ಜನ್ನನ ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳು.

Read full text Summarise with VIRAT
Authors: ಡಾ. ನಾಗರಾಜ ದಂಡೋತಿ
Cited by: 0

Summary

No summary yet. VIRAT can read this paper and write a plain-language summary of its aim, methods, key findings and limitations.

Summarise with VIRAT Free to try with your Science Catalogs account.

Abstract

ಕವಿಚಕ್ರವರ್ತಿಗಳಲ್ಲಿ ಒಬ್ಬನಾದ ಜನ್ನ ಕವಿಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉನ್ನತವಾದ ಸ್ಥಾನವನ್ನು ಪಡೆದ ಸುಪ್ರಸಿದ್ಧ ಕವಿ. ಕವಿ ಮತ್ತು ಕೃತಿಗಳು ಆ ಯುಗಧರ್ಮದ ಸಮಕಾಲೀನ ಪ್ರಜ್ಞೆಯ ಪ್ರಣಾಲಿಕೆ ಮತ್ತು ಪ್ರತಿನಿಧಿಗಳಾಗಿರುತ್ತವೆ. ಜನ್ನನು ಹನ್ನೆರಡನೇ ಶತಮಾನದ ಕೊನೆಯಲ್ಲಿ ಮತ್ತು ಹದಿಮೂರನೇ ಶತಮಾನದ ಮೊದಲ ಭಾಗದಲ್ಲಿ ಬದುಕಿದ್ದು, ಹೊಯ್ಸಳ ಇಮ್ಮಡಿ ವೀರಬಲ್ಲಾಳನ ಮತ್ತು ನರಸಿಂಹ ಬಲ್ಲಾಳನ ಆಶ್ರಯದಲ್ಲಿ ಕೃತಿ ರಚಿಸಿದವನು. ಇತನು ತನ್ನ ವೈಯಕ್ತಿಕ ಬದುಕಿನ ಕುರಿತು ಹೇಳಿಕೊಂಡಿದ್ದಾನೆ. ಈತನ ಪೂರ್ತಿ ಹೆಸರು ಜನಾರ್ದನದೇವ, ಜನ್ನಿಗೇ, ಜನ್ನಯ್ಯ ಜನ್ನಮರಸ ಎಂದೆಲ್ಲ ಕಾವ್ಯಗಳಲ್ಲಿ ಸಂದರ್ಭವನ್ನು ಸಾರವಾಗಿ ಕರೆದುಕೊಂಡಿದ್ದಾನೆ. ಹೀಗೆ ಜನಕವಿ ವಿಶಿಷ್ಟ ವ್ಯಕ್ತಿತ್ವ ವ್ಯಕ್ತಿತ್ವವುಳ್ಳ ಮೇಲು ಮಟ್ಟದ ವರಕವಿ ಅವನು ಸಾಂಪ್ರದಾಯಿಕ ವಸ್ತುವವುಳ್ಳ ಕಾವ್ಯಗಳನ್ನು ರಚಿಸಿದ್ದರೂ, ತನಗಿರುವ ಅವಕಾಶದಲ್ಲಿಯೇ ತನ್ನ ಪ್ರತಿಭೆ, ಕಲಾ ಕೌಶಲ್ಯಗಳನ್ನು ಮೆರೆದು ಜೀವನಾನುಭವ ನೆರವಿನಿಂದ ಆ ಯುಗವನ್ನು ತಕ್ಕಮಟ್ಟಿಗೆ ತನ್ನ ಕಾವ್ಯಗಳಲ್ಲಿ ಧ್ವನಿಸಿರುವುದನ್ನು ಧರಿಸಿರುವುದನ್ನು ಕಾಣುತ್ತೇವೆ. ಈ ಎಲ್ಲಾ ದೃಷ್ಟಿಗಳಿಂದ ಜನ್ನ ತನ್ನ ಯುಗದ ಒಬ್ಬ ಶ್ರೇಷ್ಠಪೂರ್ಣ ಅದ್ವಿತೀಯ ಕವಿಯಾಗಿರುವುದರಲ್ಲಿ ಸಂಶಯವಿಲ್ಲ. ಯಶೋಧರಚರಿತೆ; ಯಶೋಧರ ಚರಿತೆಯು ನಾಲ್ಕು ಅವತಾರಗಳಲ್ಲಿ ವಿಭಾಗಿಸಲ್ಪಟ್ಟಿರುವ 310 ಕಂದ ಪದ್ಯಗಳನ್ನು ಒಳಗೊಂಡ ಶ್ರೇಷ್ಠವಾದ ಕಾವ್ಯ. ಅಭಯರುಚಿ ರಾಜಕುಮಾರ ಹಿಂಸಾರಭಾಸ ಮತಿಯಾಗಿದ್ದ ಮಾರಿದತ್ತನಿಗೆ ಧರ್ಮೋಪದೇಶಗಳನ್ನು ಮಾಡಿ ಸನ್ಮಾರ್ಗಕ್ಕೆ ತಂದುದು ಈ ಕಾವ್ಯದ ತಿರುಳು. ಜನ್ನನ ಕಾವ್ಯದಲ್ಲಿ ಬರುವ ಸಾಧಾರಣವಾಗಿ ಎಲ್ಲಾ ಪಾತ್ರಗಳಲ್ಲಿ ಹೊಸ ದೃಷ್ಟಿಯೊಂದಿಗೆ ಹೊಸ ಸೃಷ್ಟಿಯು ರೂಪಗೊಂಡಿದೆ. ಯಶೋಧರಚರಿತೆಯಲ್ಲಿ ಬರುವ ನಾಯಕಿ ಅಮೃತಮತಿ ಮತ್ತು ಅನಂತನಾಥಪುರಾಣದಲ್ಲಿ ಬರುವ ಸುನಂದೆ ಪಾತ್ರಗಳಂತೂ ತಮ್ಮ ವಿಶೇಷವಾದ ಮನೋಧರ್ಮ ಹಾಗೂ ವ್ಯಕ್ತಿತ್ವಗಳಿಂದಾಗಿ ಸಹೃದಯರ ಗಮನವನ್ನು ಸೆಳೆದು ಅಳಿಸಲಾರದ ಚಿರಮುದ್ರೆಯಾಗಿದೆ. ಯಶೋಧರಚರಿತೆಯ ನಾಯಕಿ ಅಮೃತಮತಿ ಕಾಮರೂಪಿ ಗಂಡನಿರುವಾಗಲೂ ಅಧಾರ್ಮಿಕ ವಿಕೃತ ಕಾಮನೆಗೆ ಇಳಿದು ಸುಂಟರಗಾಳಿಗೆ ಸಿಕ್ಕು ಹೊಯ್ದಾಡುವ ಚಂಚಲಚಿತ್ತೆಯಾಗಿ ತನ್ನ ಶೀಲ ಚಾರಿತ್ರವನ್ನು ಬದಿಗಿಟ್ಟು ದಿಕ್ಕು ತಪ್ಪಿ ನಿಲ್ಲುತ್ತಾಳೆ. ಅವಳೀ ಕೆಲಸಕ್ಕೆ ವಿಧಿಯ ಸಹಾಯ ದೊರೆತು ಅವಳ ಅಧಃಪತನಕ್ಕೆ ನಾಂದಿಯಾಗಿ ಪರಿಣಮಿಸುತ್ತವೆ. ತನ್ನ ಅವಸಾನದ ಗೋರಿಯನ್ನು ತಾನೇ ತೋಡಿಕೊಳ್ಳುತ್ತಾಳೆ. ವಿಧಿಯ ಕೈಗೊಂಬೆಯಾಗುತ್ತಾಳೆ. ಅದಕ್ಕಾಗಿಯೇ ಕವಿ ಜನ್ನ ಅವಳ ಮನಸ್ಥಿತಿಯನ್ನು ಕಂಡು “ಮನಸಿಜನ ಮಾಯೆ ವಿಧಿವಳನಸದ ನೆರಂಬಡೆಯ ಕೊಂಡು ಕೂಗದೆ ನರಂ” ಎಂದು ವ್ಯಾಖ್ಯಾನಿಸಿದ್ದಾನೆ. ಅನಂತ ಪುರಾಣದಲ್ಲಿ ಬರುವ ನಾಯಕಿ ಸುನಂದೆ ತನ್ನ ಪಾತಿವೃತ್ಯದ ಸ್ಪಷ್ಟ ಚಿತ್ರದಿಂದಾಗಿ ಸದಾ ಪ್ರಜ್ವಲಿಸುವ ಕಾಂತೆಯಾಗಿ ನಿಲ್ಲುತ್ತಾಳೆ. ಪರಪುರುಷನ ಕಾಮುಕ ಕಣ್ಣು ತನ್ನ ಮೇಲೆ ಬಿದ್ದು ತನ್ನ ರೂಪವೇ ಕೋಪವಾಗಿ ಪರಿಣಮಿಸಿ ಅವರಿಗೆ ಸರಿಯಾದಾಗ ಚಡಪಡಿಸಿ ಹೋಗುತ್ತಾಳೆ. ಕೊನೆಗೂ ಅವನಿಗೆ ವಶವಾಗದೆ ದಿಕ್ಕರಿಸಿ ನಿಲ್ಲುತ್ತಾಳೆ ತನ್ನ ಪತಿ ಯುದ್ಧದಲ್ಲಿ ಮಡಿದನು ಎಂಬ ಸಮಾಚಾರ ತಿಳಿದಾಗ ಪ್ರಜ್ಞೆತಪ್ಪಿ ಬೀಳುತ್ತಾಳೆ. ಕೊನೆಗೆ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ ಸತಿಧರ್ಮವನ್ನು ಎತ್ತಿ ಹಿಡಿಯುತ್ತಾಳೆ. ಒಂದು ಕಡೆಗೆ ಅಮೃತಮತಿಯು ಕಾಮುಕ ಸ್ವಭಾವದ ಶಿಥಿಲಚಿತ್ರದಿಂದಾಗಿ ಕೆಂಗೆಟ್ಟು ತಾನೋಲಿದ ಹೆಣ್ಣು ಬೇರೊಬ್ಬನಲ್ಲಿ ಮನಸ್ಸು ಗೊಟ್ಟಲಾದ್ದರಿಂದ ಯಶೋಧರ ನಿರ್ವೇಗ ಪರನಾಗಿ ನಿಲ್ಲುತ್ತಾನೆ. ಇನ್ನೊಂದು ಕಡೆಗೆ ಸುನಂದೆಯ ಶೀಲಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಮಹಾಸತಿಯ ಭವ್ಯ ಆಕೃತಿಯನ್ನು ಕಂಡು ಇನ್ನು ಯುದ್ಧವೇಕೆ? ರಾಜ್ಯವೇಕೆ? ಎಂದು ವಸುಕ್ಷೀಣ ವೈರಾಗ್ಯಕ್ಕೆ ಕಾರಣವಾದ ಪ್ರಸಂಗಗಳಾದರೂ ಕವಿ ಆಶಯ ವೈರಾಗ್ಯ ನಿರೂಪಣೆಯಲ್ಲಿ ಬಿಚ್ಚಿಕೊಳ್ಳುವುದಕ್ಕಿಂತಲೂ ಹೆಚ್ಚು ಅದಕ್ಕೆ ಕಾರಣವಾದ ರಕ್ತ ಮಾಂಸಗಳಿಂದ ಒಡಗೂಡಿದ ವಾಸ್ತವಿಕತೆಯ ಕಡೆಗೆ ಹೆಚ್ಚು ವಾಲುತ್ತಿರುವುದನ್ನು ನಾವು ಕಾಣುತ್ತೇವೆ. ಈ ದೃಷ್ಟಿಯಿಂದ ಅವನ ಕಾವ್ಯಗಳಾದ ಯಶೋಧರಚರಿತೆ ಮತ್ತು ಅನಂತನಾಥಪುರಾಣ ಎರಡು ಕಾವ್ಯಗಳು ಮನುಷ್ಯ ಸ್ವಭಾವದ ಬಹುಮುಖ್ತ ಅಂಶವಾದ ಪ್ರಣಯ ಪ್ರವೃತ್ತಿಯನ್ನು ಎತ್ತಿ ಹಿಡಿಯುವುದರಲ್ಲಿ ಸಾರ್ಥಕತೆಯನ್ನು ಪಡೆದುಕೊಂಡಿವೆ. ಕಾವ್ಯಗಳಲ್ಲಿ ಘಟನೆಗಳ ಸ್ಪಷ್ಟ ಚಿತ್ರಣವಿರದಿದ್ದರೂ ಗೌಣವಾಗಿವೆ. ಆ ಘಟನೆಗಳಿಂದ ಅಲ್ಲಿ ಚಿತ್ರಿತವಾಗಿರುವ ಪಾತ್ರಗಳ ಹೋರಾಟದ ಹಿಂದಿನ ಮನಸ್ಸಿನ ಹೊಯ್ದಾಟ ತುಮುಲ ತುಂಬಾ ಮುಖ್ಯವಾಗಿವೆ. ಅದಕ್ಕಾಗಿಯೇ ಆ ಪಾತ್ರಗಳು ಜೀವಂತ ಪಾತ್ರಗಳಾಗಿ ನಮ್ಮಗಳ ಮಧ್ಯೆ ಓಡಾಡುವಂತೆ ಕಂಡುಬರುತ್ತವೆ ಆ ಲೌಕಿಕ ಸತ್ಯವನ್ನು ನಾವು ಕಾಣುತ್ತೇವೆ. ಅಮೃತಮತಿಯ ದಿವ್ಯವರವನ್ನು ಕಂಡ ಯಶೋಧರನ ಹೊಯ್ದಾಟವನ್ನು ಕವಿ ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾನೆ ಯಶೋಧರನ ‘ಮನಕನಲ್ದು’ ಇಬ್ಬರನ್ನು ಇಬ್ಬಾಗ ಮಾಡಲು ಮುಂದೂವರಿಯುತ್ತಾನೆ. ತಕ್ಷಣ ಮನಸ್ಸನ್ನು ಸ್ಥಿಮಿತಕ್ಕೆ ತಂದು ಆ ಕಾರ್ಯಕ್ಕೆ ಹೇಸಿ, ಅವರನ್ನು ಕೊಲ್ಲದೆ ಬಿಟ್ಟು ಮರಳಿ ಬಂದು ಮಲಗುತ್ತಾನೆ. ಆತನು ಕಂಡ ದೃಶ್ಯ ಮತ್ತೆ ಕಣ್ಣಿಗೆ ಕಟ್ಟಿದಂತಾಗಿ “ಒಲಿಸಿದ ಪೆಣ್ ಪರರೊಳ ಸಂಚಲಿಸಿದೂರಿದಂ ಸುಖಮ ಪರಮಸುಖ ಸಂಪದಮಾಸಲಿಸಿ ಸೆಲೆ ನೆರೆವ ಸಲೇನೇ ಮುಕ್ತಿಯನೊಲಿಸುವೇನ್” ಎಂದು ಚಿಂತಿಸಿ ರಾತ್ರಿ ನಿಲ್ಲದೆ ತೊಳಲಾಡಿ ಕಳೆಗುಂದಿದ ಮುಖದವನಾಗಿ ಹೋಗುತ್ತಾನೆ. ಇಲ್ಲಿ ಯಶೋಧರ ಮಹಾರಾಜನ ಮನಸ್ಸು ಚಂಡಮಾರುತಕ್ಕೆ ಏಳುವ ಸಮುದ್ರದ ಅಬ್ಬರಗಳಂತೆ ಏಳುತ್ತವೆ. ಮುಳುಗುತ್ತಾ ಬಂಡೆಗೆ ಅಪ್ಪಳಿಸುತ್ತವೆ. ಮಗನ ಕಳೆಗುಂದಿದ ಮುಖವನ್ನು ಕಂಡು ತಾಯಿ ಚಂದ್ರಮತಿ ಕಾರಣ ಕೇಳುತ್ತಾಳೆ. ರಾತ್ರಿ ಕಂಡ ಕೆಟ್ಟ ಕನಸಿಂದ ಎಂದು ಯಶೋಧರ ಹೇಳಿದಾಗ ತಲ್ಲಣಗೊಂಡು ಭಯಗ್ರೀಸ್ತಳಾಗುತ್ತಾಳೆ. ಇದರಿಂದಾಗುವ ಆಪತ್ತು ದೂರಮಾಡಲು ದುರ್ಗಿಗೆ ಬಲಿಕೊಡುವಂತೆ ಒತ್ತಾಯಿಸಿದಾಗ ನಿರಾಕರಿಸುತ್ತಾನೆ. ಕೊನೆಗೆ ಹಠ ಹಿಡಿದಾಗ ಒತ್ತಾಯದಿಂದ ಮನಸ್ಸಿನ ಹೊಯ್ದಾಟದಿಂದಲೇ ಒಪ್ಪಿಕೊಳ್ಳುತ್ತಾನೆ. ಇಲ್ಲಿ ತಾಯಿ ಮಗನ ಹೊಯ್ದಾಟ, ತಾಯಿಗೆ ಮಗನ ಮೇಲಿನ ಪ್ರೀತಿ ಕಣ್ಣಿಗೆ ಕಟ್ಟುವಂತೆ ಚಿತ್ರಿತಗೊಂಡಿದೆ. ಸುನಂದೆಯ ಸೌಂದರ್ಯಕ್ಕೆ ಚಂಡಶಾಸನನು ಮಾರು ಹೋಗುತ್ತಾನೆ. ‘ಈ ಕಡುನಂಟನ ಸತಿಯ ರೂಪವು ಸೋಲಿಸಿತೆನ್ನಂ’ ತಾನು ಮಾಡುತ್ತಿರುವುದು ತಮ್ಮ ಮಿತ್ರದ್ರೋಹ ಎಂಬ ಅರಿವು ಅವನಿಗಿದೆ ಆದರೆ ಸುನಂದೆಯ ನಾಡಿನ ಚಿತ್ತವನ್ನು ಸುನಂಧಿಯಲ್ಲಿ ನಾಡಿದ ಚಿತ್ತವನ್ನು ಕೇಳಲಾರದ ಸ್ಥಿತಿಗೆ ಇರುವವನು. ಸತಿಶಿರೋಮಣಿಯಾದ ಸುನಂದೆ ತನ್ನಿಂದ ಅಗಲಿದಾಗ ವಸುಕ್ಷೀಣ ಅವಳಿಗಾಗಿ ಹಲುಬುತ್ತಾನೆ. ಪರಪುರುಷನ ಕೈವಶವಾಗದೆ ತನ್ನ ಪ್ರಾಣವನ್ನು ಕಳೆದುಕೊಂಡಳು ಎಂಬ ಸಮಾಚಾರ ತಿಳಿದಾಗ ಯುದ್ಧ ತೊರೆದು ನಿಲ್ಲುತ್ತಾನೆ. ‘ನೀನು ನನಗಾಗಿ ಸತ್ತರೂ, ನಾನು ಇನ್ನೂ ನಿನಗಾಗಿ ಬದುಕಿರುವೆ ಕನಲಿ ವಿರಕ್ತನಾಗಿ ಸನ್ಯಾಸ ಸ್ವೀಕರಿಸುವ ಆತನ ಮನದ ತೊಳದಾಟ ಮನ ಕರಗುವಂತದ್ದು. ವಿಷಮತಿಯಾದ ಅಮೃತಮತಿ: ಸುಂದರ ಸುಪುರದ್ರೂಪಿಯು ಆದ ಯಶೋಧರರಾಜನ ಮಡದಿಯಾಗಿ ರಾಣಿ ಅಮೃತಮತಿ “ಆಕೆ ದೀವಮಾಗೆ ಪುಳಿದಂ ಸುಮನೋಬಾಣಂ ತದೂದೂರಮಣನ ನೂಲಿನಂತೆ ಗೋರಿಗೂಳಿಸುತ್ತಿರ್ಕುಂ” ಹೀಗೆ ಸಂಸಾರ ಸರ್ವಸ್ವವನ್ನು ಹೀರುತ್ತಿರುವಾಗ ಒಮ್ಮೆ ಅರಮನೆಯ ಶಯ್ಯಾ ಗೃಹದಲ್ಲಿ ಗಂಡನ ತೋಳತೆಕ್ಕೆಯಲ್ಲಿ ಮಲಗಿರುವಾಗ ಮಧ್ಯರಾತ್ರಿ ಪ್ರಶಾಂತ ವಾತಾವರಣದಲ್ಲಿ ಅನಿರೀಕ್ಷಿತವಾಗಿ ಒಂದು ಪ್ರಸಂಗ “ಬಿನದಕ್ಕೆ ಪಾಡುತಿರೇನು ನ್ದನ ನಿದ್ದೆಗೇ ಕತಕಬೀಜಮಾಯ್ದನೇ ಮೃಗಲೋ ಜನ ತಿಳಿದಾಲಿಸಿ ಮುಟ್ಟಿದ ಮನ ಮನ ತೊಟ್ಟನೆ ಪಸಾಯದಾನಂಗೊಟ್ಟಳ್” ಅವನ ಹಾಡಿನ ಇಂಪಾದ ಅಮೃತ ಧ್ವನಿ ಅಮೃತಮತಿಯ ನಿದ್ದೆಗೆ ಕತಕ ಬೀಜ (ತಿಳಗೂಳಿಸುವ ಬೀಜ; ಚಲ್ವೀಜ ಎಂದು ಹೇಳುತ್ತಾರೆ)ವಾದಂತಾಯಿತು. ಅವಳು ನಿದ್ದೆ ತಿಳದಿದ್ದಳು; ಹಾಡನ್ನು ಕಿವಿಗೆಟ್ಟು ಕೇಳಿದಳು ಅದು ಅವಳ ಮನಸ್ಸನ್ನು ಮುಟ್ಟಿತು. ಕೂಡಲೇ ಮನಸ್ಸನ್ನು ಮೆಚ್ಚಿನ ಉಡುಗೊರೆಯಾಗಿ ತೆತ್ತೇಬಿಟ್ಟಳು. ಆದರೆ ಅಮೃತಮತಿಗೆ ತಾನು ಮಾಡುತ್ತಿರುವುದು ಹೇಯ ಕೆಲಸ ಎಂದು ಕ್ಷಣ ಮನಸ್ಸನ್ನು ಬಿಗಿಹಿಡಿದು ಆಲೋಚನೆ ಮಾಡಬೇಕಾಗಿತ್ತು. ಆದರೆ ಯಾವ ವಿಧವಾದ ಹೋರಾಟಕ್ಕೆ ಮನಸ್ಸಿನಲ್ಲಿ ಸ್ಥಾನವಿಲ್ಲ. ‘ತೊಟ್ಟನೇ ದಾನಂಗೊಟ್ಟಳು’ ಹೀಗಾಗಿ ಇದೊಂದು ಕೃತ್ರಿಮ ಪಾತ್ರದಂತೆ ನಿರಸವಾಗಿ ಮೂಡಿ ನಿಂತಿದೆ. ಮನಸ್ಸು ಮತ್ತು ದೇಹಗಳ ಮೂಲಕ ಅಷ್ಟಾವಂಕನ ಸಂಗೀತ ಇವಳಿಗೆ ತೃಪ್ತಿ ಕೊಟ್ಟಿದ್ದರಿಂದ ಅದಕ್ಕೆ ಸೂಚಿಸುವ ಮೆಚ್ಚುಗೆಯಲ್ಲಿ ಅವನನ್ನು ಕೊಡುವ ಬಯಕೆಯೂ ಇದೆ. ಇಲ್ಲಿಯವರೆಗೆ ಅನಿವಾರ್ಯವಾಗಿ ಯಶೋಧನನ್ನು ಹೊಂದಿಕೊಂಡು ಬಂದು ಮಗುವಿಗೆ ಜನ್ಮ ನೀಡುತ್ತಾಳೆ. ಈಗ ಆ ಭಾವನೆ ಕೆರಳಿ, ವಿವೇಕ ಜಾರಿ ಆತ್ಮ ಸಂಯಮ ಕಳೆದುಕೊಂಡು ಮುಂದೆ ಹೆಜ್ಜೆ ಇಡುತ್ತಾಳೆ. ಮುಂಜಾನೆ ಗೆಳತಿಗೆ ಕರೆದು ಅಂತರಂಗದ ಬಯಕೆ ಹೇಳುತ್ತಾಳೆ. ಒಲ್ಲದ ಮನಸ್ಸಿನ ಭಾವ ವ್ಯಕ್ತಪಡಿಸಿದಾಗ ಅಜ್ಣಾಪಿಸುತ್ತಾಳೆ. ಮಾವಟಿಗನಲ್ಲಿಗೆ ಹೋದ ದೂತಳಿಗೆ ಆತನನ್ನು ಕಂಡು ವಾಕರಿಕೆ ಉಂಟಾಗುತ್ತದೆ. ಅಮೃತಮತಿಯಲ್ಲಿ? ರೂಪಾಧಮನಾದ ಅಷ್ಟಾವಂಕನೆಲ್ಲಿ? ವಿಚಿತ್ರ ‘ಅಪಾತ್ರೆ ರಮತೇನಾರಿ’ ಎಂಬ ಮಾತು ನಿಜವಾಯಿತು. ಹಾಳು ವಿಧಿಗೆ ಕಣ್ಣಿಲ್ಲವೇ? ಎಂದೇಲ್ಲ ಯೋಚಿಸುತ್ತ ದೂತಳು ಹಿಂದಿರುಗುತ್ತಾಳೆ. ಅಷ್ಟಾವಂಕನ ಭಯಂಕರ ಕುರೂಪವನ್ನು