ಮೈಸೂರು ದಸರಾ ಒಂದು ಸಾಂಸ್ಕೃತಿಕ ಹಿರಿಮೆ: ಅಂದು-ಇಂದು.

Read full text Summarise with VIRAT
Authors: ಡಾ. ಸುಂದ್ರೇಶ. ಎನ್
Cited by: 0

Summary

No summary yet. VIRAT can read this paper and write a plain-language summary of its aim, methods, key findings and limitations.

Summarise with VIRAT Free to try with your Science Catalogs account.

Abstract

"ಮೈಸೂರು ದಸರಾ ಎಷ್ಟೋಂದು ಸುಂದರ" ಎಂಬ ಕರುಳಿನ ಕರೆ ಸಿನಿಮಾದ ಹಾಡೊಂದು ಮೈಸೂರು ದಸರಾ ಹಬ್ಬದ ಸಾಂಸ್ಕೃತಿಕ ಸೋಬಗನ್ನು ತಿಳಿಸಿರುವ ಹಾಗೆ ಈ ಹಬ್ಬವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ವಿಶ್ವ ಪ್ರಸಿದ್ದಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ಲೇಖನದ ಉದ್ದೇಶ ದಸರಾ ಹಬ್ಬವು ಹೇಗೆ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಇಡೀ ಕರ್ನಾಟಕದ ಸಾಂಸ್ಕೃತಿಕ ಸೊಬಗನ್ನು ಬಿತ್ತರಿಸುವ ವೇದಿಕೆಯಾಗಿದೆ. ಸ್ವಾತಂತ್ರ್ಯ ಪಡೆಯುವ ಮೊದಲಿನ ದಸರಾ ಆಚರಣೆ ಸಿದ್ದತೆ ಹಾಗೂ ಕೆಲವು ಪ್ರಮುಖ ಘಟನೆಗಳು, ಸ್ವಾತಂತ್ರ್ಯ ನಂತರ ದಸರಾ ಹಬ್ಬದಲ್ಲಾದ ಕೆಲವು ಬದಲಾವಣೆಗಳನ್ನ ಕೇಂದ್ರಿಕರಿಸಿ ಬರೆಯುವ ಪ್ರಯತ್ನ ಇದಾಗಿದೆ. ಅಂದರೆ ದಸರಾ ಮೆರೆವಣಿಗೆ ಸಂದರ್ಭದಲ್ಲಿ ಪ್ರತಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಭೌಗೋಳಿಕ ವೈವಿಧ್ಯತೆ ಪ್ರಾದೇಶಿಕತೆ, ಐತಿಹಾಸಿಕತೆ, ಕಲಾ ನೃತ್ಯಗಳು, ಜಾನಪದ ನೃತ್ಯಗಳು, ಕಲೆ, ನುಡಿ, ಭಾಷೆ, ಆಚಾರಗಳು, ಬುಡಕಟ್ಟುಗಳು, ಆಹಾರ, ಉಡುಗೆ-ತೊಡುಗೆ ಹೀಗೆ ಪ್ರತಿ ಜಿಲ್ಲೆಯನ್ನು ಪ್ರತಿನಿಧಿಸುವ ಮತ್ತು ಪ್ರದರ್ಶಿಸುವ ಮೂಲಕ ಸಂಪೂರ್ಣ ಕರ್ನಾಟಕದ ಸಾಂಸ್ಕೃತಿಕ ಸಂಪತ್ತನ್ನು ಶ್ರೀಮಂತಿಕೆಯನ್ನು ಅನಾವರಣಗೋಳಿಸುವ ಒಂದು ವೇದಿಕೆಯಾಗಿ ಮೈಸೂರು ದಸರಾ ತನ್ನನ್ನು ಗುರುತಿಸಿಕೊಂಡಿದೆ. ದಸರಾ ಸಾಂಪ್ರಾದಾಯಿಕ ಹಿನ್ನೆಲೆ ದಸರಾ ಹಬ್ಬವನ್ನು ಇಡೀ ಭಾರತದಲ್ಲೇ ಸೆಪ್ಟೆಂಬರ್-ಅಕ್ಟೋಬರ್ ಮಾಹೆಯಲ್ಲಿ ಆಚರಿಸಲಾಗುತ್ತದೆ. ನವರಾತ್ರಿಯ ಜೊತೆಗೆ ದಶಮಿಯ ದಿವಸವೂ ದೇವಿಯನ್ನು ಪೂಜಿಸಿ, ಅಂದು ರಾತ್ರಿ ಪೂಜಾ ಪರಿಸಮಾಪ್ತಿಯನ್ನು ಮಾಡುತ್ತಾರೆ. ಆದ್ದರಿಂದ ಇದಕ್ಕೆ "ದಶಹರ" ಎಂದೂ ಹೆಸರಿದೆ. ಹತ್ತು ದಿವಸಗಳು ಮಾಡಲಾಗುವ ದೇವಿ ಪೂಜಾ ಮಹೋತ್ಸವವಾದ್ದರಿಂದ ಇದಕ್ಕೆ ಈ ಹೆಸರು ಆಡುಭಾಷೆಯಲ್ಲಿ ದಶಹರ-"ದಸರಾ" ಎಂದಾಗಿದೆ.1 ಅದೇ ಮಾದರಿಯಲ್ಲಿ ನಮ್ಮ ಕರ್ನಾಟಕದಲ್ಲಿ ವಿಜಯದಶಮಿ ದಸರಾ ಮಹೋತ್ಸವವೂ ವಿಜಯನಗರ ರಾಜರ ಕಾಲದಿಂದ ಮಹಾನವಮಿ ಹಬ್ಬವಾಗಿ ಆನೆಗುಂದಿಯಲ್ಲಿ ಆಚರಿಸಲಾಗುತ್ತಿದೆ. 1565ರ ತಾಳಿಕೋಟೆ ಕದನದ ನಂತರ ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಅವರ ಸಾಮಂತರಾಗಿದ್ದ ಯದುವಂಶದ ಮೈಸೂರು ಒಡೆಯರು(ರಾಜ ಒಡೆಯರು) ಈ ಪರಂಪರೆಯನ್ನು 1610 ರಿಂದ ಶ್ರೀರಂಗಪಟ್ಟಣದಲ್ಲಿ ಆಚರಿಸಲು ಮುಂದುವರೆಸಿದರು. ಇವರು ಅರಮನೆಯ ಹಬ್ಬ ಜನಮನದ ಹಬ್ಬವಾಗಿ ಮೈಸೂರಿನ ವೈಶಿಷ್ಟ್ಯ: ಮೈಸೂರುತನದಿಂದ ಆಚರಿಸಲು ಪ್ರಾರಂಭಿಸಿದರು.2 ರಾಜ ಒಡೆಯರ ನಂತರ ಅಲ್ಲಿಂದ ಮೈಸೂರಿಗೆ ದಸರಾವನ್ನು ವರ್ಗಾಯಿಸಲಾಯಿತು. ಈ ರೀತಿಯಲ್ಲಿ ನವರಾತ್ರಿ ಉತ್ಸವದ ಆಚರಣೆ ಅದ್ದೂರಿ, ಅದ್ಬುತ, ಅನನ್ಯ, ಪ್ರದೇಶ, ಪ್ರಭಾವ, ಪರಿಸ್ಥಿತಿಗಳಿಗೆ ತಕ್ಕಂತೆ ಈ ಆಚರಣೆಯಲ್ಲಿ ವಿಭಿನ್ನತೆ ತೋರಿರುವುದು ಸಹಜ, ಒಳಗಿನ ಹೂರಣ ಒಂದೇ ಆದರೂ ಹೊರಗಿನ ಚೌಕಟ್ಟಿನಲ್ಲಿ ಆಚರಣಾ ವಿಧಾನದಲ್ಲಿ ಮಾತ್ರ ವಿಭಿನ್ನತೆ. ಆ ವಿಭಿನ್ನತೆಯಲ್ಲೂ ಆಕರ್ಷಣೆ ಉಂಟು: ಸ್ವಂತಿಕೆ ಉಂಟು.3 ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಹಬ್ಬವನ್ನು ಹೆಚ್ಚು ಆಕರ್ಷಣೆಯಿಂದ ಆಚರಿಸಲು ಪ್ರಾರಂಭಿಸಿದರು. ಹಾಗೆಯೇ ಇವರ ಕಾಲದಲ್ಲಿ ರಾಜಧಾನಿಯು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಗೊಂಡು ಜೊತೆಗೆ ಸಿಂಹಾಸನವೂ ಮೈಸೂರಿಗೆ ಬಂತು.4 ಅದರೊಡನೆ ನವರಾತ್ರಿ ಉತ್ಸವದ ಆಚರಣೆಯು ಮೈಸೂರಿನ ವೈಶಿಷ್ಟ್ಯವಾಯಿತು. ಮತ್ತೆ ಅದೇ ಅದ್ದೂರಿತನ, ವೈಭವ, ವೈಶಿಷ್ಟ್ಯವನ್ನು ಪಡೆಯಿತು. ತದನಂತರ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಕಾಲದಲ್ಲಿ ಈ ಹಬ್ಬಕ್ಕೆ ಮತ್ತಷ್ಟು