ಉತತಮ ಆಡಳತದ ದಕಕನಲಲ ಮಹತ ಹಕಕ ಕಯದ-2005 & 2019: ಸವಲ ಸಸಟಯ ಸಕರಯತ ಮತತ ಪರಣಮಗಳ
Abstract
ಮಾಹಿತಿ ಹಕ್ಕು ಕಾಯ್ದೆ, 2005 (Right to Information Act, 2005) ಭಾರತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತವನ್ನು ಬಲಪಡಿಸುವ ಪ್ರಮುಖ ಕಾನೂನು ಸಾಧನವಾಗಿದೆ. ಮಾಹಿತಿ ಹಕ್ಕು ಸಂವಿಧಾನದ ಕಲಂ 19(1)(a) ಅಡಿಯಲ್ಲಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವೆಂದು Supreme Court of India ತೀರ್ಪುಗಳ ಮೂಲಕ ಸ್ಪಷ್ಟಪಡಿಸಿದೆ. ಈ ಅಧ್ಯಯನವು ಉತ್ತಮ ಆಡಳಿತದ ಸಾಧನೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಪಾತ್ರವನ್ನು ವಿಶ್ಲೇಷಿಸಿ, ಅದರ ಪರಿಣಾಮಕಾರಿತ್ವದಲ್ಲಿ ಸಿವಿಲ್ ಸೊಸೈಟಿಯ ಸಕ್ರಿಯತೆಯನ್ನು ಪರಿಶೀಲಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಸರ್ಕಾರದ ಕಾರ್ಯಚಟುವಟಿಕೆಗಳ ಮೇಲಿನ ಸಾರ್ವಜನಿಕ ನಿಯಂತ್ರಣವು ಉತ್ತಮ ಆಡಳಿತದ ಮೂಲ ಅಂಶಗಳಾಗಿವೆ. ಈ ಹಿನ್ನೆಲೆಯಲ್ಲಿ, ಸಿವಿಲ್ ಸೊಸೈಟಿ ಸಂಘಟನೆಗಳು ಮಾಹಿತಿ ಹಕ್ಕಿನ ಜಾಗೃತಿ ಮೂಡಿಸುವುದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿವೆ. ಈ ಸಂಶೋಧನಾ ಅಧ್ಯಯನವು ಗುಣಾತ್ಮಕ ವಿಧಾನವನ್ನು ಅನುಸರಿಸಿ ದ್ವಿತೀಯಕ ಮೂಲಗಳ ಆಧಾರದ ಮೇಲೆ ವಿಶ್ಲೇಷಣೆಯನ್ನು ನಡೆಸುತ್ತದೆ. ಮಾಹಿತಿ ಹಕ್ಕು ಕಾಯ್ದೆ ಆಡಳಿತದ ಹೊಣೆಗಾರಿಕೆಯನ್ನು ಬಲಪಡಿಸಿದರೂ, ಅದರ ಪರಿಣಾಮಕಾರಿತ್ವವು ಸಿವಿಲ್ ಸೊಸೈಟಿಯ ಚಟುವಟಿಕೆಗಳು, ಸಾರ್ವಜನಿಕ ಜಾಗೃತಿ ಹಾಗೂ ಮಾಹಿತಿ ಆಯೋಗಗಳ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿದೆ. ಜೊತೆಗೆ, ವಿಳಂಬ, ಅಪೂರ್ಣ ಮಾಹಿತಿ, ಹಾಗೂ ಕಾನೂನು ಜಾರಿಗೆ ಸಂಬಂಧಿಸಿದ ಸವಾಲುಗಳು ಇನ್ನೂ ಮುಂದುವರಿದಿವೆ.
Fields of Study & Subjects
Administrative Law and Governance
Ombudsman and Human Rights
Law
Rights
and Freedoms
Publication details
- Journal / source
- Zenodo (CERN European Organization for Nuclear Research)
- Publication date
- 25 March 2026
- Language
- KN