ವರ್ಣಿಸಿ ಹೇಳಿದಾಗ ಅವಳ ಎದೆ ನಡುಗುತ್ತದೆ. ಆಗ ಇಟ್ಟ ಹೆಜ್ಜೆಯನ್ನು ಅಮೃತಮತಿ ಹಿಂತೆಗೆದುಕೊಳ್ಳಬಹುದಾಗಿತ್ತು ಆದರೆ ಇಲ್ಲಿ ಅವಳ ಅಸಹಾಯಕ ಸ್ಥಿತಿ ಹಿಂದೆ ಮಾನಸಿಕ ತುಮುಲ ತಾನು ಪ್ರೀತಿಸಿದವನನ್ನು ಪಡೆಯುವ ಹಂಬಲ ಕಾತರಗಳಿಂದ ಬೆಂದು ಕಾಮಾದೀನಳಾಗಿ ಆದ ತನ್ನ ಮುಂದಿನ ನಿರ್ಣಯ ಉಳಿಸಿಕೊಳ್ಳಬೇಕೆಂಬ ಹಠವೊಂದೇ ಜೀವಂತವಾಗುತ್ತದೆ ಹೊರತು ಉಳಿದ ಮಾನ-ಮರ್ಯಾದೆ ಶೀಲ ಮುಖ್ಯವೆನಿಸುವುದಿಲ್ಲ ಅದಕ್ಕಾಗಿ ಕುರೂಪಿಯನ್ನು ವರ್ಣಿಸಿದ ದೂತಿಗೆ “ಕರೆದಾದೊಡೆ ಕತ್ತುರಿಯಂ ಮುರುದಾದೊಡೆ ಮಲಯ ಜಂಗಳಂ ಕೊಂಕಿ ದೊಡೇಂ ಸ್ಮರಚಾಪಮನಿಳಿಕಾಯ್ವರೇ ಮರುಳೇ ಪೊಲ್ಲಮಯ ಲೇಸು ನಲ್ಲರಮೇಯೊಳ್” ಎಂದು ವಿತರ್ಕ ಹೂಡಿ ಪ್ರಕೃತಿಗೆ ಜಗ್ಗುವ ಜೀವನಕ್ಕೆ ಕಾಲಿಡುತ್ತಾಳೆ. ವಾಸ್ತವಿಕವಾಗಿ ರಕ್ತ ಮಾಂಸಗಳಿಂದ ಕೂಡಿದ ಪಾತ್ರ ಈ ರೀತಿಯಲ್ಲಿ ವರ್ತಿಸಲು ಸಾಧ್ಯವೇ?. ರಾಜನ ಹೆಂಡತಿಯಾಗಿ ಒಬ್ಬ ಹೊಲಸುನಾತದ ಬದಗನ ಜೊತೆಯಲ್ಲಿ ರಮಿಸಿ ತನ್ನ ಕಾಮ ಸುಖವನ್ನು ತಿರಿಸಿಕೊಳ್ಳುವಂತಹದ್ದು ‘ಮನಸಿಜನ ಮಾಯೆ ವಿಧಿವಳಸನದ ನರಬಂಡೆಯ ಕೊಂಡು ಕೂಗಿದೆ ನರರಂ’ ಎಂಬ ಕವಿಯ ಮಾತು ನಿಜವಿರಬಹುದು. ಮನ್ಮಥರು ಸಂಚು ಹಿಡಿದಾಗ ಕಾಮೋನ್ಮುನಾದ ವ್ಯಕ್ತಿ ಕುಲ ಪದವಿಗಳನ್ನು, ರೂಪ ಯವ್ವನಗಳನ್ನು ಲೆಕ್ಕಿಸುವುದಿಲ್ಲ ಅದಕ್ಕೆ ಬಲಿಯಾಗುತ್ತಾನೆ. ಅಮೃತಮತಿಯ ಮಟ್ಟಿಗೆ ಹಾಗೆಯೇ ಆಗಿದೆ. ಇದನಿಲ್ಲಿ ಗಮನಿಸಿದರೆ ಯಶೋಧರರಾಜ ಈ ರೀತಿ ಅಮೃತಮತಿಯಂತಹ ಸುಂದರಿ ಕದ್ದು ಕಾಮಿಸಿದರೆ ಏನು ಮಾಡಲು ಸಾಧ್ಯ? ಪ್ರೇಮ ಸಿರಿ ರಾಜ್ಯ ಎತಕ್ಕೆ? ಅದಕ್ಕೆ ಪ್ರತಿಯಾಗಿ ಮೋಕ್ಷ ಸಂಪಾದನೆ ಸರಿಯಲ್ಲವೇ? ಕವಿ ತನ್ನ ಕಾವ್ಯದ ಉದ್ದೇಶ ಸಫಲತೆಯಿಂದಾಗಿ ಅಮೃತಮತಿಯ ಪಾತ್ರವನ್ನು ಒಂದು ಬಲಿಪಶುವನ್ನಾಗಿ ಮಾಡಿಕೊಂಡಿದ್ದಾನೆಂದು ಅನಿಸುತ್ತದೆ. ಅಮೃತಮತಿ ಹೀನತನದ ಗುಟ್ಟು ರಟ್ಟಾಗಿ ಮಾನಸಿಕವಾಗಿ ಹೊಯ್ದಾಡುತ್ತಾಳೆ. ಕೊನೆಗೆ ತನ್ನ ದಾರಿ ಸುಗಮವಾಗಲೆಂದು ಒಂದು ನಿರ್ಧಾರಕ್ಕೆ ಬಂದು ಗಂಡ ಯಶೋಧರ ರಾಜ ಮತ್ತು ಅತ್ತೆ ಚಂದ್ರಮತಿಯನ್ನು ಬೆಡಗು ಭಿನ್ನಾಣದಿಂದ ಮರಳು ಮಾಡಿ ವಿಷಹಾಕಿ ಕೊಂದು ಬಿಡುತ್ತಾಳೆ. ಹೀಗೆ ಜನ್ನನ ಯಶೋಧರ ಚರಿತೆಯ ನಾಯಕಿ ಅಮೃತಮತಿ ತನ್ನ ಹೀನ ನಡತೆಯಿಂದಾಗಿ ‘ಸ್ತ್ರೀಚರಿತಮದೇಂ? ಕಳೆಯಲರಿದು ಪಂಡಿರ ಕೃತಕಂ’ ಎಂಬ ಕಳಂಕ ಹಚ್ಚಿಕೊಂಡು ವಿಷಮತಿಯಾಗುತ್ತಾಳೆ; ವಿಧಿಯ ಬಲಿಪಶುತ್ತಾಳೆ. ಸತಿಧರ್ಮದ ಸುನಂದೆ: ಜನ್ನನ ಅನಂತನಾಥಪುರಾಣದಲ್ಲಿರುವ ಸ್ತ್ರೀ ಪಾತ್ರವಿದು. ವಸುಕ್ಷೀಣನ ಮನಃಪ್ರಿಯೆಯೇ ‘ಅವಳಿಂದ ಪತಿವ್ರತೆಯಿಲ್ಲ ನೋಡ ಲೋಕದಳ್’ ಎಂದೆನಿಸಿಕೊಳ್ಳುವ ಸಾದ್ವಿ. ಅವಳ ರೂಪವನ್ನು ಕವಿ ಈ ರೀತಿಯಾಗಿ ಬಣ್ಣಿಸಿರುವನು. ‘ಊರ್ವಶಿ ರಂಭೆ ಮೇನಕೆ ತಿಳುತಮ್ಮೆಯಂಬರ ಹಾವ ಭಾವಮಂ ಪುರ್ವಿನಕೊಂಡು ಕಟ್ಮಲರ ಕಾಂತಿ ಕದಮಪಿನ್ ತೆಳ್ಳು ಸಾರ್ವುದಾ ರೋರ್ವರೇ ಗೆಲ್ವುದಕ್ಕೆನಿಪ ರಾಣಿವಾಸದ ದೇಸೆಯಾಸೆಯ ಯ್ನೊರ್ವರೊಳಂ ಸುನಂದೆ ಪೆರಿಯಾಳ್ವಸುಕ್ಷೀಣನ ಚಿತ್ತವೃತ್ತಿಯಂ’ ಸುನಂದೆಯ ಸೌಂದರ್ಯದ ಸುಳಿಯಲ್ಲಿ ಸಿಕ್ಕ ವಸುಕ್ಷೀಣನು ಅವಳ ಮುಖ ಮಣಿದರ್ಪಣದಲ್ಲಿ ತನ್ನ ನಲಿವನ್ನು ಕಂಡು ಆನಂದಿಸುತ್ತಿದ್ದನು. ಅವನ ಪ್ರಾಣಮಿತ್ರ ಚಂಡಶಾಸನ ಸಹಪಂಕ್ತಿ ಭೋಜನಕ್ಕೆ ಕುಳಿತಾಗ ಸುನಂದೆ ಅತಿಥಿಯನ್ನು ಸದ್ಗೃಣಿಯಾಗಿ ಸತ್ಕರಿಸಿದಳು. ‘ಕಾಮದೇವನ ಕರವಳಂತೆ ಕಣ್ಣೋಳ್ ಪೊಳೆದು ಎರ್ದೆ ಯೊಳ್ ಉಲ್ಕಿಕೊಳ್ಳುಬೆಳ್ಳುಗೂಳಿಸುವ ಮನ್ಮಥನ ಸಮ್ಮೋಹನ ಶಕ್ತಿಯಂತೆ ರೂಪೂವತಿಯಾದ ಸುನಂದನೆಯನ್ನು ಚಂಡಶಾಸನ ಹತ್ತಿರದಿಂದ ಕಂಡು ಅವಳ ಚೆಲುವಿಗೆ ಬೆರಗಾಗಿ ಮನಸೋತು ಕಾಮತಪ್ತನಾಗಿ ಬಳಲುತ್ತಾನೆ. “ಈ ಕಡುನಂಟಿನ ಸತಿಯ ರೂಪವು ಸೋಲಿಸಿತೆನ್ನಂ’ ಎಂದು ನಾಚಿಕೆ ಇಲ್ಲದೆ ಹೇಳುತ್ತಾನೆ. ಬಮ್ಮೆ ಕಾರಣ್ಯದಿಂ ರಮಣಿಲೋಚನ ಚುಂಬನಕಳುವಮೇ ನೆಟ್ಟಿದರ್ದ ಹೃತ್ ಶಲ್ಯಮಂ” ಎಂದು ಚಡಪಡಿಸಿ ಕಾಮಾತುರದಿಂದ ಕುರುಡಾಗಿ ಹೋಗುತ್ತಾನೆ. ಹೀಗೆ ಸುನಂದೆ ಆತನಿಂದ ಅಪಹರಣಕ್ಕೆ ಗುರಿಯಾಗುತ್ತಾಳೆ. ಈ ಅನಿರೀಕ್ಷಿತ ಅಘಾತದಿಂದಾಗಿ ಅವಳು ‘ಉರಗಂ ಪಿರಿದಂತೆ ಬೆದರಿ ಹಾವು ಪಿರಿದಂತಿರೇ ಒದರಿ ಕಡುಜರಪತ್ತಿದಂತು