ವೈಭವಿಕರಿಸಿ ಉತ್ತುಂಗಕ್ಕೆರಿ ವಿಶ್ವವಿಖ್ಯಾತಿ ಮೈಸೂರು ದಸರಾ ಮಹೋತ್ಸವಾಗಿ ಅದ್ದೂರಿಯಾಗಿ ವಿಜೃಂಭಿಸಿತು. ಯದುವಂಶದ 25ನೇ ಮತ್ತು ಕೊನೆಯ ದೊರೆ ಶ್ರೀ ಜಯಚಾಮರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ ಇನ್ನಷ್ಟು ವೈಭವ ಪಡೆದುಕೊಂಡು ಜಾಗತಿಕ ಆಕರ್ಷಣೆ ಪಡೆಯಿತು. 1947ರ ನಂತರ ಕೂಡ ಯಾವುದೇ ಅಡ್ಡಿಯಿಲ್ಲದೆ ದಸರಾ ಆಚರೆಣೆ ನಡೆದುಕೊಂಡು ಬರುತ್ತಿದೆ. 1962ರ ರಾಜಧನ ಮತ್ತು ರಾಜತ್ವ ರದ್ದಾದಾಗ ಮೂರ್ನಾಲ್ಕು ವರ್ಷ ದಸರಾ ನಿಂತಿತ್ತು. ಆದರೆ ಮೈಸೂರಿನ ಪ್ರಮುಖ ಕೈಗಾರಿಕೋಧ್ಯಮಿ ಎಫ್.ಕೆ. ಇರಾನಿ ನೇತೃತ್ವದಲ್ಲಿ ಸಮಿತಿ ರಚಿಸಿ ಸರಳವಾಗಿ ಅರಮನೆ ಒಳಗೆ ದಸರಾ ಆಚರಿಸಲಾಯಿತು. 1970 ರ ನಂತರ ಅಂಭಾರಿಯಲ್ಲಿ ರಾಜರ ಬದಲು ದೇವಿ ಚಾಮುಂಡೇಶ್ವರಿಯ ಮೂರ್ತಿಯನ್ನು ಇಡಲು ಪ್ರಾರಂಭಿಸಲಾಯಿತು. 1980ರಲ್ಲಿ ಆರ್. ಗುಂಡೂರಾವ್‍ರವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಭವ್ಯ ಪರಂಪರೆಯ ದಸರಾ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿ ಅದರ ಉಸ್ತುವಾರಿಯನ್ನು ಸರ್ಕಾರವೇ ವಹಿಸಿಕೊಂಡು ಬಂದಿದೆ. ಅಂದಿನಿಂದ ಇಂದಿನವರೆಗೂ ದಸರಾವನ್ನು ನಾಡಹಬ್ಬವನ್ನಾಗಿ ರಾಜ್ಯ ಸರ್ಕಾರದಿಂದಲೇ ಪ್ರತಿವರ್ಷ ಆಚರಿಸಲಾಗುತ್ತಿದೆ. ಅಂದು ದಸರಾ ಮಹೋತ್ಸವವು ವಿಜಯನಗರ ಕಾಲದಿಂದಲೂ ಆಚರಿಸಲ್ಪಡುತ್ತಿದ್ದು ಆದರೆ ಅದಕ್ಕೆ ವೈಭವವನ್ನು ಹೆಚ್ಚಿಸಿದ್ದು ಯದುವಂಶದ ಮೈಸೂರು ಒಡೆಯರು. ಈ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ದಸರಾ ಮಹೋತ್ಸವದ ಆಚರಣೆಯ ಬಗ್ಗೆ ಲಭ್ಯವಿರುವ ಕೆಲವು ಅರಮನೆಯ ಪತ್ರವ್ಯವಹಾರಗಳು, ಆಜ್ಞಾಪನೆಗಳು ಇವುಗಳಲ್ಲಿ ಅಂದಿನ ದಸರಾ ಬಗೆಗಿನ ಕೆಲವು ವಿಶೇಷತೆಗಳ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅಂದು ದಸರಾ ಮಹೋತ್ಸವ ಎಂದರೆ ಸಾವಿರಾರು ಜನ ಒಂದು ಕಡೆ ಸೇರುವ ಒಂದು ದೊಡ್ಡ ವೇದಿಕೆಯಾಗಿತ್ತು. ಇಂದಿನಂತೆ ಯಾವುದೇ ಮಾಧ್ಯಮಗಳು ಅಥವಾ ಸಾಮಾಜಿಕ ಮಾಧ್ಯಮಗಳಾಗಲಿ ಇರಲಿಲ್ಲ. ಈ ಹಬ್ಬದ ಸಮಯದಲ್ಲೇ ಜನರಿಗೆ ಸಾಮಾಜಿಕ ಅರಿವು, ಜಾಗೃತಿ ಮೂಡಿಸುವ ವೇದಿಕೆಯಾಗಿತ್ತು. 1908ರಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ "ದ ಮೈಸೂರು ದಸರಾ ಕೈಗಾರಿಕ ಮತ್ತು ಕೃಷಿ ವಸ್ತುಪ್ರದರ್ಶನ "ವನ್ನು ಆಯೋಜಿಸುತ್ತಿದ್ದು ಅದರಲ್ಲಿ ಕೃಷಿ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಅಂದರೆ ಕಾಗದ ಉತ್ಪಾದನೆ, ಬೆಲ್ಲದ ಉತ್ಪಾದನೆ, ನೂಲುವ ಸ್ಪರ್ಧೆ, ಹಾಲು ಹಾಲಿನ ಉತ್ಪಾದನೆ, ಕೃಷಿಯಲ್ಲಿ ಆಧುನಿಕ ಯಂತ್ರಗಳ ಬಳಕೆ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಪ್ರಖ್ಯಾತ ವಿಷಯ ತಜ್ಞರಿಂದ ಉಪನ್ಯಾಸ ಕೊಡಿಸಲಾಗುತ್ತಿತ್ತು.5 1908ರ ಸಂದರ್ಭದಲ್ಲಿ ದಸರಾ ಕೃಷಿ ಮತ್ತು ಕೈಗಾರಿಕ ವಸ್ತುಪ್ರದರ್ಶನ ಪ್ರವೇಶಿಸಲು 2 ಆಣ ಪ್ರವೇಶ ದರ ನಿಗದಿಪಡಿಸಿದ್ದು ಟಿಕೆಟ್ ಅಥವಾ ಪಾಸ್ ಇಲ್ಲದವರಿಗೆ ಪ್ರವೇಶ ನಿಷಿದ್ದ ಎಂದು ತಿಳಿಸಲಾಗಿದ್ದರು ರೈತರಿಗೆ ಮತ್ತು ಕುಶಲಕರ್ಮಿಗಳಿಗೆ (ಪ್ರವೇಶ ದರ ಕೊಡಲಾಗದವರು) ಡೆಪ್ಯುಟಿ ಕಮಿಷನರ್ ಅಥವಾ ಸಹಾಯಕ ಕಮಿಷನರ್ ಅಥವಾ ಅಮಲ್ದಾರರಿಂದ ಅನುಮತಿ ಪತ್ರ ತಂದವರಿಗೆ ಮಾತ್ರ ಪ್ರವೇಶ ಕಡ್ಡಾಯ ಎಂದು ತಿಳಿಸಿರುವ ಪತ್ರ ವಿಶೇಷವಾಗಿದೆ. 6 ಈಗಾಗಲೇ ತಿಳಿಸಿದಂತೆ ದಸರಾ ಎಂದರೆ ಅದೊಂದು ಸಾವಿರಾರು ಜನರು ಒಂದು ಕಡೆ ಸೇರುವ ಒಂದು ವೇದಿಕೆಯಾಗಿದ್ದು ಆ ಉದ್ದೇಶದಿಂದ ಮೈಸೂರು ಸರ್ಕಾರವೂ ಮದ್ರಾಸ್ ಸರ್ಕಾರಕ್ಕೆ ಪತ್ರವ್ಯವಹಾರ ಮಾಡಿ ಈ ಸಂದರ್ಭದಲ್ಲಿ ಮದ್ರಾಸ್‍ನಿಂದ ಏರೋಪ್ಲೇನ್‍ನನ್ನು ತರಿಸಿ ಪ್ರದರ್ಶನಕ್ಕಿಡುವುದರ ಮೂಲಕ ಜನರಿಗೆ ಆಧುನುಕ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಜನರ ಗಮನಕ್ಕೆ ತರುವ ಪ್ರಯತ್ನ ನಡೆದಿರುವುದು ವಿಶೇಷವಾಗಿದೆ. 7 ದಸರಾ ಮೆರವಣಿಗೆಯ ವಿಷಯದಲ್ಲಿ ಅಂದಿನಿಂದಲೂ ಇಂದಿಗೂ ಮಾರ್ಗದಲ್ಲಿ ಯಾವುದೇ ಬದಲಾವಣೆಯಾಗದಿರುವ ಬಗ್ಗೆ ಕೆಲವು ಅರಮನೆಯ ಪತ್ರವ್ಯವಹಾರವೂ ಸಾಕ್ಷಿಯಾಗಿದೆ. ಮೆರವಣಿಗೆಯು ಆನೆ ಬಾಗಿಲಿನಿಂದ ಪ್ರಾರಂಭವಾಗಿ , ಜಯರಾಮ ಗೇಟ್, ಎಲ್ಗಿನ್ ಫೌಂಟೇನ್, ಸಯ್ಯಾಜಿರಾವ್ ರಸ್ತೆ ಕೊನೆಯಲ್ಲಿ ಬನ್ನಿಮಂಟಪಕ್ಕೆ ಬಂದು ತಲುಪುತ್ತದೆ. ಮತ್ತೆ 1939ರ ದಾಖಲೆಯು ಮೆರವಣಿಗೆಯು ಹಿಂದಿರುಗುವ ಮಾರ್ಗದ ಬಗ್ಗೆಯು ತಿಳಿಸುತ್ತದೆ. ಇಂದು ಕೂಡ ಅದೇ ಮಾರ್ಗವಾಗಿ ಮೆರವಣಿಗೆ ನಡೆಯುತ್ತದೆ. 8 1928ರಲ್ಲಿ ಭಾರತದ ಪ್ರಸಿದ್ದ ಶಾಸ್ತ್ರೀಯ ಸಂಗೀತಗಾರರಾದ ಮೇಡಂ ಗುಹಾರ್ ಜಾನ್ ಮತ್ತು ಅಮೇರಿಕಾದ ಪ್ರಸಿದ್ದ ಲೇಖಕ ಗ್ರೇಸ್ ಬರ್ಹೋ ಅವರು ಆಸ್ಥಾನದ ಸಂಗೀತಗಾರರಾಗಿ ದಸರಾ ಮಹೋತ್ಸವದ ಸಮಯದಲ್ಲಿ ತಮ್ಮ ಕಲೆ ಪ್ರದರ್ಶಿಸಲು ಆಯೋಜಿಸಿರುವುದು ಮತ್ತು 500 ರೂ ಒಂದು ಪ್ರದರ್ಶನಕ್ಕೆ ಅವರಿಗೆ ಗೌರವಧನವಾಗಿ ಕೊಟ್ಟಿರುವುದು ವಿಶೇಷವಾಗಿದೆ ಇಂದಿಗೂ ಭಾರತದ ಪ್ರಸಿದ್ದ ಸಂಗೀತಗಾರರಿಂದ ದಸರಾ ಹಬ್ಬದ ಸಮಯದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಗಮನಿಸಬಹುದು. 1928ರಲ್ಲಿ ಮೈಸೂರು ಆಸ್ಥಾನದ(ಅರಮನೆಯ) ಸಂಗೀತಗಾರರಾಗಿ ಆಯ್ಕೆ ಮಾಡಿದ್ದು ಮತ್ತು ಅವರ ನಿಧನದ ನಂತರ ಗುಹಾರ್ ಜಾನ್‍ರವರು ಮಿಸ್ ರಾಜಾಯಿ(ತಿರುವಾಂಕೂರು) ಎಂಬ ಪ್ರಸಿದ್ದ ಸಂಗೀತಗಾರ್ತಿಯನ್ನು ನೇಮಿಸಲು ಹೆಸರು ಸೂಚಿಸಿ ವ್ಯವಸ್ಥೆ ಮಾಡಿ ಅವರ ಎರಡು ಪ್ರದರ್ಶನಗಳಿಗೆ 1000 ರೂ ಗೌರವಧನ ನಿಗಧಿಮಾಡಿದ್ದು ವಿಶೇಷ ಎನಿಸುತ್ತದೆ.9 ದಸರಾ ಎಂದರೆ ವಿಶ್ವಪ್ರಸಿದ್ದವಾದ ಒಂದು ಸಾಂಸ್ಕೃತಿಕ ಹಬ್ಬ ಇದನ್ನೂ ನೋಡಲು ದೇಶ-ವಿದೇಶದಿಂದ ಜನಬರುವುದು ಸರ್ವೇಸಾಮಾನ್ಯ ಅದರಂತೆ 1935ರ ಸಂದರ್ಭದಲ್ಲಿ ಭಾರತದ ಪ್ರಸಿದ್ದ ರಾಜಮನೆತನವಾಗಿದ್ದ ಕೊಲ್ಲಾಪುರದ ರಾಜ ಮತ್ತು ರಾಣಿಯವರು ದಸರಾ ಭೇಟಿಗಾಗಿ ಬರಲು ಪತ್ರ ಬರೆದಿದ್ದು ಅವರು ಮೈಸೂರಿನಲ್ಲಿ ತಂಗಲು ಮತ್ತು ಪ್ರವಾಸದ ವಿವರದ ಬಗ್ಗೆ ನಡೆದಿರುವ ಪತ್ರವ್ಯವಹಾರವನ್ನು ಗಮನಿಸಬಹುದು.10 1939ರ ಸಂದರ್ಭದಲ್ಲಿ ಭಾರತದ ಪ್ರಖ್ಯಾತ ತತ್ವಜ್ಞಾನಿಯಾದ ಡಾ.ರಾಧಾ ಕೃಷ್ಣರವರು ದಸರಾ ಹಬ್ಬದ ಸಂದರ್ಭದಲ್ಲಿ ಭೇಟಿ ನೀಡುವ ಸಲುವಾಗಿ ನಡೆದ ಪತ್ರವ್ಯವಹಾರಗಳು ತುಂಬಾ ವಿಶೇಷವಾಗಿದೆ ಅಂದರೆ ಅವರಿಗೆ ಭೇರೆ ತುರ್ತು ಕಾರ್ಯಗಳಿದ್ದರಿಂದ ಕೆಲವು ದಿನಗಳು ಮಾತ್ರ ಉಳಿದು ಮತ್ತೆ ಹಿಂದಿರುಗಲು ಮೈಸೂರು ಸರ್ಕಾರ ವ್ಯವಸ್ಥೆ ಮಾಡಿರುವುದು ಗಮನಾರ್ಹವಾಗಿದೆ.11 1922ರ ಸಂದರ್ಭದಲ್ಲಿ ಡಾ.ರವೀಂದ್ರನಾಥ ಠ್ಯಾಗೋರ್ ಮತ್ತು ಸೈಲವೈನ್ ಲೇವಿ ಮತ್ತಿತರರು ಮೈಸೂರು ಭೇಟಿ ಮಾಡುವ ಸಂದರ್ಭದಲ್ಲಿ ಗವರ್ನಮೆಂಟ್‍ನ ಹೌಸ್‍ನ ಸೂಪರಿಂಟೆಂಡೆಂಟ್‍ರವರು ಅವರ ಉಳಿಯಲು ಎರಡು ಸ್ವೀಸ್ ಕಾಟೇಜ್ ಮತ್ತು ಬೇಸಿಗೆ ಅರಮನೆಯಲ್ಲಿ ವ್ಯವಸ್ಥೆ ,ಕ್ಯಾಟರಿಂಗ್ ವ್ಯವಸ್ಥೆ, ಪ್ರವಾಸಕ್ಕಾಗಿ ರೋಲ್ಸ್ ರಾಯ್ ಕಾರನ್ನು ವ್ಯವಸ್ಥೆ ಮಾಡಿರುವುದು ತುಂಬಾ ವಿಶೇಷವಾಗಿದೆ.12 1920ರ ದಸರಾ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮಗಳ ಬಗ್ಗೆ ಒಂದು ಪತ್ರ ವಿಶೇಷವಾಗಿದೆ. ಇಂದು ಸಹ ದಸರಾ ಹಬ್ಬದ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ಪ್ರಸಿದ್ದ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ ಹಾಗೆಯೇ ಅಂದು ಕೂಡ ದೇಶ-ವಿದೇಶಗಳಿಂದ ಪ್ರಖ್ಯಾತ ಸಂಗೀತಗಾರರನ್ನು ಕರೆಸಿ ಸಂಗೀತ ರಸಸಂಜೆ ಏರ್ಪಡಿಸಲಾಗುತ್ತಿತ್ತು ಉದಾಹರಣೆಗೆ 1920ರಲ್ಲಿ ವೋಕಲ್ ಮ್ಯೂಸಿಕ್- ಮಿ.ಬಿಡಾರಂ ಕೃಷ್ಣಪ್ಪ , ವೀಣಾ - ಮಿ. ಸುಬ್ಬಣ್ಣ, ವೀಣಾ ಮತ್ತು ಜಲತೃಂಗ್ - ಮಿ. ಶೇಷಣ್ಣ, ವೋಕಲ್ ಮ್ಯೂಸಿಕ್- ಮಿ.ರಾಚಪ್ಪ, ವಯೋಲಿನ್- ಮಿ.ಶ್ರೀನಿವಾಸ ಅಯ್ಯಾಂಗಾರ್ ಹೀಗೆ ದೊಡ್ಡ ದೊಡ್ಡ ವಿದ್ವಾಂಸರಿಂದ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.13 ಇಂದು ಇಂದಿನ ದಸರಾ ಮಹೋತ್ಸವದ ವಿಶೇಷತೆ ಎಂದರೆ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಪ್ರತಿ ಜಿಲ್ಲೆಯ ಅಥವಾ ರಾಜ್ಯದ ಪ್ರಮುಖ ಅಥವಾ ದೇಶದ ಪ್ರಮುಖ ಜಾನಪದ ಕಲೆಗಳು, ಐತಿಹಾಸಿಕ ರಾಜಮನೆತನಗಳ ಸ್ಥಳ ಮಹಿಮೆ, ಜಾನಪದ ಪ್ರಕಾರಗಳು, ನೃತ್ಯಗಳು, ರಾಜ್ಯದ ಮತ್ತು ದೇಶದ ನಾನಾ ಕಲೆಗಳು, ಭೌಗೋಳಿಕ ಅನನ್ಯತೆ, ಸಾಂಸ್ಕೃತಿಕ ಆಚರಣೆಗಳು, ಸಾಂಪ್ರಾದಾಯಿಕ ಕಲೆಗಳು, ಪ್ರವಾಸೋಧ್ಯಮದ ರಮಣೀಯ ಸ್ಥಳಗಳ ಬಗ್ಗೆ ಇವುಗಳ ಐಸಿರಿಯ ಸೋಬಗನ್ನು ಇಂದಿನ ದಸರಾದಲ್ಲಿ ಅನಾವರಣಗೊಳ್ಳುತ್ತಿದೆ. ಜೊತೆಗೆ ರಾಜ್ಯದ ಸಂಸ್ಕøತಿ ಮತ್ತು ದೇಶದ ಅಭಿವೃದ್ದಿಯಲ್ಲಿ ಕರ್ನಾಟಕದ ಸಂಸ್ಥೆಗಳ ಕೊಡುಗೆಗಳು, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ಆಧುನಿಕ ಯೋಜನೆಗಳು ಮತ್ತು ಅಭಿವೃದ್ದಿಯನ್ನು ಅನಾವರಣಗೊಳಿಸುವ ಬೃಹತ್ ವೇದಿಕೆಯಾಗಿದೆ. 