವಾಗಿದ್ದ ಈ ಉಪಭಾಷೆಗಳು, ಇಂದಿನ ಡಿಜಿಟಲ್ ಯುಗದಲ್ಲಿ ರೀಲ್ಸ್, ವ್ಲಾಗ್ ಮತ್ತು ಹಾಸ್ಯ ವೀಡಿಯೋಗಳ ಮೂಲಕ ಹೊಸ ಅಸ್ಮಿತೆಯನ್ನು ಕಂಡುಕೊಂಡಿವೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಂತಹ ವೇದಿಕೆಗಳು ಯುವಜನತೆಯಲ್ಲಿ ಭಾಷಾಭಿಮಾನವನ್ನು ಹೆಚ್ಚಿಸಿ, ಕೀಳರಿಮೆಯನ್ನು ಹೋಗಲಾಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ತಂತ್ರಜ್ಞಾನವು ಕೇವಲ ಮನರಂಜನೆಗೆ ಮಾತ್ರವಲ್ಲದೆ, ದೇಸೀ ಸಂಸ್ಕೃತಿ ಮತ್ತು ಭಾಷಾ ಸಂರಕ್ಷಣೆಗೆ ಹೇಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಇಲ್ಲಿ ಸಮಾಜೋಭಾಷಿಕ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಆಧುನಿಕ ಮಾಧ್ಯಮಗಳು ಪ್ರಾದೇಶಿಕ ಭಾಷೆಗಳ ಉಳಿವಿಗೆ ಮತ್ತು ಜಾಗತೀಕರಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಈ ಅಧ್ಯಯನವು ಗುರುತಿಸುತ್ತದೆ.

Fields of Study & Subjects

Linguistic and Sociocultural Studies Linguistic Variation and Morphology Linguistic research and analysis

Publication details

Journal / source
ಅಕ್ಷರಸೂರ್ಯ (AKSHARASURYA)
Publication date
28 February 2026
Language
KN