ಕಳವಳಿಸಿ ಠಕ್ಕು ಪತ್ತಿದಂತೆ ಮತಿಗೇಟ್ಟು ಸಿಡಿಲ್ ಪೊಡೆದಂತೆ ಹಮ್ಮದಂಬೋಗಿ ಎಚ್ಚರ ತಪ್ಪುತ್ತಾಳೆ. ಪ್ರಜ್ಞೆ ತಿಳಿಯಾದಾಗ ಚಂಡಶಾಸನ ವಿಶ್ವಾಸ ಘಾತಕತನವನ್ನು ಕಾಮಾತುರನಾಗಿ ತನ್ನನ್ನು ಪಿರಿದಿದ್ದನ್ನು ತಿಳಿದು ದ್ವಿಗ್ಬ್ರಮೆಗೊಂಡು ನಿಲ್ಲುತ್ತಾಳೆ. ಅಸಹಾಯಕ ಸ್ಥಿತಿಯಂದ ಪರಿತಪಿಸುತ್ತಾಳೆ. ‘ಹಾ! ವಸಿಕ್ಷೀಣನೃಪ ಹಾ! ನೃಪವೀರ ಎಂದು ಹಲುಬಿ ಹುಯ್ಯಲಿಡುತ್ತಾಳೆ. ಇಲ್ಲಿ ಅವಳ ರೂಪವೇ ಅವಳಿಗೆ ಶಾಪವಾಗಿ ಪರಿಣಮಿಸುತ್ತದೆ. ವಿಧಿಯು ಅವಳಿಗೆ ಆಟವಾಡಿಸಿ ಪತಿಯ ಅವಾಜ್ಯ ಪ್ರೇಮದಿಂದ ವಂಚಿತವಾಗುವಂತೆ ಮಾಡಿದಾಗ, ಅಸಹಾಯಕಳಾಗಿ ಅನಾಥೆಯಾದೆನೆಂದು, ನನಗಿನ್ನಾರು ಆಸರೆ? ಯಾರು ಕಾಯ್ವರು? ಎಂದು ಪರಿತಪಿಸುತ್ತಾಳೆ. ‘ಗಂಡರ ಪಿಂದೆ ಕಳುವದರಿದೇ ಸ್ತ್ರೀ ಬಾಲೆಯಂ ಪಾಳ್ಮಳ್ವಾಳಿಯೇ’ ಎಂದು ಚಂಡಶಾಸನನನ್ನು ಹಾಳಾಗುವಂತೆ ಶಾಪ ಹಾಕಿ ಹಳೆಯುತ್ತಾಳೆ. ಅಸಹಾಯಕಳಾದ ಹೆಣ್ಣು ತನ್ನ ಶೀಲ ಉಳಿಸಿಕೊಳ್ಳಲು ಎಲ್ಲಾ ಸಾಧ್ಯತೆಗಳನ್ನು ಒಟ್ಟುಗೂಡಿಸಿ ಪ್ರಯತ್ನಿಸುತ್ತಾಳೆ ಮೊದಲಿಸುತ್ತಾಳೆ, ಉರಿಜ್ವಾಲೆಯಾಗುತ್ತಾಳೆ. ಅವಳ ರಕ್ಷಣೆಗೆ ಬಂದ ಸಿಂಹಚೂಡನ ಜೊತೆಗೆ ಚಂಡ ಶಾಸನ ಕಾಲಗಕ್ಕಿಳಿಯುತ್ತಾನೆ. ಈ ಪಾತಿವೃತ್ತದ ಪಾರ್ಥಿವ ಘಣಾನುಣಿಯ ಎದುರು ಚಂಡಶಾಸನನ ಪುಂಗಿಯಾಟ ನಡೆಯುವುದಿಲ್ಲ. ನಾಳೆ ನನ್ನ ಪತಿ ಯುದ್ಧಮಾಡಿ ಈ ಚಂಡಾಲನನ್ನು ತಲೆಗೆಡೆದು ತನ್ನನ್ನು ಬಿಡಿಸಿಕೊಂಡು ಹೋಗುತ್ತಾನೆ ಎನ್ನು ಕಂಡು ಎಂದು ಪತಿಯ ತಿಳಿದು ಸುನಂದೆ ಮುಂದೆ ಯಾವ ಅವಳು ಪತಿಯ ನಿಲ್ಲುತ್ತಾಳೆ. ಹೀಗೆ ತನ್ನ ಪಾತಿವೃತ್ಯದ ಅವನಿಗೆ ಅವಳು

Fields of Study & Subjects

Poetry Analysis and Criticism Indian and Buddhist Studies Literature: history themes analysis

Publication details

Journal / source
Zenodo (CERN European Organization for Nuclear Research)
Publication date
25 March 2026
Language
KN