2025ರ 415ನೇ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿಯೂ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಲಾಗಿದೆ. ಉದಾಹರಣೆಗೆ ಕೊಂಬು ಕಹಳೆ (ದಕ್ಷಿಣ ಕನ್ನಡ ಜಾನಪದ ಕಲೆ), ನಂದಿ ಕೋಲು (ಶೈವ ಸಂಸ್ಕøತಿ/ಜಾನಪದ ಕಲೆ), ಜಗ್ಗಲಗಿ ಮೇಳ (ಧಾರವಾಡ/ಜಾನಪದ ಕಲೆ), ಕುಡುಬಿ ಗುಮಟೆ ನೃತ್ಯ- ಕುಡುಬಿ ಜನಾಂಗ/ ಹೋಳಿ ಸಂಭ್ರಮದ ಭಾಗ-ಶಿವನ ಕೋಪವನ್ನು ತಣಿಸಲು ಶಿವನ ಆರಾಧನೆಯ ಭಾಗವಾಗಿ ಪ್ರಾರಂಭಿಸಿದ ಒಂದು ಜಾನಪದ ನೃತ್ಯ, ಜಡೆ ಕೋಲಾಟ- ಕೋಲಾಟದ ವಿಶಿಷ್ಟ ಪ್ರಕಾರ- ಕಲಾವಿದರು ಕೋಲುಗಳ ಬದಲು ಉದ್ದನೆಯ ಬಟ್ಟೆಗಳು ಅಥವಾ ಅಗ್ಗಗಳನ್ನು ಬಳಸುತ್ತಾರೆ. ಕರಬಲಿ ನೃತ್ಯ- ಕಲ್ಬೆಲಿಯಾ ಜನಾಂಗ ಪ್ರದರ್ಶಿಸುತ್ತದೆ.- ರಾಜಾಸ್ಥಾನದ ನೃತ್ಯ 2010ರಲ್ಲಿ ಯುನೆಸ್ಕೋ ಅಮೂರ್ತ ಪರಂಪರೆಗೆ ಸೇರಿಸಿದೆ. ದೊಣ್ಣೆ ವರಸೆ- ದೊಣ್ಣೆ ಬಳಸಿ ನಡೆಸಿರುವ ಒಂದು ಜಾನಪದ ಕಲಾಪ್ರಕಾರ , ಗಾರುಡಿ ಗೊಂಬೆ- ಕರಾವಳಿ ಜಿಲ್ಲೆಯಲ್ಲಿ ಆಚರಿಸುವ ಜಾನಪದ ನೃತ್ಯ, ಜೋಗತಿ ನೃತ್ಯ- ಉತ್ತರ ಕರ್ನಾಟಕದ ಜಾನಪದ ನೃತ್ಯ, ಕಂಗೀಲು ಕುಣಿತ- ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರಾದಾಯಿಕ ಜಾನಪದ ನೃತ್ಯ- ಮುಂಡಾಲ ಸಮುದಾಯ, ಕರಗ ತಪ್ಪಟಂ- ಪ್ರಸಿದ್ದ ಜಾನಪದ ಆಚರಣೆ, ದಾಲಿಪಟ, ಡಕ್ಕೆ ಕುಣಿತ- ನಾಗರಾಧನೆಯ ಒಂದು ರೂಪವಾಗಿದೆ. ಇದು ತುಳುನಾಡಿನ ಜಾನಪದ ನೃತ್ಯ ಪದ್ದತಿಯಾಗಿದೆ. ಹೂವಿನ ನೃತ್ಯ, ಹಗಲು ವೇಷ- ಕೊಪ್ಪಳ, ರಾಯಚೂರು ಜಿಲ್ಲೆಗಳ ಸಾಂಪ್ರದಾಯಿಕ ಕಲಾ ಪ್ರಕಾರ , ಡೊಳ್ಳು ಕುಣಿತ- ಕುರುಬ ಜನಾಂಗದ- ಸಾಂಪ್ರಾದಾಯಿಕ ಜನಪದ ನೃತ್ಯ ಪ್ರಕಾರ, ಸತ್ತಿಗೆ ಕುಣಿತ- ಭಾರತೀಯ ಶಾಸ್ರ್ತೀಯ ನೃತ್ಯ ಪ್ರಕಾರ, ಕರಂ ಗೋಲು ಕುಣಿತ, ಹಲಗೆ ಮೇಳ- ಉತ್ತರ ಕರ್ನಾಟಕದ ಜಾನಪದ ಸಂಗೀತ ಕಾರ್ಯಕ್ರಮ, ಸೋಮನ ಕುಣಿತ- ಕರ್ನಾಟಕದ ಒಂದು ಜಾನಪದ ಜನಪದ ಕಲೆ, ಹುಲಿ ವೇಷ- ಕರಾವಳಿ ಕರ್ನಾಟಕದ ಒಂದು ವಿಶಿಷ್ಟ ಜಾನಪದ ಕಲೆ, ಕೊಡವ ಒಕ್ಕಲಿಗರ ಕುಣಿತ, ಹಾಲಕ್ಕಿ ಕುಣಿತ- ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗ ಸಮುದಾಯದ ಸಾಂಪ್ರದಾಯಿಕ ಜಾನಪದ ನೃತ್ಯ, ಮಹಿಳಾ ವೀರಗಾಸೆ, ಸಿದ್ದಿ ಡಮಾಮಿ ನೃತ್ಯ- ಸಿದ್ದಿ ಜನಾಂಗದ ಒಂದು ಸಾಂಪ್ರದಾಯಿಕ ನೃತ್ಯ ಕರಡಿ ಮಜಲು- ಉತ್ತರ ಕರ್ನಾಟಕದ ಜಾನಪದ ಕಲೆ, ಕರಗ ನೃತ್ಯ- ವಹ್ನಿಕುಲ ಕ್ಷತ್ರೀಯ ಜನಾಂಗದ ವಿಶಿಷ್ಟ ಜಾನಪದ ನೃತ್ಯ, ಪೂಜಾ ಕುಣಿತ, ಹೆಜ್ಜೆ ಮೇಳ- ಉತ್ತರ ಕನ್ನಡದ ಗ್ರಾಮೀಣ ಪ್ರದೇಶದಲ್ಲಿ ಮೋಹರಂ ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಜಾನಪದ ನೃತ್ಯ, ಗೊರವರ ಕುಣಿತ- ಕರ್ನಾಟಕದ ವಿಶಿಷ್ಟ ಜಾನಪದ ಕಲೆ, ದಟ್ಟಿ ಕುಣಿತ- ಉತ್ತರ ಕರ್ನಾಟಕದ ಜಾನಪದ ನೃತ್ಯ, ಲೆಂಗಿ ನೃತ್ಯ- ಮಹಾರಾಷ್ಟ್ರದ ಸಾಂಪ್ರದಾಯಿಕ ನೃತ್ಯ, ತಮಟೆ, ನಗಾರಿ, ಕೋಲಾಟ, ಲಂಬಾಣಿ ನೃತ್ಯ, ಪುರವಂತಿಕೆ- ಶೈವ ಪರಂಪರೆ- ಪ್ರಾಚೀನ ಸಾಂಪ್ರದಾಯಿಕ ಜನಕಲೆ, ಉರುಮೆ ವಾದನ- ತಮಟೆ ವಾದ್ಯ- ದಕ್ಷಿಣ ಕರ್ನಾಟಕದ ದೇವತೆಗಳ ಉತ್ಸವಗಳು, ಜಾತ್ರೆಗಳಲ್ಲಿ ನುಡಿಸಲಾಗುತ್ತದೆ, ಸರಪಣಿ ನೃತ್ಯ, ಚಿಲಿಪಿಲಿ ಗೊಂಬೆ, ಬೀಸು ಕಂಸಾಳೆ, ಝಾಂಜ್ ಪಥಕ್- ಬಾಗಲಕೋಟೆ ಜಿಲ್ಲೆಯ ಜಾನಪದ ನೃತ್ಯ, ರಾಮಫಲಕ ನೃತ್ಯ, ಕರಗ ಕೋಲಾಟ, ಹಕ್ಕಿ ಪಿಕ್ಕಿ ನೃತ್ಯ, ಕಥಕ್ಕಳಿ ಗೊಂಬೆ, ಮರಗಾಲು, ತಪ್ಪಟಗುಲು, ಚಂಡೇವಾದನ, ಕಣಿ ವಾದನ, ತಮಟೆ ವಾದನ, ಬೇಡರ ವೇಷ, ಶಹನಾಯ್ ವಾದನ, ಗಾರುಡಿ ಗೊಂಬೆ, ರತ್ವಾ ಬುಡಕಟ್ಟು- ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ರತ್ವಾ ಬುಡಕಟ್ಟುಗಳು ನೃತ್ಯ ಪ್ರಕಾರ, ಸ್ಯಾಕ್ಸೋಫೋನ್ ಮುಂತಾದ ಕಲಾ ಪ್ರಕಾರಗಳು ಅನಾವರಣಗೊಳ್ಳುವ ಮೂಲಕ ನಮ್ಮ ಸಾಂಪ್ರಾದಾಯಿಕ ಸಾಂಸ್ಕೃತಿಕ ಹಿರಿಮೆಯನ್ನು ಕಲಾ ವೈಭವಗಳ ಪ್ರದರ್ಶನಗಳ ಮೂಲಕ ಗತವೈಭವವನ್ನು ಮರುಕಳಿಸುವ ಮೂಲಕ ನಮ್ಮ ಸಂಸ

Fields of Study & Subjects

Cultural and Mythological Studies Cultural and Sociopolitical Studies South Asian Studies and Diaspora

Publication details

Journal / source
Zenodo (CERN European Organization for Nuclear Research)
Publication date
30 March 2026
Language
KN