ಬರಗೂರು ರಾಮಚಂದ್ರಪ್ಪನವರ ಶಬರಿ ಕಾದಂಬರಿಯಲ್ಲಿನ ಕಾವ್ಯ ಸೊಬಗು.

Read full text Summarise with VIRAT
Authors: ಸಂತೋಷಕುಮಾರ್ ಬಿ.ಪಿ
Cited by: 0

Summary

No summary yet. VIRAT can read this paper and write a plain-language summary of its aim, methods, key findings and limitations.

Summarise with VIRAT Free to try with your Science Catalogs account.

Abstract

ಬರಗೂರು ರಾಮಚಂದ್ರಪ್ಪನವರು ಬಂಡಾಯ ಸಾಹಿತ್ಯದ ಹಿರಿಮೆಯನ್ನು ಕನ್ನಡ ಸಾಹಿತ್ಯಕ್ಕೆ ಸಾರಿದವರು. ಸಮಾನತೆ, ಸ್ವಾತಂತ್ರ್ಯ, ಆತ್ಮಾಭಿಮಾನ, ಹೋರಾಟ, ಶಿಕ್ಷಣ, ಸಹೋದರತೆ, ಪ್ರಶ್ನಿಸುವ ಮನೋಭಾವ, ವೈಚಾರಿಕಪ್ರಜ್ಞೆ ಮುಂತಾದ ಅಂಶಗಳು ಅವರ ಕಥೆ, ಕಾದಂಬರಿ, ಕವನ, ನಾಟಕ ಮುಂತಾದ ಪ್ರಕಾರಗಳಲ್ಲಿ ಕಾಣಸಿಗುತ್ತವೆ. ಬಂಡಾಯದ ಆಶಯಗಳು ಶಬರಿ ಕಾದಂಬರಿಯ ಪ್ರಾರಂಭದಿಂದ ಆಂತ್ಯದವರೆಗೂ ಕಂಡುಬರುತ್ತವೆ. ಉಳ್ಳವರು ತಮ್ಮ ಹಿತಕ್ಕಾಗಿ ಕೆಲವು ಆಚರಣೆಗಳನ್ನು ದೇವರ ಹೆಸರಲ್ಲಿ ಶೋಷಣೆಗೈದು ಅದರ ಉಪಯೋಗವನ್ನು ಪಡೆದು ಮುಗ್ಧ ಜನರನ್ನು ವಂಚಿಸುವ ಚಿತ್ರಣದೊಂದಿಗೆ ಅದರಿಂದ ಹೊರಬರಲು ಅನೇಕ ಪ್ರಯೋಗಗಳು ಈ ಕಾದಂಬರಿಯಲ್ಲಿ ಕಾಣಬಹುದು. ಬುಡಕಟ್ಟು ಜನಗಳ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸ್ಥಿತಿಗತಿಗಳೊಂದಿಗೆ ಸಹಜವಾಗಿ ಕಂಡು ಬರುವ ರಾಜಕೀಯ ಪಿತೂರಿಗಳು ಎಲ್ಲಾ ಕಾಲದಲ್ಲಿಯೂ ಇರುವಂತವು. ಮುಖ್ಯ ವೈಶಿಷ್ಟ್ಯಗಳೆಂದರೆ ಕಾದಂಬರಿಯಲ್ಲಿ ಬಳಕೆಯಾಗಿರುವ ಕಾವ್ಯಗಳು. ಮತ್ತೆ ಮತ್ತೆ ಓದಬೇಕೆನ್ನಿಸುವ ಕಾವ್ಯ ನುಡಿಗಳಲ್ಲಿ ಬರೆದಿರುವುದು ಈ ಕಾದಂಬರಿಯ ಬಹುಮುಖ್ಯ ವಿಶೇಷ ಸೌಂದರ್ಯವೆನ್ನಬಹುದು. ಈ ಕಾದಂಬರಿಯನ್ನು ಓದುವಾಗ ಪ್ರಾಚೀನ ಕಾಲದ ಚಂಪೂ ಶೈಲಿಯೂ ನೆನಪಾಗುತ್ತದೆ. ಹೊಸ ತಲೆಮಾರಿನ ಅಥವಾ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರಗೂರು ರಾಮಚಂದ್ರಪ್ಪನವರು ಮಾಡಿರುವ ಗದ್ಯಪದ್ಯ ಮಿಶ್ರಿತ ಈ ಪ್ರಯೋಗವು ಸೋಜಿಗವೆನಿಸುವಷ್ಟು ಸೊಗಸಾಗಿದೆ. ಕಾದಂಬರಿ ಓದುಗರಿಗೆ ಹೊಸ ಅನುಭವವನ್ನು ನೀಡುತ್ತದೆ. ಶಬರಿ ಕಾದಂಬರಿಯನ್ನು ಕಾವ್ಯಕಾದಂಬರಿ ಎನ್ನುವಷ್ಟರ ಮಟ್ಟಿಗೆ ಕಾವ್ಯಗಳು ಕಾದಂಬರಿಯನ್ನು ಆವರಿಸಿಕೊಂಡಿವೆ. ಬರಗೂರು ರಾಮಚಂದ್ರಪ್ಪನವರ ಸೃಜನಶೀಲ ಕಲೆಗೆ ಈ ಕಾದಂಬರಿ ಸೊಗಸಾದ ನಿದರ್ಶನ. ಬುಡಕಟ್ಟು ಹಾಗೂ ನಿರ್ಲಕ್ಷಿತರ ಬಗೆಗೆ ಅವರಿಗಿರುವ ಅಪಾರ ಕಾಳಜಿ, ಸಹಾನುಭೂತಿ ಮತ್ತು ಅವರನ್ನು ಮೇಲೆ ತರಬೇಕೆಂಬ ಸಾಮಾಜಿಕ ಕಳಕಳಿ ಇಲ್ಲಿ ನಿಚ್ಚಳವಾಗಿ ಕಾಣುತ್ತದೆ. ಕಡೆಗಣಿಸಲ್ಪಟ್ಟ ಹಾಗೂ ನಿರ್ಲಕ್ಷಿತ ಜನಾಂಗವೊಂದು ವಾಸಿಸುವ ಹಟ್ಟಿಯ ಬದುಕಿನ ಒಳಹೊರಗನ್ನು ವಾಸ್ತವ ನೆಲೆಯಲ್ಲಿ ಚಿತ್ರಿಸುವ ಈ ಕಾದಂಬರಿ ಬರಗೂರರ ಸಮಾಜವಾದಿ ಪ್ರಗತಿಶೀಲ ಧೋರಣೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಶಬರಿಯ ಮೂಲಕ ಬುಡಕಟ್ಟು ಜನಾಂಗದ ಸಂಘರ್ಷಾತ್ಮಕ ಸಂವೇದನೆಗಳನ್ನು ನೈಜವಾಗಿ ದಾಖಲಿಸಿದ್ದಾರೆ. ಆ ರಾಮಾಯಣದಲ್ಲೊಬ್ಬ ಶಬರಿ; ಈ ಕಾದಂಬರಿಯಲ್ಲೊಬ್ಬ ಶಬರಿ. ಇವರಿಬ್ಬರ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಕುರಿತು ಓದುಗರಲ್ಲಿ ಚಿಂತನೆಗಳು ಬರುವುದು ಸಹಜವಾದುದು. ಲೇಖಕರ ದೃಷ್ಟಿಯಲ್ಲಿ ಶಬರಿ ಒಂದು ಪಾತ್ರವಲ್ಲ; ಶಬರಿ ಒಂದು ರೂಪಕ. ಈ ರೂಪಕಕ್ಕೆ ಹಿನ್ನೆಲೆಯಾಗಿ ಬರುವುದು ಬುಡಕಟ್ಟು ಜನಾಂಗದ ಬವಣೆಯ ಬದುಕು. ಬುಡಕಟ್ಟಿನ ಬದುಕಿನ ವಿವರಗಳ ಮೂಲಕ ಚಲನಶೀಲ ಸಂಸ್ಕೃತಿಯ ಅಂತಃಶಕ್ತಿಯನ್ನು ಅನಾವರಣಗೊಳಿಸುವುದಾಗಿದೆ. ಜಮೀನ್ದಾರಿ ಪದ್ಧತಿ, ಭೂಸುಧಾರಣೆ ಕಾಯ್ದೆ, ಬುಡಕಟ್ಟು ಜನಾಂಗದ ತವಕ ತಲ್ಲಣಗಳು, ನೋವು, ನಿರಾಸೆಗಳನ್ನು ಬರಗೂರರು ಅದ್ಭುತವಾಗಿ ಪ್ರಕಟಿಸಿದ್ದಾರೆ. ಶಬರಿ ಎನ್ನುವ ಬುಡಕಟ್ಟು ಜನಾಂಗದ ಯುವತಿಯ ಮನಸ್ಸಿನ ಭಾವಗಳನ್ನು ಭಾಷೆಯಲ್ಲಿ ಸೆರೆಹಿಡಿಯುವ ಉನ್ನತ ಪ್ರಯತ್ನ ಇಲ್ಲಿದೆ. ಕಥಾ ನಾಯಕ ಸೂರ್ಯನ ಸಾಹಸ, ಏಳುಬೀಳುಗಳನ್ನು ಚಿತ್ರಿಸಿರುವ ಮಾದರಿ ಸಾಕಷ್ಟು ಕುತೂಹಲಕಾರಿಯಾಗಿದೆ. ವಾಸ್ತವ ನೆಲೆಗಳಲ್ಲಿ ಗ್ರಹಿಸುವುದಾದರೆ ಹಟ್ಟಿಯಲ್ಲಿ ಕಥಾ ನಾಯಕ ಸೂರ್ಯನ ಹೋರಾಟ, ಪ್ರೀತಿ, ಪ್ರೇಮ, ಮದುವೆ, ಕೊಲೆ ಮುಂತಾದ ಹಂತಗಳತ್ತ ಕಥನ ರೋಚಕವಾಗಿ ಮುಂದುವರೆಯುತ್ತದೆ. ಕಾದಂಬರಿಯಲ್ಲಿ ಕಥನದ ಆಕೃತಿಯ ಒತ್ತಡ ಹಾಗೂ ಪ್ರಭಾವಗಳು ಎಷ್ಟೋಂದು ತೀವ್ರವಾಗಿವೆಯೆಂದರೆ ಬುಡಕಟ್ಟು ಸಮುದಾಯದ ಜನಮುಖಿಯಾಗಿದ್ದ ನಾಯಕ ಚಂದ್ರನ ಕೊಲೆಯು ವ್ಯಕ್ತಿಯೊಬ್ಬನ ಸಾವಿನಂತೆ ಕೊನೆಗೊಳ್ಳುವುದಿಲ್ಲ. ಬದಲಾಗಿ ಅದು ಸಮಷ್ಟಿಯ ಚೈತನ್ಯದ ಭಾಗವಾಗುತ್ತದೆ. ಮುಂದಿನ ಕ್ರಾಂತಿಗೆ ಮುನ್ನುಡಿ ಬರೆಯುತ್ತದೆ. ಆಧುನಿಕ ಜಗತ್ತಿನ ಸಂಪರ್ಕದಿಂದ ಬಲುದೂರವಿದ್ದುದರ ಫಲವಾಗಿ ಈ ಜನರಿಗೆ ಶಿಕ್ಷಣ, ಸಂಸ್ಕೃತಿ, ಸದಾಚಾರ, ಸಂಪರ್ಕವೇ ಇರಲಿಲ್ಲ. ಬರಗೂರರ ಈ ಕಾದಂಬರಿಯಲ್ಲಿ ಇದುವರೆಗೆ ಭಾರತದ ಅಕ್ಷರ ಜಗತ್ತಿನಲ್ಲಿ ದಾಖಲಾಗದೆ ಉಳಿದ ಹಾಗೂ ಆಧುನಿಕ ನಾಗರಿಕ ಸಂಸ್ಕೃತಿಗೆ ಅಸ್ಪ್ರಶ್ಯರಂತೆ ಕಾಣುವ ಬುಡಕಟ್ಟು ಸಮುದಾಯದ ಅನಕ್ಷರಸ್ಥ ಪ್ರತಿನಿಧಿಗಳನ್ನು ಬರಗೂರು ರಾಮಚಂದ್ರಪ್ಪನವರು ನಾಯಕ-ನಾಯಕಿಯರನ್ನಾಗಿಸಿದ್ದಾರೆ. ಕಾದಂಬರಿಯ ನಾಯಕ ಸೂರ್ಯ ಕ್ರಾಂತಿಕಾರಿ ಯುವ ಹೋರಾಟಗಾರ. ಅವನು ಚಂದ್ರನ ಆಪ್ತ ಸ್ನೇಹಿತ. ಅವನು ಸೂರ್ಯನ ಪಕ್ಕ ಮತ್ತೊಂದು ಸೂರ್ಯನಾಗಿ ಉರಿಯುತ್ತಾನೆ. ಬಡವರ ಬಾಳಿಗೆ ಬೆಳಕು ತರಲು ಹಗಲಿರುಳು ಪ್ರಯತ್ನಿಸುತ್ತಾನೆ. ಬುಡಕಟ್ಟಿನ ಜನರಿಗಾಗಿ ರಾತ್ರಿ ಶಾಲೆ ಆರಂಭಿಸುತ್ತಾನೆ. ಸ್ವಾತಂತ್ರ್ಯ, ಸಮಾನತೆಗಾಗಿ ಹಂಬಲಿಸುತ್ತಾನೆ. ಶೋಷಣೆರಹಿತ ಸರ್ವಸಮಾನತೆಯ ಸಮಾಜವನ್ನು ನನಸಾಗಿಸಲು ನಿರಂತರ ಪ್ರಯತ್ನಿಸುತ್ತಾನೆ. ತನ್ನ ಸ್ನೇಹಿತ ಚಂದ್ರನ ಆಸೆ ಈಡೇರಿಸಲು ಅವನು ಹಟ್ಟಿಗೆ ಬರುತ್ತಾನೆ. ಸೂರ್ಯ ಆದಷ್ಟು ಬೇಗ ಶಬರಿಯೊಂದಿಗೆ ಸಲಿಗೆ ಬೆಳೆಸಿಕೊಳ್ಳುತ್ತಾನೆ. ತನ್ನೆಲ್ಲಾ ಮುಂದಿನ ಕಾರ್ಯಾಚರಣೆಗೆ ಶಬರಿಯೇ ಕೇಂದ್ರ ಶಕ್ತಿಯಾಗಬೇಕೆಂದು ಚಿಂತಿಸುತ್ತಾನೆ. ಶಬರಿಯ ಮೂಲಕ ತನ್ನ ಅಪೇಕ್ಷಿತ ಕ್ರಿಯೆಗೆ ಪ್ರಾರಂಭಿಕ ಗಟ್ಟಿನೆಲೆ ಒದಗಿಸಬಹುದೆಂದು ಭಾವಿಸುತ್ತಾನೆ. ಹೋರಾಟದ ಗುಣದಿಂದಲೇ ಅಲೆಮಾರಿಯಾದ ಆತ ಒಂದು ಹಂತದಲ್ಲಿ ಚಂದ್ರ-ನವಾಬ್ ಎಂಬ ತರುಣರ ನೆರವು ಹಾಗೂ ಶಬರಿಯ ಸಹಕಾರದೊಂದಿಗೆ ತನ್ನ ಹೋರಾಟವನ್ನು ಮುನ್ನಡೆಸುತ್ತಾನೆ. ಸೂರ್ಯ ಒಂದು ಕೊಲೆ ಕೇಸಿನಲ್ಲಿ ಸಿಲುಕಿಕೊಂಡಿದ್ದನು. ಪೋಲೀಸರು ಸೂರ್ಯನ ಹುಡುಕಾಟದಲ್ಲಿರುತ್ತಾರೆ. ಪೋಲೀಸರು ಸೂರ್ಯನನ್ನು ಒಂದು ದಿನ ಬಂಧಿಸಿ ನಗರಕ್ಕೆ ಕಕರೆದೊಯ್ಯುತ್ತಾರೆ. ಕೊನೆಗೆ ಉಳ್ಳವರ ಸಂಚಿನಿಂದ ಅವನು ಕೊಲೆಯಾಗುತ್ತಾನೆ. ಕಾದಂಬರಿಯ ನಾಯಕಿ ಶಬರಿ, ಇವಳು ತಿಮ್ಮರಾಯಿಯ ಮಗಳು. ಶಬರಿ ಹುಟ್ಟಿದ ಕೂಡಲೇ ತನ್ನ ತಾಯಿಯನ್ನು ಕಳೆದುಕೊಂಡು ತಂದೆ ತಿಮ್ಮರಾಯಿಯ ಆರೈಕೆಯಲ್ಲಿ ಬೆಳೆದು ದೊಡ್ಡವಳಾಗುವಳು. ಶಬರಿ ಬುದ್ದಿವಂತೆ ಅವಳ ಆತ್ಮವಿಶ್ವಾಸ, ಧೈರ್ಯ ಮೆಚ್ಚುವಂಥದ್ದು. ಶಬರಿ ಇತರರ ವಿಷಯದಲ್ಲಿ ಹೆಚ್ಚು ಕಾಳಜಿ ಹೊಂದಿದವಳು, ನಿಸರ್ಗದ ಚೆಲುವನ್ನು ಮನಸಾರೆ ಮೆಚ್ಚಿಕೊಳ್ಳುವವಳು, ಸುತ್ತಲಿನ ಜಗತ್ತನ್ನು ಆಸಕ್ತಿಯಿಂದ ಗಮನಿಸುತ್ತಾಳೆ. ಓದುವ ಸಹೃದುರಿಗೆ ಶಬರಿ ಬೆಂಕಿಯಷ್ಟೇ ಪರಿಶುದ್ಧಳು. ಜೀವನದ ಒತ್ತಡಗಳಿಂದ ಅವಳ ಮನಸ್ಸು ಇಬ್ಬರಿಗೆ ವಶವಾದರೂ ಇಚ್ಛೆಯಿಂದ ಪರಿಶುದ್ಧಳು. ಅವಳು ಅಧಿಕಾರಿಶಾಹಿ ಮತ್ತು ಊಳಿಗದ ಮನಸ್ಸುಗಳನ್ನು ಏಕಕಾಲಕ್ಕೆ ಧೈರ್ಯವಾಗಿ ಪ್ರತಿಭಟಿಸುತ್ತಾಳೆ. ಈ ಪ್ರತಿಭಟನೆಯಲ್ಲಿ ನ್ಯಾಯೋಚಿತ ಆಕ್ರೋಶವಿದೆ. ಅವಳು ಚಂದ್ರ-ಸೂರ್ಯಗಾಗಿ ಕಾಯುತ್ತಾಳೆ. ಅವಳ ದುರಂತ ಬದುಕು ಓದುಗರ ಹೃದಯ ಕರಗುವಂತೆ ಚಿತ್ರಿತವಾಗಿದೆ. ಕಾದಂಬರಿ ಅವಳ ಕೇಂದ್ರ ವ್ಯಕ್ತಿತ್ವದ ಸುತ್ತಲೆ ಸುತ್ತುತ್ತದೆ. ಕಾದಂಬರಿಯ ಬಹಳಷ್ಟು ಕ್ರಿಯೆಗಳಿಗೆ ಪ್ರಚೋದನೆ ಒದಗಿಸುವ ಶಕ್ತಿಯಾಗಿರುವ ಶಬರಿ, ಮಾನವ ಸಹಜ ಗುಣಗಳು ಅವಳಲ್ಲಿ ಪ್ರವರ್ತಿತವಾಗುವ ಕಾರಣ ಅವಳ ಪಾತ್ರ ಎಲ್ಲರ ಮನಸ್ಸನ್ನು ಬಹುಕಾಲ ಆಕರ್ಷಿಸುತ್ತದೆ. ಈ ಕಾದಂಬರಿಯಲ್ಲಿ ಒಡೆಯ ನರಸಿಂಹರಾಯ ಖಳನಾಯಕನಾಗಿದ್ದಾನೆ, ಅವನೊಡನೆ ರಾಮಾಜೋಯಿಸ, ಎಮ್.ಎಲ್.ಎ. ಧರ್ಮಯ್ಯ ಮತ್ತು ಪೋಲೀಸ್ ಇನಸ್ಪೆಕ್ಟರ್ ಸೇರಿಕೊಂಡು ಕೆಡುಕಿನ ಕೂಟದ ಮಿಶ್ರಣದಂತೆ ಕಾಣಿಸುತ್ತಾರೆ. ಸಮಾಜದ ಮೇಲ್ವರ್ಗದವರಿಂದ ನಡೆಯುವ ಶೋಷಣೆಗೆ ಯಾವುದೋ ಒಂದು ಹಂತದಲ್ಲಿ ಪ್ರತಿಭಟನೆ ಆರಂಭವಾಗಿ, ಬುಡಕಟ್ಟು ಜನಾಂಗವೂ ತನ್ನ ಪಾಲಿನ ಹಕ್ಕುಗಳಿಗೆ ಹೋರಾಡುವುದು ಈ ಕಾದಂಬರಿಯ ಎರಡನೆಯ ತಲೆಮಾರಿನಿಂದ ಮೂಡಿಬಂದಿದೆ. ಚಂದ್ರ, ಸೂರ್ಯ, ಶಬರಿ, ನವಾಬ್ ಮತ್ತು ಗೌರಿಯರು ಈ ಕಾಲದ ಪ್ರತಿನಿಧಿಯಾಗಿದ್ದಾರೆ. ಚಂದ್ರ ಓದಲು ಆರಂಭಿಸಿದ್ದು, ಶಬರಿಯನ್ನು ದೇವಸ್ಥಾನದಲ್ಲಿ ಬಿಡುವ ಸಂದರ್ಭದಲ್ಲಿ ವಿರೋಧಿಸಿದ್ದು ಇವೆಲ್ಲ ಈ ತಲೆಮಾರು ಮೇಲ್ವರ್ಗದವರಿಗೆ ತೋರಿದ ಪ್ರತಿಭಟನೆ ಬುಡಕಟ್ಟಿನ ಜನಕ್ಕೆ ಹೊಸತನ ತರುತ್ತದೆ. ಕ್ರಾಂತಿಯ ಕಿಡಿ ಅವರಲ್ಲಿ ಮೂಡುತ್ತದೆ. ಶಬರಜ್ಜಿಯ ಆಶೀರ್ವಾದವನ್ನು ಪಡೆದ ಶಬರಿ, ಬೆಂಕಿಯ ಚಂಡಿನಂತ ಚಂದ್ರ, ಶಬರಿ - ಸೂರ್ಯರ ಬಗ್ಗೆ ಅಕ್ಕರೆ ತೋರುವ ಮತ್ತು ಒಡೆಯನ ಕೆಡುಕನ್ನು ವಿರೋಧಿಸಿ ನಿಲ್ಲುವ ಹುಚ್ಚೀರ. ಪೂಜಾರಪ್ಪ, ಬುಡಕಟ್ಟಿನ ಜೀವನವೇ ತುಂಬಿಕೊಂಡ ತಿಮ್ಮರಾಯಿ, ಬಡತನದ ಎಲ್ಲ ಬವಣೆಗಳಿಟ್ಟುಕೊಂಡಿದ್ದ ಗೌರಿ, ಸೂರ್ಯನ ದಾರಿಯಲ್ಲಿ ನಡೆಯುವ ನವಾಬ್, ಗಂಡ ನರಸಿಂಹರಾಯ ಮಾಡುವ ಅನ್ಯಾಯವನ್ನು ಪ್ರಶ್ನಿಸುವ ಪಾರ್ವತಮ್ಮ ಈ ಎಲ್ಲಾ ಪಾತ್ರಗಳು ಓದುಗರನ್ನು ಕಾಡದಿರಲು ಸಾಧ್ಯವಿಲ್ಲ ಎನ್ನಬಹುದು. ಕಾದಂಬರಿಯ ಮುಖ್ಯ ಪಾತ್ರಗಳಾದ ಶಬರಿ, ಚಂದ್ರ, ಸೂರ್ಯ, ನವಾಬ್, ಗೌರಿ, ಹುಚ್ಚೀರ, ತಿಮ್ಮರಾಯಿ ಮುಂತಾದ ಪಾತ್ರಗಳ ತಲ್ಲಣಗಳನ್ನು, ಅವರ ಒಳ ಮನಸ್ಸಿನ ತಿಕ್ಕಾಟಗಳನ್ನು ಬರಗೂರು ರಾಮಚಂದ್ರಪ್ಪನವರು ಕಾವ್ಯಗಳನ್ನು ರಚಿಸಿ ಸಂದರ್ಭದ ಹಿನ್ನಲೆಯಲ್ಲಿ ಹಾಗೂ ಪಾತ್ರಗಳ ಆಂತರ್ಯವನ್ನು ಓದುಗರಿಗೆ ಮನಮುಟ್ಟುವಂತೆ ರಚನೆ ಮಾಡಿರುವುದನ್ನು ಕಾದಂಬರಿಯ ಕೊನೆಯವರೆಗೂ ಕಾಣಬಹುದು. ಚಂದ್ರ ಮತ್ತು ಶಬರಿಯ ಮದುವೆಯಾದ ಸಂದರ್ಭದಲ್ಲಿ ಸೂರ್ಯ ಬರುವುದನ್ನೇ ಕಾಯುತ್ತಿದ್ದ ಚಂದ್ರ, ಆ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪನವರು ಶಬರಿ ಕಾದಂಬರಿಯಲ್ಲಿ ಬಳಸಿದ ಕಾವ್ಯವಿದು. ಬೆಳದಿಂಗಳ ತಂಪಿನ ಬದಲು ಚಂದ್ರನಿಗೆ ಬಿಸಿಲಿನ ಬೇಗೆ. ಮೇಲ್ನೋಟಕ್ಕೆ ನಗೆಯಿದ್ದರೂ ಒಳಗೆಲ್ಲ ಹೊಗೆ. ಉಸಿರು ಕಟ್ಟುತ್ತಿರುವ ಮನಸ್ಥಿತಿ. ಹಗ್ಗದ ಕುಣಿಕೆಯಲ್ಲಿ ಸಿಕ್ಕಿಬಿದ್ದ ನಿರೀಕ್ಷೆಯ ನೋಟ. ಶಬರಿ ಮತ್ತು ಚಂದ್ರನ ಮದುವೆಯಾದ ನಂತರ ಸೂರ್ಯನ ಆಗಮನಕ್ಕಾಗಿ ಕಾಯುತ್ತಿದ್ದ ಚಂದ್ರ ತನ್ನ ಮನದಲ್ಲೇ ಕಳವಳಗೊಂಡಿದ್ದ. ಗೊಡ್ಡು ಸಂಪ್ರದಾಯವನ್ನು ಮುರಿಯಬೇಕಿದ್ದಂತಹ ಚಂದ್ರನಿಗೆ ಸೂರ್ಯನ ಸಹಾಯ ಬೇಕಾಗಿತ್ತು. ಶಬರಿ ಮತ್ತು ಚಂದ್ರನನ್ನು ಕೂರಿಸಿ ಆರತಿ ಬೆಳಗುವ ಆಚರಣೆಗಳು ಮತ್ತು ಮುಯ್ಯಿ ಕೊಡುವ ಆಚರಣೆಗಳೆಲ್ಲ ನಡೆಯುತ್ತಿದ್ದವು, ಈ ಸನ್ನಿವೇಶದಲ್ಲಿ ಸೂರ್ಯನಿಗಾಗಿ ಕಾಯುತ್ತಿದ್ದ ಚಂದ್ರನ ಮನಸ್ಸಿನಲ್ಲಾಗುತ್ತಿದ್ದ ತಲ್ಲಣಗಳನ್ನು ಬರಗೂರು ರಾಂಚಂದ್ರಪ್ಪನವರು ವ್ಯಕ್ತಪಡಿಸಿರುವುದನ್ನು ಕಾಣಬಹುದು. ಬುಡಕಟ್ಟಿನ ಹೆಣ್ಣು ಮದುವೆಯಾದ ನಂತರ ದೇವಸ್ಥಾನದಲ್ಲಿ ದೇವರ ಜೊತೆ ಒಂದು ರಾತ್ರಿ ಕಳೆಯಬೇಕೆಂಬ ಪದ್ದತಿಯ ವಿರುದ್ಧವಿದ್ದ ಚಂದ್ರನ ಸಹಾಯಕ್ಕೆ ಯಾರು ಬಾರದೆ ಇದ್ದಾಗ ಅಸಹಾಯಕನಾಗುತ್ತಾನೆ. ದೇವಸ್ಥಾನಕ್ಕೆ ಹಟ್ಟಿಯ ಜನರ ಜೊತೆ ತಾನು ಮದುವೆಯಾದ ಶಬರಿಯ ಜೊತೆ ಹೊರಡುವ ಸನ್ನಿವೇಶದ ಶಬರಿ ಕಾದಂಬರಿಯ ಬರಗೂರರ ಈ ಕಾವ್ಯರಚನೆಯನ್ನು ಕಾಣಬಹುದು. ಚಂದ್ರನ ಒಳಗೆ ಕೆಂಡದುಂಡೆಗಳ ಚಂಡಿನಾಟ. ಶಬರಿಯದು ಭಾವ ಬಿತ್ತಿದ ಯಾಂತ್ರಿಕ ನಡಿಗೆ. ಆಗಾಗ್ಗೆ ಗೌರಿಯತ್ತ ನೋಟ. ದೇವರಗುಡಿ ಬಂದೇ ಬಿಟ್ಟಿತು. ಮದುವೆಯಾದ ಬುಡಕಟ್ಟಿನ ಪ್ರತಿ ಹೆಣ್ಣು ಒಂದು ರಾತ್ರಿ ದೇವರೊಂದಿಗೆ ಕಳೆಯಬೇಕು. ಪದ್ಧತಿಯನ್ನು ಚಂದ್ರನು ವಿರೋಧಿಸುತ್ತಿದ್ದನು. ಅವನು ಮದುವೆಯಾದ ಹೆಣ್ಣನ್ನು ಯಾವ ದೇವರ ಬಳಿಯು ಕಳಿಸಲಾರೆ ಎಂಬ ಮನೋಭಾವ ಬೆಳೆಸಿಕೊಂಡಿದ್ದನು. ಆದರೆ ಇವನ ಚಿಂತನೆಯನ್ನು ಬುಡಕಟ್ಟಿನ ಎಲ್ಲರೂ ವಿರೋಧಿಸುವಂತಾಯಿತು. ಏಕೆಂದರೆ ದೇವರಿಗೆ ಎದುರಾದರೆ ರಕ್ತಕಾರಿ ಸಾಯುತ್ತಾರೆ ಎಂಬ ನಂಬಿಕೆಯನ್ನು ಜೋಯಿಸರು ಮತ್ತು ನರಸಿಂಹರಾಯಪ್ಪನು ಹುಟ್ಟಿಸಿದ್ದರು. ಚಂದ್ರನು ಆ ಸಂದರ್ಭದಲ್ಲಿ ಅಸಹಾಯಕನಾಗುತ್ತಾನೆ. ಹುಚ್ಚೀರ ಮತ್ತು ಇನ್ನಿತರ ಜನರು ಗುಡಿಯ ಕಡೆ ಹೊರಡುವ ಸನ್ನಿವೇಶದಲ್ಲಿ ದೇವರ ಗುಡಿಯ ಸನಿಹಕ್ಕೆ ಬರುವ ಸಂದರ್ಭದಲ್ಲಿ ಮದುವೆಯಾದ ಗಂಡು-ಹೆಣ್ಣು ಪಕ್ಕದಲ್ಲೇ ಹುಚ್ಚೀರ; ಗೌರಿ ಜೊತೆಗೆ ಪೂಜಾರಪ್ಪ-ತಿಮ್ಮರಾಯಿ ನಡೆದು ಬರುವ ಸಂದರ್ಭ. ಪೂಜಾರಪ್ಪನಲ್ಲಿ ವಿಜಯದ ಹೆಮ್ಮೆ, ವಿಕೃತ ಉತ್ಸಾಹ, ತಿಮ್ಮರಾಯಿಯಲ್ಲಿ ತುಂಬಿದೆ ತಳಮಳ ಮಾತೇ ಇಲ್ಲದ ಖಿನ್ನತೆ. ಅಲ್ಲಿದ್ದ ಚಂದ್ರ, ಶಬರಿ ಮತ್ತು ಹುಚ್ಚೀರನ ಮುಖಮನದ ತಳಮಳವನ್ನು ಕಾಣಬಹುದಾಗಿದೆ. ಚಂದ್ರನ ಕೊಲೆಯಾದ ನಂತರ ನರಸಿಂಹಪ್ಪ ಮತ್ತು ಜೋಯಿಸರು ಹಟ್ಟಿಗೆ ಬಂದು ಹುಚ್ಚೀರನನ್ನು ಹಿಡಿದು ತಳಿಸುವ ಸಂದರ್ಭದಲ್ಲಿ ಚಂದ್ರನನ್ನು ಕಳೆದುಕೊಂಡ ನೋವಿನಲ್ಲಿದ್ದ ಸಂದರ್ಭದಲ್ಲಿ ಕಾದಂಬರಿಯಲ್ಲಿನ ಈ ಕೆಳಗಿನ ಕಾವ್ಯಬಳಕೆ. ಶಬರಿಯೊಳಗೆ ಸಂಕಟದ ಸರೋವರ, ಅಲ್ಲಿರುವ ನೀರಿಗೆ ಬೆಂಕಿಯ ಬಿಸಿ. ಬಿಸಿಯಲ್ಲಿ ಬೆಂದ ಹೂಗಳು. ಕರುಕಲಾಗಿ ಕಂಗೆಟ್ಟ ಎಲೆಗಳು, ಇದ್ದಲ್ಲೇ ಇರುವ ಕುದಿವ ಸರೋವರ. ಅಂದಿನ ದಿನ ಗುಡಿಯೊಳಗೆ ನಡೆದ ನಡೆಯುತ್ತಿದ್ದಂತಹ ಒಂದು ಅಸಭ್ಯ ವರ್ತನೆಗೆ ಎದುರಾಗಿದ್ದು ಚಂದ್ರ. ಅವನ ಜೊತೆ ಹುಚ್ಚೀರನು ಹೋಗಿದ್ದ ಅವನಿಗೂ ಅಲ್ಲಿ ಒದೆ ಬಿದ್ದಿದ್ದವು, ಚಂದ್ರನ ಜೊತೆ ಇವನನ್ನು ಕಂಡಿದ್ದ ಗೌಡರು ಮತ್ತು ಅವನ ಹಿಂಬಾಲಕರು ಗೌಡ ಹಟ್ಟಿಗೆ ಬಂದು ನೀನೇಕೆ ಗುಡಿಯ ಬಳಿ ಬಂದಿದ್ದೆ ಎಂದು ರೇಗಾಡಿದಾಗ. ಮತ್ತೆ ತಳಿಸಲು ಬಂದಾಗ ಅವನು ತಪ್ಪಿಸಿಕೊಂಡು ಓಡಿ ಹೋಗಿದ್ದ ಆಗ ಗೌಡನ ಬಂಟರು ಅವನನ್ನು ಹಿಡಿದು ತಂದು ಮತ್ತೆ ತಿಳಿಸಿದ್ದರು. ಪೂಜಾರಪ್ಪನು ಸಹ ಹೊಡೆದಿದ್ದ, ತಿಮ್ಮರಾಯ ರೇಗಾಡಿದ್ದ. ಈ ಸಂದರ್ಭದಲ್ಲಿ ಶಬರಿಯ ಮನದಲ್ಲಾಗುತ್ತಿದ್ದಂತಹ ನೋವು ಮತ್ತು ತಲ್ಲಣಗಳನ್ನು ಕಾದಂಬರಿಕಾರರು ತಿಳಿಸಿದ್ದಾರೆ. ಸೂರ್ಯ ಬುಡಕಟ್ಟು ಜನರಲ್ಲಿ ಬಿತ್ತಿದ ಅಕ್ಷರದ ಬೆಳೆಯು ಚಿಗುರೊಡೆದ ಸಮಯವೆನ್ನಬಹುದು. ಶಬರಿ ತಾನೂ ಬರವಣಿಗೆ ಕಲಿತು, ಬೇರೆಯವರಿಗೆ ಕಲಿಸಿಕೊಡುತ್ತಿದ್ದ ಸಮಯದಲ್ಲಿ ಕಾದಂಬರಿಕಾರರು ಏನಾದರು ಹೊಸತು ಕಲಿತ ಮನಸುಗಳ ಖುಷಿ ಅನುಭವವನ್ನು ಈ ರಚನೆಯನ್ನು ತಿಳಿಸಿದ್ದಾರೆ. ರೆಕ್ಕೆ ಬಿಚ್ಚಿದ ನವಿಲು.. ಅವುಗಳಲ್ಲಿ ಹೊಳೆಯುವ ಕಣ್ಣುಗಳು. ಬಣ್ಣ ಬಣ್ಣಗಳಲ್ಲಿ ನೆರೆದ ನೋಟ, ಸೂರ್ಯ ಹಟ್ಟಿಯ ಎಲ್ಲರನ್ನೂ ಅಕ್ಷರಸ್ಥರನ್ನಾಗಿ ಮಾಡುವ ಉದ್ದೇಶ, ಆ ಯೋಜನೆ ಕಾರ್ಯರೂಪಕ್ಕೆ ಬರುವ ಸಮಯ. ಎಲ್ಲರೂ ತಾವು ಕೆಲಸ ಮಾಡುವ ಸ್ಥಳದಲ್ಲಿ ಅಭ್ಯಾಸ ಮಾಡಲು ಪ್ರಾರಂಭ ಮಾಡಿದರು. ಶಬರಿ ಒಂದು ಸ್ಲೇಟಿನಲ್ಲಿ ಸೂರ್ಯನಿಂದ ಬರೆಯಸಿಕೊಂಡು ಬಂದಳು ಜೊತೆಗೆ ಇನ್ನೊಂದು ಸ್ಲೇಟನ್ನು ಸಾವಿತ್ರಮ್ಮನಿಗೆ ಕೊಟ್ಟಳು ಸಾವಿತ್ರಮ್ಮ ಹೊಲದ ಬದುವಿನ ಮೇಲಿದ್ದ ಮರದ ಕೆಳಗೆ ಕೂತು ಸ್ಲೇಟನ್ನು ನೋಡಿಕೊಂಡು ಬರೆಯತೊಡಗಿದಳು ಆಗದಿದ್ದಾಗ ಶಬರಿಯನ್ನು ಕರೆದು ಶಬರಿ ಬರೆಯುವುದನ್ನು ನೋಡಿಕೊಂಡು ಬರೆದಳು. ಈ ಸನ್ನಿವೇಶವು ನಾವು ಶಾಲೆಯಲ್ಲಿ ಯಾವುದಾದರೂ ಒಂದು ಹೊಸ ವಿಷಯ ಕಲಿತಾಗ ಆಗುವ ಖುಷಿಯು ಈಗ ಅವರಲ್ಲಿ ಆದದ್ದು. ತಮ್ಮ ಭಾವನೆಗಳನ್ನು ಸಂತೋಷಪಡುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಚಂದ್ರನ ಕೊಲೆಯಾದ ದೇವಸ್ಥಾನವನ್ನು ನೋಡಿ ಬಂದ ಸೂರ್ಯನನ್ನು ಕಾಡುವ ಚಂದ್ರನ ಕೊಲೆಗೆ ಸಾಕ್ಷಿಯಾಗಿದ್ದ ಪುರಾತನ ಸ್ಮಾರಕ. ಮತ್ತೊಂದೆಡೆಯಲ್ಲಿ ಬುಡಕಟ್ಟಿನವರನ್ನು ಎರಡನೇ ದರ್ಜೆಯ ಜನರನ್ನಾಗಿಸಿದ ಹುನ್ನಾರದ ಯೋಚನೆಗಳು ಸೂರ್ಯನ ತಲೆ ಹೊಕ್ಕುತ್ತವೆ. ಈ ಸಂದರ್ಭದಲ್ಲಿ ಕಾದಂಬರಿಯಲ್ಲಿ ವ್ಯಕ್ತವಾಗಿರುವ ಕಾವ್ಯ. ಕಣ್ಣುಗಳಲ್ಲಿ ಖಿನ್ನತೆ; ಕಾಡಿಸುವ ಪರಕೀಯತೆ. ಆಗ ಅವನಿಗೆ ಅನ್ನಿಸುತ್ತದೆ- ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು; ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು!' ಚಂದ್ರನ ಶವ ಬಿದ್ದ ಆ ದೇವಸ್ಥಾನವನ್ನು ನೋಡುವಂತಹ ಹಂಬಲದಲ್ಲಿದ್ದ ಸೂರ್ಯನು, ದೇವಸ್ಥಾನವನ್ನು ತೋರಿಸಿದ ಜೋಯಿಸರು ದೇವಸ್ಥಾನದ ಬಗೆಗಿನ ಪ್ರಾಚೀನತೆ ಅದರ ಪಾವಿತ್ರತೆ ಮುಂತಾದವುಗಳ ಬಗ್ಗೆ ತಿಳಿಸಿದ್ದು. ನಂತರ ಚಂದ್ರನ ಸಾವು, ಅಲ್ಲಿ ನಡೆದಿರಬಹುದಾದ, ನಡೆಯಬಹುದಾದ ಶೋಷಣೆಗಳನ್ನು ಯೋಚಿಸುತ್ತಾ ಸೂರ್ಯನ ಹೊರ ಬಂದಾಗ ಅವನನ

Fields of Study & Subjects

Poetry Analysis and Criticism Literature: history themes analysis South Asian Studies and Diaspora

Publication details

Journal / source
Zenodo (CERN European Organization for Nuclear Research)
Publication date
31 March 2026
Language
KN